Private Vehicle Drivers: ರಾಜ್ಯ ಸರ್ಕಾರದಿಂದ ಖಾಸಗಿ ವಾಹನ ಚಾಲಕರಿಗೆ ಸಿಹಿ ಸುದ್ದಿ

Private Vehicle Drivers: ರಾಜ್ಯ ಸರ್ಕಾರದಿಂದ ಖಾಸಗಿ ವಾಹನ ಚಾಲಕರಿಗೆ ಸಿಹಿ ಸುದ್ದಿ

ಕರ್ನಾಟಕದ ಖಾಸಗಿ ವಾಹನ ಚಾಲಕ ಸಮೂಹದ ಹಲೋ ದಶಕದ ಕನಸುಗಳು ಇಂದು ನನಸಾಗಿದೆ, ಖಾಸಗಿ ಚಾಲಕರಿಗಾಗಿ ನಿಗಮ ಮಂಡಳಿ ಬೇಕು ಎನ್ನುವುದು ಆ ಮಂಡಳಿಯಿಂದ ಇದೀಗ ದೇಶದಲ್ಲಿಯೇ ಯಾವುದೇ ರಾಜ್ಯದ ಚಾಲಕರಿಗೆ ನೀಡುವ ಸವಲತ್ತು ಮತ್ತು ಸೌಲಭ್ಯಗಳನ್ನು ನೀಡಲು ಸರ್ಕಾರವು ಮುಂದಾಗಿದೆ.

ಹಲವಾರು ದಶಕಗಳಿಂದ ಖಾಸಗಿ ವಾಹನ ಚಾಲಕರ ಕನಸು ಎಂದು ನನಸಾಗಿದೆ, ಖಾಸಗಿ ವಾಹನ ಚಾಲಕರಿಗಾಗಿ ಅಭಿವೃದ್ಧಿ ನಿಗಮ ಮಂಡಳಿ ಬೇಕು ಎನ್ನುವ ಬೇಡಿಕೆ ಇದೀಗ ಈಡೇರಿದೆ. ಚಾಲಕರ ಅಭಿವೃದ್ಧಿ ನಿಗಮ ಮಂಡಳಿಯ ಮೂಲಕ ಕರ್ನಾಟಕ ರಾಜ್ಯ ಇಲಾಖೆ ಅಡಿಯಲ್ಲಿ ಚಾಲಕರಿಗಾಗಿಯೇ ಆರೋಗ್ಯ ಕಾರ್ಡ್ ನೀಡಲು ಸರ್ಕಾರವು ತೀರ್ಮಾನ ಮಾಡಿದೆ.

ಖಾಸಗಿ ಚಾಲಕರಿಗಾಗಿಯೇ ಅಭಿವೃದ್ಧಿ ನಿಗಮ ಮಂಡಳಿ ಬೇಕು ಎನ್ನುವ ಬೇಡಿಕೆ ಈಡೇರಿದ್ದು, ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಇಂತಹ ಸೌಲಭ್ಯಗಳನ್ನು ನೀಡಲು ರಾಜ್ಯ ಸರ್ಕಾರವು ಮುಂದಾಗಿದೆ. ಹಿಂದೆ ಚಾಲಕರು ಅಂಥವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುತ್ತಿತ್ತು, ಇದೀಗ ಸರ್ಕಾರಿ ಚಾಲಕ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ನೊಂದಾಯಿತ ಚಾಲಕನು ಅಪಘಾತ ಮತ್ತು ಸಹಜವಾಗಿ ಮೃತಪಟ್ಟರೆ ಅಂತಹ ಚಾಲಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ.

ಚಾಲಕರಿಗೆ ಕರ್ನಾಟಕ  ರಾಜ್ಯ ಸಾರಿಗೆ ಇಲಾಖೆ ಅಡಿಯಲ್ಲಿ ಆರೋಗ್ಯ ಕಾರ್ಡ್ ನೀಡಲು ತೀರ್ಮಾನ ಮಾಡಲಾಗಿದ್ದು, ಕರ್ನಾಟಕದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.

ಚಾಲಕರಿಗೆ ಸಿಗುವ ಸೌಲಭ್ಯಗಳು ಯಾವುವು?

