Gold Rate: ಬಂಗಾರ ಪ್ರಿಯರಿಗೆ ಜಾಕ್ ಪಾಟ್! ಇಂದು ಮತ್ತೆ ಕುಸಿದ ಚಿನ್ನದ ಬೆಲೆ…

Gold Rate: ಬಂಗಾರ ಪ್ರಿಯರಿಗೆ ಜಾಕ್ ಪಾಟ್! ಇಂದು ಮತ್ತೆ ಕುಸಿದ ಚಿನ್ನದ ಬೆಲೆ…

ನಿನ್ನೆಯ ದಿನಕ್ಕೆ ಹೋಲಿಕೆ ಮಾಡಿದರೆ ಬಂಗಾರದ ದರದಲ್ಲಿ ಮತ್ತೆ ಇಳಿಕೆಯಾಗಿದೆ, ಕಳೆದ ಒಂದು ತಿಂಗಳ ಮಾರುಕಟ್ಟೆಯನ್ನು ಗಮನಿಸಿದರೆ ಚಿನ್ನದ ದರದಲ್ಲಿ ಸಾಕಷ್ಟು ಏರಿಳಿತಗಳಾಗುತ್ತಿರುವುದನ್ನು ನಾವು ಗಮನಿಸಬಹುದು. ಒಂದು ತಿಂಗಳ ಹಿಂದಷ್ಟೇ ಗಗನಕ್ಕೆ ಏರಿದ್ದ ಚಿನ್ನದ ಬೆಲೆಯು(Gold Rate) ಈಗ ಮತ್ತೆ ಇಳಿಕೆಯ ದಾರಿ ಹಿಡಿಯುತ್ತಿದೆ.

ನಮ್ಮ ದೇಶದಲ್ಲಿ ಚಿನ್ನಕ್ಕೆ ವಿಶೇಷವಾದ ಸ್ಥಾನವಿದೆ, ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕವಾಗಿ ಕಾಣಲಾಗುತ್ತದೆ. ಹಾಗಾಗಿ ಮದುವೆ, ಹಬ್ಬ ಹರಿದಿನ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಖರೀದಿ ಸಾಮಾನ್ಯವಾಗಿರುತ್ತದೆ.

ಇನ್ನೂ, ಚಿನ್ನವನ್ನು ಗಟ್ಟಿ ಬಂಗಾರ, ಬಿಸ್ಕತ್ ಇಲ್ಲವೇ ಆಭರಣಗಳ ರೂಪದಲ್ಲಿ ಸಾಮಾನ್ಯವಾಗಿ ಕೊಂಡುಕೊಳ್ಳಲಾಗುತ್ತದೆ. ಚಿನ್ನವನ್ನು ಎಲ್ಲರೂ ಸಾಮಾನ್ಯವಾಗಿ ಕೊಂಡುಕೊಳ್ಳಲು ಬಯಸುತ್ತಾರೆ, ಏಕೆಂದರೆ ಆರ್ಥಿಕತೆಯ ಸಮಸ್ಯೆ ಎದುರಾದಾಗ ಚಿನ್ನವು ಆಪತ್ಬಾಂಧವನಂತೆ ಸಹಾಯಕ್ಕೆ ಬರುವುದು ಎಂದರೆ ತಪ್ಪಿಲ್ಲ.

ಮತ್ತೊಂದೆಡೆ ನೋಡುವುದಾದರೆ, ದೇಶದ ಆರ್ಥಿಕ ಸ್ಥಿರತೆಯನ್ನು ಖಾತರಿಪಡಿಸುವಲ್ಲಿ ಚಿನ್ನದ ಮೀಸಲು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ವಿಶೇಷವಾಗಿ ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ಮೌಲ್ಯದ ವಿಶ್ವಾಸಾರ್ಹ ಸಂಗ್ರಹವಾಗಿ ಚಿನ್ನವು ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಭಾರತವು ಸಾಕಷ್ಟು ಪಾಲಿನ ಪ್ರಮಾಣದ ಚಿನ್ನದ ಮೀಸಲನ್ನು ಹೊಂದಿದೆ.

