Post Office Scheme: ಕೇವಲ 5000 ಹೂಡಿಕೆ ಮಾಡಿ, 3,56,830 ಲಾಭ ಪಡೆಯಿರಿ. ಪೋಸ್ಟ್ ಆಫೀಸ್ ಹೊಸ ಯೋಜನೆ!
ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಭವಿಷ್ಯದ ಆರ್ಥಿಕ ಗುರಿಗಳಿರುತ್ತದೆ. ಗಳಿಸಿದ ಹಣದಲ್ಲಿ ಒಂದಿಷ್ಟು ಆರ್ಥಿಕತೆಯ (Finance) ಕೆಲಸಗಳನ್ನು ಪೂರೈಸಿಕೊಳ್ಳಲು ಹೂಡಿಗೆ ಮಾಡಬೇಕಾಗುತ್ತದೆ. ಕೆಲವೊಂದಿಷ್ಟು ಜನರು ತಪ್ಪಾದ ಯೋಜನೆಯಡಿಯಲ್ಲಿ ಹೂಡಿಕೆ (Investment)ಮಾಡಿ ಹಣವನ್ನು ಕಳೆದುಕೊಳ್ಳುತ್ತಾರೆ. ಇದೇ ಕಾರಣದಿಂದಾಗಿ ಜನರು ಖಾತರಿ ಆದಾಯ ಮತ್ತು ಸುರಕ್ಷತೆಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.
ಪೋಸ್ಟ್ ಆಫೀಸ್‌ನಲ್ಲಿರುವ ಹಲವು ಯೋಜನೆಗಳು!
ನೀವೇನಾದರೂ ಉತ್ತಮವಾದ ಸುರಕ್ಷಿತ ಹೂಡಿಕೆಯ ಆಯ್ಕೆಯನ್ನು ಹುಡುಕುತ್ತಿದ್ದರೆ, ಪೋಸ್ಟ್ ಆಫೀಸ್ನ ಮರುಕಳಿಸುವ ಠೇವಣಿ ಯೋಜನೆಯು ಉತ್ತಮವಾದ ಆಯ್ಕೆಯಾಗಿದೆ. ಈ ಯೋಜನೆಯು ಕಡಿಮೆ ಅಪಾಯ ಮತ್ತು ಉತ್ತಮ ಆದಾಯದಿಂದ ಕೇಂದ್ರ ಸರ್ಕಾರದ ಉತ್ತಮ ಆದಾಯದ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಕೇವಲ 5,000 ದಿಂದ ಆರಂಭಿಸಿ 3,56,830 ಲಾಭ ಪಡೆಯಬಹುದು.
ಮರುಕಳಿಸುವ ಠೇವಣಿ ಎಂದರೇನು?
ಮರುಕಳಿಸುವ ಠೇವಣಿ ಅಂದರೆ, ಪ್ರತಿ ತಿಂಗಳು ನಿಗದಿತ ಅವರಿಗೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವುದಾಗಿದೆ. ಉಳಿತಾಯ ಖಾತೆಗೆ ಹೋಲಿಕೆ ಮಾಡಿದರೆ ಬ್ಯಾಂಕ್ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ, ಯೋಜನೆಯಲ್ಲಿ ನೀವು ಮಾಸಿಕ ಸ್ವಲ್ಪ ಮೊತ್ತವನ್ನು ಠೇವಣಿ ಮಾಡುವಿರಿ, ಇದು ಕಾಲಾನಂತರದಲ್ಲಿ ಬಡ್ಡಿಯೊಂದಿಗೆ ಹೆಚ್ಚಾಗಲಿದೆ.
