Tv Channels ಟಿವಿ ಪ್ರಿಯರಿಗೆ ಬಿಗ್ ಶಾಕ್! ಫೆ.01 ರಿಂದ ಈ ಚಾನಲ್ ಗಳು ಬಲು ದುಬಾರಿ; ಇಲ್ಲಿದೆ ಸಂಪೂರ್ಣ ಮಾಹಿತಿ

Tv Channels ಟಿವಿ ಪ್ರಿಯರಿಗೆ ಬಿಗ್ ಶಾಕ್! ಫೆ.01 ರಿಂದ ಈ ಚಾನಲ್ ಗಳು ಬಲು ದುಬಾರಿ; ಇಲ್ಲಿದೆ ಸಂಪೂರ್ಣ ಮಾಹಿತಿ

ಫೆಬ್ರವರಿ 01 ರಿಂದ ಟಿವಿ ನೋಡುವುದು ಬಲು ದುಬಾರಿ ಆಗಲಿದೆ, ಇದಕ್ಕೆ ಪ್ರಮುಖ ಕಾರಣವೆಂದರೆ ದೇಶದ ಎಲ್ಲಾ ಟಿವಿ ಚಾನಲ್ ಗಳು ತಮ್ಮ ಮೂಲ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ, ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ.

WhatsApp Group Join Now
Telegram Group Join Now

ಫೆಬ್ರವರಿ 01 ರಿಂದ ಎಲ್ಲಾ ಟಿವಿ ಚಾನಲ್ ಗಳು ತಮ್ಮ ಚಾನಲ್ಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ, ಈ ಹಿನ್ನೆಲೆಯಿಂದ ಟಿವಿ ಗ್ರಾಹಕರಿಗೆ ಟಿವಿ ನೋಡುವುದು ಬಲು ದುಬಾರಿಯಾಗುತ್ತಿದೆ. ನೀವು ಇನ್ನು ಮುಂದೆ ಟಿವಿ (DTH) ಬಳಸಲು ಪ್ರತಿ ತಿಂಗಳು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. JIO STAR ಚಾನಲ್ ನ ಪ್ಯಾಕ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ, ವಾಸ್ತವವಾಗಿ ಪ್ರಮುಖ ಟಿ ವಿ ಚಾನಲ್ ಗಳ ಪ್ರಸಾರಕರು ಚಾನಲ್ ಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ, ಅಂತಹ ಸಂದರ್ಭದಲ್ಲಿ ನೀವು ಪಾವತಿಸಿದ DTH ಚಾನಲ್ ಅನ್ನು ರಿಚಾರ್ಜ್ ಮಾಡಿದರೆ ನೀವು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ..

ದೇಶದಲ್ಲಿ OTT ಪ್ಲ್ಯಾಟ್ ಫಾರ್ಮಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಟಿವಿ ಚಾನಲ್ ಗಳ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಲಾಗಿದೆ, ಅಷ್ಟಕ್ಕೂ ಬೆಲೆ ಏರಿಕೆ ಮಾಡುತ್ತಿರಲು ಒಂದು ಕಾರಣವೂ ಕೂಡ ಇದೆ, ಟಿವಿ ಪ್ರಸಾರಕರು ವಿಷಯದ ವೆಚ್ಚವು ನಿರಂತರವಾಗಿ ಹೆಚ್ಚುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ, ಆದರೆ ಜಾಹೀರಾತುಗಳ ಆದಾಯವು ಕೂಡ ಕುಸಿಯುತ್ತಿದೆ. ಅಂತಹ ಸಮಯದಲ್ಲಿ ಪ್ರಸಾರಕರು ಜಂಟಿಯಾಗಿ ಟಿವಿ ಚಾನಲ್ಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಘೋಷಿಸಿದ್ದಾರೆ, ವಿಷಯಗಳ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ತಮಗೆ ಕಷ್ಟವಾಗುತ್ತಿದೆ ಎನ್ನುವುದು ಪ್ರಸಾರಕರ ಮಾತಾಗಿದೆ, ಅಷ್ಟೇ ಅಲ್ಲದೆ ಕಂಪನಿಗಳ ನಿರ್ವಹಣಾ ವೆಚ್ಚವು ಕೂಡ ಹೆಚ್ಚುತ್ತಿರುವುದು ಇನ್ನೊಂದು ಕಾರಣವಾಗಿದೆ.

ದೇಶದ ಪ್ರಮುಖ ಪ್ರಸಾರಕರಾದ ಎಕನಾಮಿಕ್ಸ್ ಟೈಮ್ಸ್ ವರದಿಯ ಪ್ರಕಾರ, Sony pictures network India  ಮತ್ತು Zee entertainment enterprises ಚಾನಲ್ ಪ್ಯಾಕೆಜ್ಗಳ ಬೆಲೆಯಲ್ಲಿ 10% ಕ್ಕಿಂತ ಹೆಚ್ಚು ಹೆಚ್ಚಳವನ್ನು ಘೋಷಿಸಿದೆ. ಅಲ್ಲದೆ Jio star ಕೂಡ ತನ್ನ ಚಾನೆಲ್ ಪ್ಯಾಕೇಜ್ ನ ಬೆಲೆಯಲ್ಲಿ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ. ಅಂತಹ ಪರಿಸ್ಥಿತಿಯಲ್ಲಿ Jio Star ಚಾನಲ್ ನ ಬೆಲೆ ಶೀಘ್ರದಲ್ಲಿಯೇ ಹೆಚ್ಚಳವಾಗುವುದು. Sony pictures network India ತನ್ನ ಚಾನೆಲ್ ಪ್ಯಾಕ್ ಹ್ಯಾಪಿ ಇಂಡಿಯಾ ಸ್ಮಾರ್ಟ್ ಫ್ಯಾಕ್ ನ ಬೆಲೆಯನ್ನು  48 ರೂ.ಯಿಂದ 54 ರೂ.ಗೆ ಹೆಚ್ಚಿಸಿದೆ. Zee entertainment enterprises ತನ್ನ ಫ್ಯಾಮಿಲಿ ಪ್ಯಾಕ್ ನ  ಹಿಂದಿ SD ಬೆಲೆಯನ್ನು 47 ರೂ.ಯಿಂದ 53 ರೂ. ಗೆ ಹೆಚ್ಚಿಸಿದೆ.

ಪ್ರಸ್ತುತ ಭಾರತದಲ್ಲಿನ ಪಾವತಿಸಿದ ಟಿವಿ ಬಳಕೆದಾರರ ಸಂಖ್ಯೆ 170 ಮಿಲಿಯನ್ ನಿಂದ ನೂರು ಮಿಲಿಯನ್ಗೆ ಇಳಿದಿದೆ, Telecom Regulatory Authority of India  ದ ವರದಿಯ ಪ್ರಕಾರ ಸಪ್ಟೆಂಬರ್ 2024ರ ವೇಳೆಗೆ ಏರ್ಟೆಲ್ ಡಿಜಿಟಲ್ ಟಿವಿ, ಡಿಶ್ ಟಿವಿ, ಟಾಟಾ ಪ್ಲೇ ಮತ್ತು ಸನ್ ಡೈರೆಕ್ಟ್ ಗಳ ಪಾವತಿಸಿದ ಸಕ್ರಿಯ ಚಂದದಾರರ ಸಂಖ್ಯೆ 2.26 ಮಿಲಿಯನ್ ನಿಂದ 59.91 ಮಿಲಿಯನ್ ಗೆ ಇಳಿಕೆ ಕಂಡಿದೆ.

 

Leave a Comment

WhatsApp Group Join Now
Telegram Group Join Now