Property: ಆಸ್ತಿ ಖರೀದಿ ಮತ್ತು ಮಾರಾಟ ಮಾಡಲು ಹೊಸ ರೂಲ್ಸ್ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ

Property: ಆಸ್ತಿ ಖರೀದಿ ಮತ್ತು ಮಾರಾಟ ಮಾಡಲು ಹೊಸ ರೂಲ್ಸ್ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ

Property: ಗ್ರಾಮೀಣ ಹಾಗೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನೋಂದಣಿಯ ಅಕ್ರಮಕ್ಕೆ ಕಡಿವಾಣ ಹಾಕುವ ಸಲುವಾಗಿ ರಾಜ್ಯ ಸರ್ಕಾರವು ಭೌಗೋಳಿಕ ದತ್ತಾಂಶ (GIS) ಆಧಾರಿತ ತಂತ್ರಜ್ಞಾನವನ್ನು ರೂಪಿಸಲು ಮುಂದಾಗಿದೆ.

WhatsApp Group Join Now
Telegram Group Join Now

ನೋಂದಣಿಯ ಪ್ರಕ್ರಿಯೆ ಸಂದರ್ಭದಲ್ಲಿ ನಿರ್ದಿಷ್ಟ ಜಾಗ ಇರುವ ಪ್ರದೇಶ ಯಾವ ರಸ್ತೆಗೆ ಸೇರಿದೆ ಅನ್ನುವುದನ್ನು ಲೆಕ್ಕ ಹಾಕಿ, ಅದರ ಪ್ರಕಾರ ಮುದ್ರಾಂಕ ಶುಲ್ಕ ವಸೂಲಿ ಮಾಡಿ ತೆರಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಮೊದಲು ಹಂತದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾರಿ:

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಈ ಹೊಸ ತಂತ್ರಜ್ಞಾನ ವ್ಯವಸ್ಥೆ ಜಾರಿಗೆ ಬರಲಿದ್ದು, ಮೊದಲನೇ ಹಂತದಲ್ಲಿ ಗ್ರಾಮೀಣ ಭಾಗದಲ್ಲಿ GIS ಆಧಾರಿತ ನೊಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ. ನಂತರದ ದಿನಗಳಲ್ಲಿ ನಗರ ಪ್ರದೇಶಗಳಿಗೆ ಈ ತಂತ್ರಾಂಶವನ್ನು ವಿಸ್ತರಿಸಲಾಗುತ್ತದೆ. ಇನ್ನು ಕೇವಲ 15 ದಿನಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ, ನೆಲಮಂಗಲ, ಹೊಸದುರ್ಗ ತಾಲೂಕುಗಳಿಗೆ ಜಾರಿಗೆ ಬರಲಿದ್ದು, ಮುಂದಿನ ನಾಲ್ಕು ತಿಂಗಳುಗಳಲ್ಲಿ ಇಡೀ ರಾಜ್ಯದಲ್ಲಿ ಈ ವ್ಯವಸ್ಥೆ ಅನುಷ್ಠಾನ ತರಲಾಗುವುದು ಎಂದು ರಾಜ್ಯ ಸರ್ಕಾರವು ಹೇಳಿದೆ.

ಮುದ್ರಾಂಕಕ್ಕೆ ಸರ್ವೇ ನಂಬರ್:

ಈ ಹೊಸ ವ್ಯವಸ್ಥೆಯು ನೋಂದಣಿಯಾಗುವ ಪ್ರದೇಶವು ಎಲ್ಲಿ ಇದೆ ಎನ್ನುವುದರ ಮೇಲೆ ನಿಗಾ ವಹಿಸಲಿದ್ದು, ಮಾರಾಟ ಪ್ರದೇಶ ಎನ್ನುವ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಸ್ವಯಂ ಚಾಲಿತ ಮುದ್ರಾಂಕ ದರದ ಲೆಕ್ಕಾಚಾರವು ನಡೆಯಲಿದ್ದು, ಇದರ ಪಾವತಿಸಿದ ನಂತರ ದಾಖಲೆಗಳನ್ನು ಪಡೆದು ನೋಂದಣಿ ಮಾಡಲಾಗುವುದು. ನೀವು ಮುದ್ರಾಂಕ ಮಾಡಲು ಸರ್ವೇ ನಂಬರ್ (Survay Number) ಮೇಲೆ ಕ್ಲಿಕ್ ಮಾಡಬೇಕು, ನೀವು ಎಷ್ಟು ಪ್ರದೇಶ ಮಾರಾಟ ಎನ್ನುವುದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮಾರಾಟ ದರ ತಿಳಿಯುತ್ತದೆ.

ಇನ್ನು ಈ ವ್ಯವಸ್ಥೆಯನ್ನು ತಡೆಗಟ್ಟುವ ಸಲುವಾಗಿ GIS ಆಧಾರಿತ ನೋಂದಣಿ ವ್ಯವಸ್ಥೆಯನ್ನು ಹೊಸ ತಂತ್ರಜ್ಞಾನದ ಮೂಲಕ ಜಾರಿಗೆ ತರಲಾಗುವುದು ಎಂದು ಹೇಳಲಾಗಿದೆ.

 

 

Leave a Comment

WhatsApp Group Join Now
Telegram Group Join Now