POST OFFICE vs SBI ಎಫ್ಡಿ ಇಡಲು ಯಾವುದು ಬೆಸ್ಟ್? ಯಾವುದರಲ್ಲಿ ಸಿಗಲಿದೆ ಹೆಚ್ಚಿನ ಬಡ್ಡಿದರ
ಹೂಡಿಕೆದಾರರಿಗೆ ಅತ್ಯಂತ ಸುರಕ್ಷಿತ ಮತ್ತು ಒಳ್ಳೆಯ ಖಾತರಿ ಆದಾಯ ಪಡೆಯಲು ಬಯಸುವವರಿಗೆ ಬಯಸುವವರಿಗೆ ನಿಶ್ಚಿತ ಠೇವಣಿಗೆ ಉತ್ತಮವಾದ ಆಯ್ಕೆಯಾಗಿದೆ, ನಿಶ್ಚಿತ ಠೇವಣಿಗಳು (Fixed Deposit) ಬಡ್ಡಿಯ ರೂಪದಲ್ಲಿ ನಿಮಗೆ ಸ್ಥಿರ ಆದಾಯವನ್ನು ನೀಡಲಿದೆ. ನೀವು ನಿಶ್ಚಿತ ಠೇವಣಿಯಲ್ಲಿ ದೀರ್ಘಾವಧಿಯವರೆಗೆ ಹೂಡಿಕೆ(Longterm investment) ಮಾಡಿ ಯಾವುದೇ ಅಪಾಯವಿಲ್ಲದೆ ಉತ್ತಮ ಆದಾಯವನ್ನು ಪಡೆಯಲು ಸಾಧ್ಯ. ಅದಕ್ಕಾಗಿ ಹೆಚ್ಚಿನ ಜನರು ನಿಶ್ಚಿತ ಠೇವಣಿಗಳಲ್ಲಿ(FD) ಹೂಡಿಕೆ(Investment) ಮಾಡಲು ಇಷ್ಟಪಡುತ್ತಾರೆ.
ಉಳಿತಾಯ ಖಾತೆಗಳಿಗಿಂತ ನಿಶ್ಚಿತ ಠೇವಣಿಯಲ್ಲಿ ಹೆಚ್ಚಿನ ಬಡ್ಡಿದರ ಸಿಗುವುದರಿಂದ ಹೂಡಿಕೆದಾರರು FD ಗಳಿಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ, ಈ ಯೋಜನೆಗಳಲ್ಲಿ ಅವಧಿ ಮುಗಿದ ಬಳಿಕವೇ ಅಸಲು ಮತ್ತು ಬಡ್ಡಿಯನ್ನು ಹಿಂಪಡೆಯಬಹುದು. ಅವಧಿಗಳ ಆಧಾರದ ಮೇಲೆ ಬಡ್ಡಿಗಳು ಸಹ ಬದಲಾಗುತ್ತದೆ. ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಕನಿಷ್ಠ ಎರಡು ದಿನಗಳಿಂದ ಹಿಡಿದು 10 ವರ್ಷಗಳವರೆಗೆ ನಿಶ್ಚಿತ ಠೇವಣಿಯಲ್ಲಿ (FD) ಹೂಡಿಕೆ ಮಾಡಬಹುದು. ಅಂಚೆ ಕಚೇರಿಯ ನಿಮಗೆ ಸ್ಥಿರ ಠೇವಣಿಯ ಮೂಲಕ ಆಕರ್ಷಕ ಬಡ್ಡಿದರವನ್ನು ನೀಡುತ್ತದೆ.
ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ SBI ಮತ್ತು Post Office ನ ಸ್ಥಿರ ಠೇವಣಿಯ ಬಡ್ಡಿ ದರಗಳು ಎಷ್ಟಿದೆ ಎಂದು ತಿಳಿಯೋಣ, ಯಾವುದರಲ್ಲಿ ಹೆಚ್ಚಿನ ಬಡ್ಡಿ ಸಿಗಲಿದೆ ಎಂಬ ಮಾಹಿತಿಯು ಇಲ್ಲಿದೆ.