ಅಧಿವೇಶನದಡಿಯಲ್ಲಿ ಪಾಸಾದ ಬಿಲ್ ನಲ್ಲಿ ಚಾಲಕರಿಗಾಗಿ ಹಲವು ಸೌಲಭ್ಯಗಳು ದೊರೆಯಲಿದೆ, ಇಲಾಖೆ ಅಡಿಯಲ್ಲಿ ನೋಂದಾಯಿಸಿಕೊಂಡ ಸದಸ್ಯರು ರಾಜ್ಯದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು 5 ಲಕ್ಷ ರೂಪಾಯಿವರೆಗೆ ಕ್ಯಾಶ್ಲೆಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 50 ಸಾವಿರದಿಂದ ಒಂದು ಲಕ್ಷದವರೆಗೆ ಯಾವುದೇ ಕಾಯಿಲೆಗೆ ಖಾಸಗಿ ಆಸ್ಪತ್ರೆಯಲ್ಲಿ ಸೇರ್ಪಡೆಯಾಗಿ ಚಿಕಿತ್ಸೆ ಪಡೆದುಕೊಂಡು ಹಣವನ್ನು ಪಾವತಿ ಮಾಡಿದರೆ, ಆ ಬಿಲ್ ನಲ್ಲಿ ರೂ.01 ಲಕ್ಷ ವರೆಗೆ ಹಣವನ್ನು ಮಂಡಳಿಗೆ ಬಿಲ್ ನೀಡಿ ಮರುಪಾವತಿ ಮಾಡಿಕೊಳ್ಳಬಹುದಾಗಿದೆ.

ಮಹಿಳಾ ಚಾಲಕರಿಗೆ ಸಿಗುವ ಸೌಲಭ್ಯಗಳು ಯಾವುವು?

ಮಹಿಳಾ ಚಾಲಕರಿಗೆ ಅಭಿವೃದ್ಧಿ ಮಂಡಳಿಯು ಎರಡು ಮಕ್ಕಳ ಹೆರಿಗೆ ಭತ್ಯೆಯ ರೂಪದಲ್ಲಿ ತಲಾ 10000 ನೀಡಲಾಗುತ್ತದೆ, ನೋಂದಾಯಿಸಿಕೊಂಡ ಚಾಲಕ ಅಪಘಾತದಲ್ಲಿ ಮೃತಪಟ್ಟರೆ ಅಂತಹ ಚಾಲಕನ ಮಕ್ಕಳಿಗೆ ಒಂದನೇ ತರಗತಿಯಿಂದ ಡಬಲ್ ಡಿಗ್ರಿ ಯವರಿಗೆ 10,000  ದಿಂದ 25,000 ವರೆಗೆ ಸಹಾಯಧನ ನೀಡಲಾಗುತ್ತದೆ. ಕ್ಯಾಬ್ ಡ್ರೈವರ್, ಆಟೋ ಚಾಲಕರು, ಲಾರಿ ಚಾಲಕರು, ಖಾಸಗಿ ಬಸ್ ಚಾಲಕರು, ಸ್ಕೂಲ್ ಬಸ್ ಚಾಲಕರು, ಕ್ಲೀನರ್, ಕಂಡಕ್ಟರ್ ಮೆಕ್ಯಾನಿಕ್, ವಾಹನಗಳ ಪೈಂಟರ್, ವೆಲ್ಡರ್ಸ್, ಬಾಡಿ ಬಿಲ್ಡರ್ಸ್ ಗಳು ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಮೇಲಿನ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಚಾಲಕನು ಅಭಿವೃದ್ದಿ ನಿಗಮ ಮಂಡಳಿಯಲ್ಲಿ ನೊಂದಾಯಿಸಿಕೊಂಡಿರಬೇಕು ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ನಟರಾಜ್ ಶರ್ಮಾ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಹಲವು ದಶಕಗಳ ಹಿಂದಿನ ಕನಸನ್ನು ನನಸು ಮಾಡಲು ಮುಂದಾಗಿದೆ.

 

WhatsApp Group Join Now
Telegram Group Join Now

Leave a Comment

copy
share with your friends.