ಚಿನ್ನದ ಬೆಲೆ ನೋಡುವುದಾದರೆ, ಇಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ರೂ.71,340 ಆಗಿದ್ದರೆ, ಕಲ್ಕತ್ತಾ, ಚೆನ್ನೈ ಹಾಗೂ ಮುಂಬೈ ನಗರಗಳಲ್ಲಿ ಕ್ರಮವಾಗಿ ರು.71,340, ರೂ.71,310, ರೂ.71,340 ಆಗಿದೆ. ದೇಶದ ರಾಜಧಾನಿಯಾದ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯು ರೂ.71,490 ಆಗಿದೆ. ಇಂದು ಮಾರುಕಟ್ಟೆಯಲ್ಲಿ 18 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆಯು ರೂ.5,837 ಆಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆಯು ರೂ.7134 ಆಗಿದೆ ಹಾಗೆಯೇ 24 ಕ್ಯಾರೆಟ್(ಅಪರಂಜಿ) ಚಿನ್ನದ ಬೆಲೆಯು ರೂ.7783 ಆಗಿದೆ.

18 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯು ರೂ.5,83,700 ಆಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆಯು ರೂ.7,13,400 ಆಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ರೂ.7,78,300 ಆಗಿದೆ. ಚಿನ್ನದ ಬೆಲೆ ಇಳಿಕೆಯ ಹಾದಿ ಹಿಡಿದ ಹಾಗೆ ಬೆಳ್ಳಿಯು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ, ನಮ್ಮ ದೇಶದಲ್ಲಿ ಬೆಳ್ಳಿಯಿಂದ ತಯಾರಿಕೆ ಮಾಡುವ ವಸ್ತುಗಳಿಗೆ ಅಗಾಧವಾದ ಬೇಡಿಕೆ ಇದೆ.

ಮಾರುಕಟ್ಟೆಯಲ್ಲಿ ಇಂದು ಪ್ರತಿ ಕೆಜಿ ಬೆಳ್ಳಿಯ ದರ ರೂ.92,400 ಇದ್ದು, ಬೆಂಗಳೂರು ನಗರದಲ್ಲಿ ಪ್ರತಿ 10 ಗ್ರಾಂ, 100 ಗ್ರಾಂ, ಒಂದು ಕೆಜಿ ಬೆಳ್ಳಿಯ ಬೆಲೆಯು ಕ್ರಮವಾಗಿ ರೂ.924, ರೂ.9240 ಹಾಗೂ ರೂ.92,400 ಗಳಾಗಿದೆ. ಮಿಕ್ಕುಳಿದ ದೇಶದ ಇತರೆ ಮಹಾನಗರಗಳಾದ ಮುಂಬೈನಲ್ಲಿ ರೂ.92,400, ಚೆನ್ನೈನಲ್ಲಿ ರೂ.99,900, ದೆಹಲಿಯಲ್ಲಿ ರೂ.92,400 ಹಾಗೂ ಕೊಲ್ಕತ್ತಾದಲ್ಲಿ ರೂ.92,400 ಗಳಾಗಿವೆ.

ವಿಶೇಷ ಸೂಚನೆ: ನಾವು ನೀಡಲಾದ ಎಲ್ಲಾ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತದೆ ಹಾಗೂ TCS, GST ಹಾಗೂ ಇನ್ನಿತರೆ ಶುಲ್ಕಗಳನ್ನು ಒಳಗೊಂಡಿಲ್ಲ. ಇನ್ನು ಹೆಚ್ಚಿನ ನಿಖರ ಮಾಹಿತಿಗಾಗಿ ನಿಮ್ಮ ಹತ್ತಿರವಿರುವ ಆಭರಣದ ವ್ಯಾಪಾರಿಗಳನ್ನು ಸಂಪರ್ಕಿಸಿ.

 

WhatsApp Group Join Now
Telegram Group Join Now

Leave a Comment

copy
share with your friends.