Scheme: ಮಹಿಳೆಯರಿಗೆ ಗುಡ್ ನ್ಯೂಸ್! ಬಂಪರ್ ಯೋಜನೆ;
ಮಹಿಳೆಯರಿಗಾಗಿ ಪೋಸ್ಟ್ ಆಫೀಸ್ನಲ್ಲಿ ವಿಶೇಷ ಯೋಜನೆ ಇದೆ, ಕೇಂದ್ರ ಸರ್ಕಾರವು ಮಹಿಳೆಯರಿಗಾಗಿಯೇ ಅನಾವರಣ ಮಾಡಿರುವ ಪ್ರತ್ಯೇಕ ಉಳಿತಾಯ ಯೋಜನೆಯಾಗಿದೆ (Savings Scheme).
ಈ ಯೋಜನೆಯ ಮೂಲಕ ಮಹಿಳೆಯರು 7.5% ರಷ್ಟು ಆಕರ್ಷಕ ಬಡ್ಡಿ ಪಡೆಯಬಹುದು, ಹೌದು ಕೇವಲ 2 ಲಕ್ಷವನ್ನು ಡೆಪಾಸಿಟ್ ಮಾಡಿದರೆ, ಮೆಚುರಿಟಿ ಅವಧಿಯ ಕೊನೆಯಲ್ಲಿ ರೂ.32,000 ಹೆಚ್ಚುವರಿ ಲಾಭ ಪಡೆಯಬಹುದು.
MSSC – ಮಹಿಳೆಯರಿಗೆ ವಿಶೇಷ ಉಳಿತಾಯ ಯೋಜನೆ;
ಮಹಿಳೆಯರು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು, ಸರ್ಕಾರವು ಈ ಯೋಜನೆಯನ್ನು 2023ರಲ್ಲಿ ಆರಂಭಿಸಿತು, ಈ ಯೋಜನೆಯಲ್ಲಿ ಕನಿಷ್ಠ ರೂ.1,000 ದಿಂದ ಗರಿಷ್ಠ ರೂ.2,00,000 ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಾವಧಿ ಕೇವಲ ಎರಡು ವರ್ಷ, ಅವಧಿ ಮುಗಿದ ಬಳಿಕ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ದೊರೆಯುವ ಯೋಜನೆ ಇದಾಗಿದೆ.
₹2 ಲಕ್ಷ ಡಿಪಾಜಿಟ್ ಮಾಡಿದರೆ ಮೆಚ್ಯುರಿಟಿ ವೇಳೆಗೆ ₹32,000 ಹೆಚ್ಚುವರಿ ಲಾಭ!
ಯೋಜನೆಯ ಪ್ರಮುಖ ಆಕರ್ಷಣೆವೇನೆಂದರೆ 7.5% ರಸ್ಟು ಬಡ್ಡಿ ದರವಾಗಿದೆ, ಉದಾಹರಣೆಗೆ ನೀವು ಈ ಯೋಜನೆಯಲ್ಲಿ ಎರಡು ಲಕ್ಷವನ್ನು ಹೂಡಿಕೆ ಮಾಡಿದರೆ, ಎರಡು ವರ್ಷಗಳ ಅವಧಿಯ ಮುಗಿದ ಬಳಿಕ 2,32,044 ಲಭ್ಯವಾಗುತ್ತದೆ, ಅಂದರೆ ನೀವು ಅವಧಿಯ ಕೊನೆಯಲ್ಲಿ 32,044 ಹೆಚ್ಚುವರಿ ಲಾಭ ಪಡೆಯಬಹುದು. ಇದು ಮಹಿಳೆಯರಿಗೆ ಭದ್ರವಾದ ಹಣಕಾಸಿನ ಬೆಂಬಲ ನೀಡುವಂತಹ ಯೋಜನೆಯಾಗಿದೆ.
ಮನೆಮಂದಿಯ ಹೆಸರಿನಲ್ಲಿ ಖಾತೆ ತೆರೆಸಬಹುದಾ?
ಈ ಯೋಜನೆಯನ್ನು ಕುಟುಂಬದ ಮಹಿಳೆಯರು ಎಲ್ಲರೂ ಬಳಸಿಕೊಳ್ಳಬಹುದು, ವಿವಾಹಿತರು ತಮ್ಮ ಹೆಂಡತಿಯ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು, ಇನ್ನು ವಿವಾಹ ಆಗದೇ ಇರುವವರು ತಾಯಿ ಅಥವಾ ಪುತ್ರಿಯ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು.
ಯಾವಾಗ ವಿತ್ಡ್ರಾ ಮಾಡಬಹುದು?
ಈ ಯೋಜನೆಯಲ್ಲಿ ನೀವು ಮೊದಲ ವರ್ಷ ಮುಗಿದ ಬಳಿಕ ಶೇಕಡ 40ರಷ್ಟು ಹಣವನ್ನು ಹಿಂದಕ್ಕೆ ಪಡೆಯಬಹುದು, ಇದರಿಂದ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ನೆರವಾಗುತ್ತದೆ, ಹೀಗಾಗಿ ಲಭ್ಯವಿರುವ ಹೆಚ್ಚಿನ ಬಡ್ಡಿ ಪಾವತಿ ಹಣವನ್ನು ಬೇಕಾದಾಗ ಹಿಂಪಡೆಯುವ ಅವಕಾಶವೂ ಕೂಡ ಇದರಲ್ಲಿ ಇದೆ.