UPI NEW RULES: ಜ.01 ರಿಂದ UPI ಅಪ್ಲಿಕೇಶನ್ಗಳ ನಿಯಮಗಳು ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ
ಸ್ಮಾರ್ಟ್ ಫೋನ್ ಬಳಕಿದಾರರಿಗಾಗಿ ತರಲಾದ, UPI ಸೇವೆಯು UPI123Pay ನ ವಹಿವಾಟಿನ ಮಿತಿಯನ್ನು ಹೆಚ್ಚಿಸಲು RBI ನಿರ್ಧಾರ ಮಾಡಿದೆ. ಹೊಸ ವರ್ಷದಂದು ಗ್ರಾಹಕರು UPI123Pay ಮೂಲಕ 5000 ರೂ. ಬದಲಿಗೆ ಒಂದು ದಿನದಲ್ಲಿ 10,000 ರೂ. ವರೆಗೆ ಪಾವತಿ ಮಾಡಲು ಸಾಧ್ಯವಾಗುತ್ತದೆ, ಇದರ ಬಗ್ಗೆ ಮಾಹಿತಿಯು ಕೆಳಗಿನಂತಿವೆ.
UPI ಪಾವತಿಯನ್ನು ಮಾಡುವವರಿಗೆ, 01 ಜನವರಿ 2025 ರಿಂದ ವರ್ಷವೂ ಬದಲಾಗುವುದಲ್ಲದೆ, ನಿಯಮಗಳಲ್ಲಿಯೂ ಹಲವು ಬದಲಾವಣೆಗಳು ಬರಲಿದೆ, UPI ಮಾಡುವಲ್ಲಿ ಬಳಕೆದಾರರಿಗೆ ಹೆಚ್ಚಿನ ಅನುಕೂಲತೆಗಳನ್ನು ಒದಗಿಸಲು, RBI ಹಳೆಯ ನಿಯಮಗಳನ್ನು ಬದಲಾಯಿಸುವ ತೀರ್ಮಾನಕ್ಕೆ ಬಂದಿದೆ. RBI ಯುಪಿಐ ನ ಹಲವಾರು ವಿಧಾನಗಳಿಗೆ ಹಣಕಾಸು ಮಹಿವಾಟಿನ ಮಿತಿಗಳನ್ನು ಹೆಚ್ಚಿಸಲು ನಿರ್ಧಾರ ಮಾಡಿದೆ, ಇದು 01 ಜನವರಿ 2025 ರಿಂದ ಜಾರಿಗೆ ಬರಲಿದೆ, ಬಳಕೆದಾರರು ಈಗ UPI ಮೂಲಕ ಮೊದಲಿಗಿಂತ ಹೆಚ್ಚಿನ ಹಣವನ್ನು ಪಾವತಿ ಮಾಡಲು ಸಾಧ್ಯವಾಗುತ್ತದೆ, ಯುಪಿಐ(UPI) ಗೆ ಸಂಬಂಧಿಸಿದ ಹೊಸ ನಿಯಮಗಳ ಪ್ರಮುಖ ಮಾಹಿತಿಯು ಎಲ್ಲಿದೆ.
UPI123ಪೇ ಮಿತಿಯನ್ನು ಹೆಚ್ಚಿಸಲಾಗಿದೆ:
ಸ್ಮಾರ್ಟ್ ಫೋನ್ ಬಳಕಿದಾರರಿಗಾಗಿ ತರಲಾದ, UPI ಸೇವೆಯು UPI123Pay ನ ವಹಿವಾಟಿನ ಮಿತಿಯನ್ನು ಹೆಚ್ಚಿಸಲು RBI ನಿರ್ಧಾರ ಮಾಡಿದೆ. ಇದಕ್ಕಾಗಿ 31 ಡಿಸೆಂಬರ್ 2024 ರ ವರೆಗೆ ಗಡುಗು ನೀಡಲಾಗಿತ್ತು, ಈ ಗಡುವನ್ನು ವಿಸ್ತರಿಸದಿದ್ದರೆ ಹೊಸ ವರ್ಷದಂದು ಗ್ರಾಹಕರು UPI123Pay ಮೂಲಕ 5000 ರೂ. ಬದಲಿಗೆ ಒಂದು ದಿನದಲ್ಲಿ 10,000 ರೂ. ವರೆಗೆ ಪಾವತಿ ಮಾಡಲು ಸಾಧ್ಯವಾಗುತ್ತದೆ.
