ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ ಕೇಂದ್ರ ಸರ್ಕಾರ ಬಹುಮುಖ್ಯವಾದ ಯೋಜನೆಯನ್ನು ಜಾರಿಗೊಳಿಸಿದ್ದು, ಅತ್ಯಂತ ಕಡಿಮೆ ಪ್ರೀಮಿಯಂಲ್ಲಿ ಅಪಘಾತ ವಿಮಾ ರಕ್ಷಣೆಯನ್ನು ಒದಗಿಸಲು ಮುಂದಾಗಿದೆ.
ಹೌದು ಭಾರತ ಸರ್ಕಾರವು ಸಾಮಾನ್ಯ ಜನರ ಸುರಕ್ಷತೆ ಮತ್ತು ಅನುಕೂಲಕ್ಕಾಇ ಅನೇಕ ಯೋಜನೆಗಳನ್ನು ನಡೆಸುತ್ತಿದ್ದು, ಅವುಗಳಲ್ಲಿ ಒಂದು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಕೂಡ ಒಂದಾಗಿದೆ. ಈ ಯೋಜನೆ ಅಡಿಯಲ್ಲಿ ಕೇವಲ 20 ರೂಪಾಯಿಗೆ ವಾರ್ಷಿಕ ಪ್ರೀಮಿಯಂನಲ್ಲಿ ರೂ.2ಲಕ್ಷದವರೆಗೆ ವಿಮಾ ರಕ್ಷಣೆಯನ್ನು ಪಡೆಯಬಹುದಾಗಿದೆ. ಈ ಯೋಜನೆಗೆ ಅರ್ಹ ವಯಸ್ಸು 18 ರಿಂದ 70 ವರ್ಷ ನಡುವೆ ಇರಬೇಕು. ಅಲ್ಲದೇ ಅರ್ಹ ಫಲಾನುಭವಿ ಬ್ಯಾಕ್ ಖಾತೆಯನ್ನೂ ಕೂಡ ಹೊಂದಿರಬೇಕು.
ಈ ವಿಮೆಯನ್ನು ಮಾಡಿದರೆ ಅಪಘಾತದಲ್ಲಿ ವಿಮೆ ಮಾಡಿದವರು ಮರಣ ಹೊಂದಿದರೆ ನಾಮಿನಿಗೆ 2 ಲಕ್ಷ ರೂ ಪರಿಹಾರ ಸಿಗುತ್ತದೆ.ಭಾಗಶಃ ಅಂಗವಿಕಲರಾದರೆ ಅವರಿಗೆ ಒಂದು ಲಕ್ಷ ಹಣ ಸಿಗುತ್ತದೆ ಹಾಗೂ ವಿಮೆದಾರರು ಸಂಪೂರ್ಣವಾಗಿ ಅಂಗವಿಕಲರಾದರೆ 2ಲಕ್ಷ ರೂ ಪರಿಹಾರ ಸಿಗುತ್ತದೆ. ದುಬಾರಿ ಪ್ರೀಮಿಯಂಗಳನ್ನು ಪಾವತಿಸಲು ಸಾಧ್ಯವಾಗದ ಜನರಿಗೆ ವಿಮಾ ರಕ್ಷಣೆ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಕೇವಲ 20ರೂ. ಗೆ ನಿಮ್ಮ ಭವಿಷ್ಯವನ್ನು ಈ ಯೋಜನೆಯ ಮೂಲಕ ಸುರಕ್ಷಿತಗೊಳಿಸಬಹುದಾಗಿದೆ.
ಈ ಯೋಜನೆಗೆ ನೀವು ನಿಮ್ಮ ಬ್ಯಾಂಕ್ ಶಾಖೆ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ವಿಮಾ ಪ್ರೀಮಿಯಂ ಮೊತ್ತವನ್ನು ಪ್ರತಿ ವರ್ಷ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಡೆಬಿಟ್ ಮಾಡಲಾಗುತ್ತದೆ. ವಿಮಾ ಅವಧಿ ಜೂನ್ 1 ರಿಂದ ಮೇ 31ರವರೆಗೆ ಇರುತ್ತದೆ. ಆ ವಿಮೆಯನ್ನು ಪ್ರತಿ ವರ್ಷ ನವೀಕರಿಸಬೇಕಾಗುತ್ತದೆ.
