UAS DHARWAD RECRUITMENT| ನರ್ಸರಿ ಶಾಲಾ ಶಿಕ್ಷಕರ ನೇಮಕಾತಿ 2025
UAS DHARWAD RECRUITMENT:
ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನರ್ಸರಿ ಸ್ಕೂಲ್ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಆಸಕ್ತಿ ಹೊಂದಿರುವ ಅರ್ಹ ವಿದ್ಯಾರ್ಥಿಗಳು ಈ ಹುದ್ದೆಗಳಿಗೆ ಅಗತ್ಯವಿರುವ ದಾಖಲೆಗಳೊಂದಿಗೆ ಏಪ್ರಿಲ್ 5 ಬೆಳಿಗ್ಗೆ 10.30 ರ ಸುಮಾರಗೆ ವಾಕ್ ಇನ್ ಇಂಟರ್ವ್ಯೂಗೆ ಹಾಜರಾಗಬಹುದು, ಹುದ್ದೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ.
ಹುದ್ದೆಯ ವಿವರಗಳು;
ಇಲಾಖೆಯ ಹೆಸರು | ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ |
ಹುದ್ದೆಯ ಹೆಸರು | ನರ್ಸರಿ ಶಾಲಾ ಶಿಕ್ಷಕರು |
ಉದ್ಯೋಗ ಸ್ಥಳ | ಧಾರವಾಡ |
ವೇತನ ಶ್ರೇಣಿ | ₹10,000 ರಿಂದ ₹14,000 |
ಆಯ್ಕೆಯ ವಿಧಾನ | ವಾಕ್ ಇನ್ ಇಂಟರ್ವ್ಯೂ |
ಸ್ಥಳ | ಶಿಕ್ಷಣಾಧಿಕಾರಿಗಳ ಕಚೇರಿ ಸಮುದಾಯ ವಿಜ್ಞಾನ ಕಾಲೇಜು ಧಾರವಾಡ |
ಕೊನೆಯ ದಿನಾಂಕ | 5 ಏಪ್ರಿಲ್ 2025 |
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು;
ನರ್ಸರಿ ಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗೆ ನೀಡಲಾದ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು;
ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ M.HSc, B.HSc ಅಥವಾ B.SC ಪದವಿಯನ್ನು ಪಡೆದಿರಬೇಕು.
ಕೆಲಸದ ಬಗ್ಗೆ ಆಸಕ್ತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಕ್ಕಳೊಂದಿಗೆ ಕೆಲಸ ಮಾಡುವ ತಾಳ್ಮೆ ಆಸಕ್ತಿ ಹಾಗೂ ಅನುಭವವಿದ್ದರೆ ಅಂಥವರನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಆಯ್ಕೆಯ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಾಕ್ -ಇನ್ -ಇಂಟರ್ವ್ಯೂ ಮೂಲ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ಏಪ್ರಿಲ್ 5 ರಂದು ಬೆಳಿಗ್ಗೆ 10.30 ಕ್ಕೆ ನೇರವಾಗಿ ಸಂದರ್ಶನ ಸ್ಥಳಕ್ಕೆ ಹಾಜರಾಗಬೇಕು,
- ಅಗತ್ಯವಿರುವ ಮೂಲ ದಾಖಲೆ ಹಾಗೂ ಫೋಟೋ ಕಾಫಿಯನ್ನು ತೆಗೆದುಕೊಂಡು ಹೋಗಿರಬೇಕು,
- ಸಂದರ್ಶನದಲ್ಲಿ ಭಾಗವಹಿಸಬೇಕು.
ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ನರ್ಸರಿ ಶಾಲಾ ಶಿಕ್ಷಕರ ಹುದ್ದೆಗೆ 5 ಏಪ್ರಿಲ್ 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ, ಅವಕಾಶವನ್ನು ಕಳೆದುಕೊಳ್ಳಬೇಡಿ, ಈ ಹುದ್ದೆಗೆ ಆಯ್ಕೆಯಾಗಿ ಸರ್ಕಾರಿ ಉದ್ಯೋಗಿಗಳಾಗಿ ಸೇವೆಯನ್ನು ಸಲ್ಲಿಸಬಹುದು.