ಈ ಯೋಜನೆಯು 1 ರಿಂದ 5 ವರ್ಷಗಳವರೆಗೆ ಠೇವಣಿಗಳನ್ನು ಅನುವು ಮಾಡಿಕೊಡುತ್ತದೆ. ಪ್ರಸ್ತುತವಾಗಿ 5 ವರ್ಷಗಳ ಠೇವಣಿಯು ವಾರ್ಷಿಕವಾಗಿ 6.7% ಬಡ್ಡಿಯನ್ನು ಗಳಿಸುತ್ತದೆ. ನೀವು ಸ್ಥಿರ ಆದಾಯದೊಂದಿಗೆ ಸುರಕ್ಷಿತವಾದ ಉಳಿತಾಯವನ್ನು ಬಯಸುವುದಾದರೆ ಪೋಸ್ಟ್ ಆಫೀಸ್ RD ಅತ್ಯುತ್ತಮವಾದ ಆಯ್ಕೆಯಾಗಲಿದೆ.
ಪೋಸ್ಟ್ ಆಫೀಸ್ RD ಯೋಜನೆಯನ್ನು ಉದಾಹರಣೆಯ ಮೂಲಕ ನೋಡುವುದಾದರೆ, ನೀವೇನಾದರೂ 5 ವರ್ಷಗಳವರೆಗೆ ಪ್ರತಿ ತಿಂಗಳು 5000 ಠೇವಣಿ ಮಾಡಿದರೆ, ಐದು ವರ್ಷಗಳು ಪೂರ್ಣಗೊಂಡ ನಂತರ, ನಿಮ್ಮ ಹೂಡಿಕೆಯ ಮತವು 3 ಲಕ್ಷ ಆಗಿರುತ್ತದೆ, 6.7% ಬಡ್ಡಿ ದರದೊಂದಿಗೆ ನಿಮ್ಮ ಉಳಿತಾಯು 3,56,830ಕ್ಕೇ ಬೆಳೆಯುತ್ತದೆ, ಇಲ್ಲಿ ನೀವು ರೂ.56,830 ಹೆಚ್ಚುವರಿ ಯಾಗಿ ಪಡೆಯುವಿರಿ.
ಈ ಯಾರು ಹೂಡಿಕೆ ಮಾಡಬಹುದು?
ಈ ಯೋಜನೆಯಲಿ ಯಾವುದೇ ಭಾರತೀಯ ನಾಗರಿಕನು ಮರುಕಳಿಸುವ ಠೇವಣಿ ಖಾತೆಯನ್ನು ಪೋಸ್ಟ್ ಆಫೀಸ್ನಲ್ಲಿ ತೆರೆಯಬಹುದು. ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು, ನೀವು ತಿಂಗಳಿಗೆ ಕನಿಷ್ಠ ರೂ.100 ರಿಂದ ಆರಂಭಿಸಿ ಹೆಚ್ಚುವರಿಯಾಗಿ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.
ರೂ.500, ರೂ.600, ರೂ.700, ರೂ.900, ರೂ.1000 ದಂತಹ ಮೊತ್ತದೊಂದಿಗೆ ನೀವು ಪೋಸ್ಟ್ ಆಫೀಸ್(Post Office) ನಲ್ಲಿ ಮರುಕಳಿಸುವ ಠೇವಣಿ ಯೋಜನೆಯ ಮೂಲಕ ಸುಲಭವಾಗಿ ಹೂಡಿಕೆ ಮಾಡಬಹುದು, ಒಮ್ಮೆ ನೀವು ಒಂದು ಮೊತ್ತದೊಂದಿಗೆ ನಿಮ್ಮ ಹೂಡಿಕೆಯನ್ನು ಆರಂಭಿಸಿದರೆ, ನೀವು ಅದೇ ಮೊತ್ತವನ್ನು ಕೊನೆಯವರೆಗೆ ನಿರ್ವಹಿಸಬೇಕು, ಅದನ್ನು ಬದಲಾಯಿಸಲು ಸಾಧ್ಯವಿಲ್ಲ.
ಅಗತ್ಯವಿರುವ ದಾಖಲೆಗಳು!
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಪಾಸ್ಪೋರ್ಟ್ ಸೈಜ್ ಫೋಟೋ
- ಮೊಬೈಲ್ ಸಂಖ್ಯೆ
- ಬ್ಯಾಂಕ್ ಪಾಸ್ ಬುಕ್