Railway New Rules: ಮೇ 1ರಿಂದ ರೈಲ್ವೆ ನಿಯಮದಲ್ಲಿ ಬದಲಾವಣೆ, ಸಂಪೂರ್ಣ ಮಾಹಿತಿ ಇಲ್ಲಿದೆ.

Railway New Rules: ಮೇ 1ರಿಂದ ರೈಲ್ವೆ ನಿಯಮದಲ್ಲಿ ಬದಲಾವಣೆ, ಸಂಪೂರ್ಣ ಮಾಹಿತಿ ಇಲ್ಲಿದೆ.

Railway Rules Change : ಭಾರತೀಯ ರೈಲ್ವೆ ಇಲಾಖೆಯು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಮೇ 1ರಿಂದ ಟಿಕೆಟ್ಗಳ ಕುರಿತಾದ ಹೊಸ ನಿಯಮಗಳು ಜಾರಿಗೆ ಬರಲಿದೆ. ಈ ಹೊಸ ನಿಯಮದ ಪ್ರಕಾರ, ನೀವು ಟಿಕೆಟ್ ಕನ್ಫರ್ಮ್ ಹೊಂದಿರದಿದ್ದರೆ ಸ್ಲೀಪರ್ ಅಥವಾ ಎಸಿ ಕೋಚ್ಗಳಲ್ಲಿ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಟಿಕೆಟ್ ವೇಟಿಂಗ್ ಲಿಸ್ಟ್ ನಲ್ಲಿ ಇದ್ದರೆ ನೀವು ಕೇವಲ ಜನರಲ್ ಕೋಚ್ಗಳಲ್ಲಿ ಮಾತ್ರ ಪ್ರಯಾಣಿಸಬಹುದು. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು, ನಮ್ಮ ಪೇಜ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ಈ ಹೊಸ ನಿಯಮದ ಉದ್ದೇಶವೇನೆಂದರೆ, ಕಂಫಾರ್ಮ್ ಟಿಕೇಟ್ ಹೊಂದಿರುವ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿದೆ. North Western Railway ಚೀಪ್ ಪಬ್ಲಿಕ್ ರಿಲೇಶನ್ ಅಧಿಕಾರಿ ಕ್ಯಾಪ್ಶನ್ ಶಶಿಕಿರಣ್ ಅವರು ಇದರ ಬಗ್ಗೆ ಮಾತನಾಡಿ, ಸ್ಲಿಪ್ಪರ್ ಅಥವಾ ಎಸಿ ಕೋಚ್ಗಳಲ್ಲಿ ಕೇವಲ ಸೂಕ್ತ ಟಿಕೆಟ್ ಹೊಂದಿರುವವರನ್ನು ಅನುಮತಿಸುವ ಮೂಲಕ ಇತರ ಪ್ರಯಾಣಿಕರ ಅನುಭವ ಸುಗಮವಾಗಿರಲಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಇದರ ಹಿನ್ನೆಲೆ ನೋಡುವುದಾದರೆ, ಟಿಕೆಟ್ Confirm ಆಗದ ಪ್ರಯಾಣಿಕರು ಸ್ಲೀಪರ್ ಅಥವಾ ಎಸಿ ಕೋಚ್ಗಳಲ್ಲಿ ಇಳಿದು, ಇತರ ಸೀಟುಗಳನ್ನು ಕುಳಿತುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ, ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ. ಇದಲ್ಲದೆ ಟ್ರೈನಿನ ಸಂಚಾರದ ಮೇಲು ಪರಿಣಾಮ ಬೀರುತ್ತದೆ.

ಈ ನಿಯಮವನ್ನು ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುತ್ತದೆ, ಉದಾಹರಣೆಗೆ Confirm ಟಿಕೆಟ್ ಇಲ್ಲದೆ ಸ್ಲಿಪ್ಪರ್ ಕೋಚ್ ಪ್ರಯಾಣಿಸಿದರೆ ರೂ.250 ದಂಡ ಹಾಕಬಹುದಾಗಿದೆ, ಜೊತೆಗೆ ಸ್ಲೀಪರ್ ಟಿಕೆಟ್ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಎಸಿ ಕೋಚ್ ಗಳಲ್ಲಿ ವೇಟಿಂಗ್ ಟಿಕೆಟ್ ನೊಂದಿಗೆ ಪ್ರಯಾಣವನ್ನು ಮಾಡಿದರೆ, ರೂ.440 ಅಥವಾ ಹೆಚ್ಚಿನ ದಂಡ ಕಟ್ಟಬೇಕಾಗುತ್ತದೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ಮುಂದಿನ ನಿಲ್ದಾಣದಲ್ಲಿ ಅವರು ಟ್ರೈನಿಂದ ಹೊರ ಹಾಕಬಹುದು.

ರೈಲ್ವೆ ನಿಯಮದ ಪ್ರಕಾರ ಟಿಕೆಟ್ ಇಲ್ಲದೆ ಪ್ರಯಾಣವನ್ನು ನಡೆಸಿದರೆ ರೂ.1,000 ದಂಡ ಆರು ತಿಂಗಳ ಜೈಲು ಶಿಕ್ಷೆ ಸಹ ಸಾಧ್ಯವಿದೆ, ಮೊದಲ ದರ್ಜೆ ಎಸಿ ಕೋಚ್ ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ನಡೆಸಿದರೆ, ಇನ್ನು ಹೆಚ್ಚಿನ ದಂಡ ವಿಧಿಸಲಾಗಬಹುದು. ಎಲ್ಲಾ ಕ್ರಮಗಳ ಉದ್ದೇಶ ಒಂದೇ, ಎಲ್ಲರಿಗೂ ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣದ ಅನುಭವ ನೀಡುವುದಾಗಿದೆ.

 

Leave a Comment

WhatsApp Group Join Now
Telegram Group Join Now