Savings Account | ಸೇವಿಂಗ್ಸ್ ಅಕೌಂಟ್ ನ್ಯೂ ರೂಲ್ಸ್! ಹಣ ಗಡಿ ದಾಟಿದರೆ ಮನೆಗೆ ಬರುತ್ತೆ ನೋಟಿಸ್!

Savings Account: ಸೇವಿಂಗ್ಸ್ ಅಕೌಂಟ್ ನ್ಯೂ ರೂಲ್ಸ್! ಹಣ ಗಡಿ ದಾಟಿದರೆ ಮನೆಗೆ ಬರುತ್ತೆ ನೋಟಿಸ್!

ನೀವು ಉಳಿತಾಯ ಖಾತೆಯಲ್ಲಿ(Savings Account) ಹೆಚ್ಚಿನ ಹಣಕಾಸಿನ ವಹಿವಾಟು ನಡೆಸಿದರೆ ಆದಾಯ ತೆರಿಗೆ (Income Tax) ಇಲಾಖೆಯಿಂದ ನಿಮ್ಮ ಮನೆಗೆ ನೋಟಿಸ್ (Notice) ಬರಬಹುದು. ನೀವೇನಾದರೂ ಪಾನ್ ಕಾರ್ಡ್(Pan Card) ಇಲ್ಲದೆ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸಿದರೆ IT ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ, ನೀವು ಹೆಚ್ಚಿನ ಹಣಕಾಸಿನ ವಹಿವಾಟು ನಡೆಸುವಾಗ ತೆರಿಗೆ ಸಲಹೆಗಾರರನ್ನು ಸಂಪರ್ಕಿಸುವುದು ಉತ್ತಮ.

WhatsApp Group Join Now
Telegram Group Join Now

ಹೆಚ್ಚಿನ ಜನರು ತಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಬ್ಯಾಂಕುಗಳಲ್ಲಿ ಇರಿಸುತ್ತಾರೆ, ಕೆಳವರ್ಗದ ಮತ್ತು ಮಧ್ಯಮ ವರ್ಗದ ಜನರು ಬ್ಯಾಂಕ್ ಖಾತೆಗಳಲ್ಲಿ (Bank Account) ಹಣವನ್ನು ಹಂತ ಹಂತವಾಗಿ ಜಮೆ (Deposit) ಮಾಡುತ್ತಾರೆ. ಉಳಿತಾಯ ಖಾತೆಗಳಲ್ಲಿ ಹಣವನ್ನು ವಿತುಡ್ರಾ (Withdrawal) ಮತ್ತು ಜಮೆ ಮಾಡಲು ಕೆಲವು ನಿಬಂಧನೆಗಳಿವೆ, ಒಂದು ವೇಳೆ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ಜಮಾ ಮಾಡಿದರೆ ಆದಾಯ ತೆರಿಗೆ ಇಲಾಖೆಯಿಂದ ನಿಮ್ಮ ಮನೆಗೆ ಬರಬಹುದು.

ಹಣಕಾಸು ತಜ್ಞರ ಮಾಹಿತಿ ಪ್ರಕಾರ, ಒಬ್ಬ ವ್ಯಕ್ತಿಯು ಒಂದು ಆರ್ಥಿಕ ವರ್ಷದಲ್ಲಿ(April,1 – March,31) ವಿದಾಯ ಖಾತೆಯಲ್ಲಿನ ಠೇವಣಿ ಮತ್ತು ಹಣ ಹಿಂಪಡೆಯುವ ಮೊತ್ತ ರೂ.10ಲಕ್ಷ ಮೀರಿರಬಾರದು. ಒಂದು ವೇಳೆ ಹಣಕಾಸಿನ ವಹಿವಾಟು ರೂ.10 ಲಕ್ಷಗಳಿಂದ ಅಧಿಕವಾದರೆ ಆದಾಯ ತೆರಿಗೆ ಇಲಾಖೆಗೆ ಸರಿಯಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ತೆರಿಗೆ ಇಲಾಖೆಯ ಸೆಕ್ಷನ್ 269ST ನಿಯಮದ ಪ್ರಕಾರ ಯಾವುದೇ ವ್ಯಕ್ತಿ ಒಂದು ದಿನದಲ್ಲಿ 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ವಹಿವಾಟು ನಡೆಸುವಂತಿಲ್ಲ.

ನೀವೇನಾದರೂ ಒಂದು ದಿನದಲ್ಲಿ ರೂ.50 ಸಾವಿರಗಿಂತ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸಿದರೆ ಪಾನ್ ಕಾರ್ಡ್ ನೀಡಬೇಕಾಗುತ್ತದೆ. ಇಲ್ಲದಿದ್ದರೆ ನೀವು ಫಾರಂ 60 ಇಲ್ಲವೇ 61 ಭರ್ತಿ ಮಾಡಿ ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ. Tax2Win ನ CEO, ಸ್ಥಾಪಕರಾದ ಅಭಿಷೇಕ್ ಸೋನಿ ಅವರ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚಿನ ನಗದು ಠೇವಣಿಗಳನ್ನು ಹೆಚ್ಚಿನ ಮೌಲ್ಯದ ವಹಿವಾಟು ಎಂದು ವರ್ಗಿಕರಿಸಲಾಗಿದೆ, ಹಣಕಾಸು ಸಂಸ್ಥೆಗಳು ಅಥವಾ ಬ್ಯಾಂಕುಗಳು 114B ಅಡಿಯಲ್ಲಿ ತೆರಿಗೆ ಇಲಾಖೆಗೆ (Income Tax Department) ಹೆಚ್ಚಿನ ಮೌಲ್ಯದ ಹಣಕಾಸಿನ ವಹಿವಾಟಿನ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

 

Leave a Comment

WhatsApp Group Join Now
Telegram Group Join Now