TRAI New Rules: ಕೇವಲ ರೂ.10 ರಲ್ಲಿ ವರ್ಷವಿಡಿ ಸಿಮ್ ಕಾರ್ಡ್ ಆಕ್ಟಿವ್ ಮಾಡಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ.
TRAI ಈಗ ಹೊಸ ನಿಯಮ ಜಾರಿಗೊಳಿಸಿದ್ದು, ಕೇವಲ 10ರೂ. ರೀಚಾರ್ಜ್‌ನಲ್ಲಿ(Reacharge) ಗ್ರಾಹಕರು ವರ್ಷಪೂರ್ತಿ ತಮ್ಮ ಸಿಮ್ ಅನ್ನು ಆಕ್ಟಿವ್(Active) ಆಗಿರಿಸಿಕೊಳ್ಳಬಹುದು. ಈ ನಿಯಮ ಗ್ರಾಹಕರ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಡಿಜಿಟಲ್ ಸೇವೆಗಳನ್ನು(Digitel Service) ಕೈಗೆಟುಕುವ ದರದಲ್ಲಿ ಒದಗಿಸುವ ಗುರಿಯನ್ನು TRAI ಹೊಂದಿದೆ.
TRAI ಈಗ ಮಹತ್ವದ ಹೆಜ್ಜೆಯನ್ನು ಇರಿಸಿದೆ, ಗ್ರಾಹಕರು ದುಬಾರಿ ರಿಚಾರ್ಜ್ ನಿಂದ ಎಲ್ಲಾ ರೀತಿಯ ಸೇವೆಗಳನ್ನು ಪಡೆಯಲು ಸಾಧ್ಯವಾಗದೆ ಹಿನ್ನಲೆಯಲ್ಲಿ TRAI ಈ ನಿರ್ಧಾರವನ್ನು ಕೈಗೊಂಡಿದೆ. TRAI ಹೊಸ ನಿಯಮದ ಪ್ರಕಾರ ರೂ.10 ರ ರಿಚಾರ್ಜ್ ನೊಂದಿಗೆ ಗ್ರಾಹಕರು ತಮ್ಮ ಮೊಬೈಲ್ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. TRAI ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.
ಗ್ರಾಹಕರ ಅಗತ್ಯತೆಗಳ ಅನುಗುಣವಾಗಿ TRAI ಈ ಹೊಸ ನಿಯಮಗಳನ್ನು ರೂಪಿಸಿದೆ, ಕಳೆದ ಜುಲೈ ತಿಂಗಳಿನಲ್ಲಿ ಮೂರು ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಬೆಲೆಯನ್ನು ಏರಿಕೆ ಮಾಡಿದ್ದು, ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿತ್ತು. ಇತ್ತಕಡೆ BSNL ಗ್ರಾಹಕರಿಗೆ ಕಡಿಮೆ ವೆಚ್ಚದ ರಿಚಾರ್ಜ್ ಪ್ಲಾನ್ ಅನ್ನು ಒದಗಿಸುತ್ತಿದ್ದರು, ಗ್ರಾಹಕರು ನೆಟ್ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ TRAI ಯ ರೂ.10 ರ ರಿಚಾರ್ಜ್ ಯೋಜನೆಯೆಲ್ಲಿ ಸಿಮ್ ಸಕ್ರಿಯಗೊಳಿಸಿಕೊಳ್ಳಬಹುದು.
TRAI ಹೊಸ ನಿಯಮದಿಂದ ಗ್ರಾಹಕರಿಗಾಗುವ ಪ್ರಯೋಜನೆಗಳು:
ಇನ್ನು ಮುಂದೆ ಗ್ರಾಹಕರು ತಮ್ಮ ಸಿಮ್ ಅನ್ನು ಆಕ್ಟಿವ್ ಆಗಿಸಿಕೊಳ್ಳಲು ದೊಡ್ಡ ಮೊತ್ತದ ರಿಚಾರ್ಜ್ ಅಗತ್ಯವಿಲ್ಲ, ಕೈಗೆಟುಕುವ ದರದಲ್ಲಿ ಅಂದರೆ ಕೇವಲ 10 ರೂಪಾಯಿ ರಿಚಾರ್ಜ್ ಅಲ್ಲಿ ಡಿಜಿಟಲ್ ಸೇವೆಗಳನ್ನು ಪಡೆದುಕೊಳ್ಳಬಹುದು.
TRAI ಈಗ ಗ್ರಾಹಕರಿಗೆ ತಮ್ಮ ಆರ್ಥಿಕ ಮತ್ತು ಅಗತ್ಯತೆಗಳಿಗೆ ಅನುಸಾರವಾಗಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಮಾಡುವ ಆಯ್ಕೆಯನ್ನು ನೀಡಿದೆ.
ಕಂಪನಿಗಳು ಈಗ ಎಲ್ಲಾ ಗ್ರಾಹಕರಿಗೆ ಅನುಕೂಲವಾಗುವಂತೆ, ಗ್ರಾಹಕ ಸ್ನೇಹಿ ರಿಚಾರ್ಜ್ ಸೇವೆಗಳನ್ನು ನೀಡುತ್ತಿದೆ, ಇದು ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲಾರದು.
ಇತ್ತೀಚಿನ ದುಬಾರಿ ರಿಚಾರ್ಜ್ ಯೋಜನೆಯಿಂದ ಬೇಸತ್ತ ಗ್ರಾಮೀಣ ಬಳಕೆದಾರರಿಗೆ ಈ ನಿಯಮ ಅನ್ವಯವಾಗಲಿದೆ, ಈ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳು ಗ್ರಾಹಕರನ್ನು ಆಕರ್ಷಿಸಲಿದೆ.
TRAI ಪ್ರಕಟಿಸಿರುವ ಹೊಸ ನಿಯಮಗಳು ನೇರವಾಗಿ ಖಾಸಗಿ ಟೆಲಿಕಾಂ ಕಂಪನಿಗಳ ಮೇಲೆ ಪ್ರಭಾವ ಬೀರಲಿದೆ. ಈ ಹೊಸ ನಿಯಮದಂತೆ ಖಾಸಗಿ ಟೆಲಿಕಾಂ ಕಂಪನಿಗಳು ತನ್ನ ರಿಚಾರ್ಜ್ ಪ್ಲಾನ್ ಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಅತ್ಯಾಕರ್ಷಕ ಪ್ರಿಪೇಯ್ಡ್ ಪ್ಲಾನ್ ಗಳನ್ನು ಬಿಡುಗಡೆಗೊಳಿಸಬೇಕಾಗುತ್ತದೆ. TRAI ಈ ಹೊಸ ನಿಯಮ “ಡಿಜಿಟಲ್ ಇಂಡಿಯಾ”ಮಿಷನ್ ಗೆ ಬಲ ತುಂಬಲಿದೆ. ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ನಂಬಲಾಗಿದೆ.