SBI ಸ್ಥಿರ ಠೇವಣಿ ದರಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಿರ ಠೇವಣಿಗಳ ಮೇಲೆ 7% ರವರಿಗೆ ಬಡ್ಡಿದರವನ್ನು ನೀಡುತ್ತದೆ. ಒಂದರಿಂದ ಐದು ವರ್ಷಗಳ ಅವಧಿಯ FD ಯ ಮೇಲೆ ಬಡ್ಡಿ ದರಗಳು 6.5% ರಿಂದ ಆರಂಭವಾಗುತ್ತದೆ.
- ಒಂದು ವರ್ಷದ ಅವಧಿಗೆ ಸಿಗುವ ಬಡ್ಡಿದರ 6.8%
- ಎರಡು ವರ್ಷಗಳ ಅವಧಿಗೆ ಸಿಗುವ ಬಡ್ಡಿದರ 7%.
- ಮೂರು ವರ್ಷಗಳ ಅವಧಿಗೆ ಸಿಗುವ ಬಡ್ಡಿ ದರ 6.75%.
- ನಾಲ್ಕು ವರ್ಷಗಳ ಅವಧಿಗೆ ಸಿಗುವ ಬಡ್ಡಿದರ 6.75%.
- SBI ಐದು ವರ್ಷಗಳ ಅವಧಿಯ ಮೇಲೆ 6.5% ಬಡ್ಡಿದರವನ್ನು ನೀಡಲಿದೆ.
ಪೋಸ್ಟ್ ಆಫೀಸ್ ಬಡ್ಡಿ ದರ
ಅಂಚೆ ಕಚೇರಿಯು(Post Office) ಒಂದರಿಂದ ಐದು ವರ್ಷಗಳ ಅವಧಿಯ ಎಫ್ಡಿ ಯ ಮೇಲೆ, 6.7% ರಿಂದ 7.1% ಬಡ್ಡಿಯನ್ನು ನೀಡುತ್ತದೆ.
- ಒಂದು ವರ್ಷದ ಅವಧಿಗೆ ಪೋಸ್ಟ್ ಆಫೀಸ್ ನಲ್ಲಿ ಸಿಗುವ ಬಡ್ಡಿ 6.9%
- ಎರಡು ವರ್ಷಗಳ ಅವಧಿಗೆ ಸಿಗುವ ಬಡ್ಡಿ 7%
- ಮೂರು ವರ್ಷಗಳ ಅವಧಿಗೆ ಸಿಗುವ ಬಡ್ಡಿ 7.1%
- ನಾಲ್ಕು ವರ್ಷದ ಅವಧಿಯ ಎಫ್ ಡಿ ಯೋಜನೆ ಅಂಚೆ ಕಚೇರಿಯಲ್ಲಿ ಇಲ್ಲ.
- ಐದು ವರ್ಷಗಳ ಅವಧಿಯ ಮೇಲೆ ಸಿಗುವ ಬಡ್ಡಿ 6.7%
ಈ ಹೊಸ ಬಡ್ಡಿ ದರಗಳು 1 ಜನವರಿ ಯಿಂದ 31 ಜನವರಿಯವರಿಗೆ ಲಭ್ಯವಿರುತ್ತದೆ, ಇವುಗಳನ್ನು ನೀವು ಮುಂದುವರಿಸಬಹುದು ಇಲ್ಲ ಮಾರ್ಪಡಿಸಬಹುದು, ಈ ವರ್ಷದಲ್ಲಿ ಹೂಡಿಕೆ ಮಾಡಲು ಬಯಸುವವರು FD ದರಗಳನ್ನು ಪರಿಶೀಲಿಸಿ, ನಂತರ ಹೂಡಿಕೆ ಮಾಡಿ.