ಗ್ರಾಹಕರು UPI123Pay ನ ಮೂಲಕವಾಗಿ ಇತರ ಯುಪಿಐ ಬಳಕೆದಾರರಿಗೆ 10,000 ರೂ. ವರೆಗೆ ಕಳುಹಿಸಲು ಸಾಧ್ಯವಾಗುತ್ತದೆ, ಅದಾಗಿಯೂ ಪ್ರಸ್ತುತ G-Pay, Paytm, Phone PE ಗಳಂತಹ ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಗಳ ಮೂಲಕ ಯುಪಿಐ ಪಾವತಿ ಮಾಡುವ ವಹಿವಾಟಿನ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ, ಬಳಕೆದಾರರು ಒಂದು ದಿನದಲ್ಲಿ ಗರಿಷ್ಠವಾಗಿ 01 ಲಕ್ಷದವರೆಗೆ ಯುಪಿಐ ವಹಿವಾಟು ನಡೆಸಬಹುದು. ವೈದ್ಯಕೀಯ ಹಾಗೂ ಇತರೆ ತುರ್ತು ಪರಿಸ್ಥಿತಿ ಗಳಿಗೆ ಮಿತಿಯನ್ನು 5 ಲಕ್ಷದವರೆಗೆ ಹೆಚ್ಚಿಸಲಾಗಿದೆ.
11 ತಿಂಗಳು, 15,547 ಕೋಟಿ ವಹಿವಾಟು:
ಹಣಕಾಸು ಇಲಾಖೆಯು ಹೊರಡಿಸಿದ ಮಾಹಿತಿಯ ಪ್ರಕಾರ ಈ ವರ್ಷ ಅಂದರೆ ಜನವರಿ 2024 ರಿಂದ ನವೆಂಬರ್ ವರೆಗೆ 11 ತಿಂಗಳಲ್ಲಿ UPI ಮೂಲಕ ಒಟ್ಟು ರೂ.15,547 ಕೋಟಿ ವಹಿವಾಟು ನಡೆದಿದೆ. ಇವುಗಳಿಂದ 223 ಲಕ್ಷ ಕೋಟಿ ಹಣ ವರ್ಗಾವಣೆ ಆಗಿದೆ ಎನ್ನಲಾಗಿದೆ.
ಭಾರತದಲ್ಲಿ ರೂಪಿಸಲಾಗಿರುವ UPI ಪಾವತಿ ವ್ಯವಸ್ಥೆಯು ವಿಶ್ವದಲ್ಲಿಯೇ ವಿಶೇಷವಾಗಿದೆ, ಹಲವಾರು ದೇಶಗಳು UPI ಅನ್ನು ತಮ್ಮಲ್ಲಿ ಅಳವಡಿಕೆ ಮಾಡಲು ಅಸಕ್ತವಾಗಿದೆ, ಭೂತಾನ್, ಸಿಂಗಾಪುರ್, UAE, ಶ್ರೀಲಂಕಾ, ನೇಪಾಳ, ಫ್ರಾನ್ಸ್ ಮತ್ತು ಮಾರಿಷಸ್ ಏಳು ದೇಶಗಳಲ್ಲಿ UPI ಅಳವಡಿಕೆ ಆಗಿದೆ, ಈ 7 ದೇಶಗಳಲ್ಲಿರುವ ಜನರು ಜನರು ಭಾರತಕ್ಕೆ UPI ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯ.