POST OFFICE RECRUITMENT: ಭಾರತೀಯ ಅಂಚೆ ಇಲಾಖೆ ನೇಮಕಾತಿ 2024

POST OFFICE RECRUITMENT: ಭಾರತೀಯ ಅಂಚೆ ಇಲಾಖೆ ನೇಮಕಾತಿ 2024

ಭಾರತೀಯ ಅಂಚೆ ಇಲಾಖೆ(India Postal Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ, ಒಟ್ಟು 19 ಸ್ಟಾಫ್ ಕಾರ್ ಡ್ರೈವರ್(Staff Car Driver) ಹುದ್ದೆಗಳು ಖಾಲಿ ಇದ್ದು ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 12 ಜನವರಿ 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಿ ಪೋಸ್ಟ್ ಆಫೀಸ್(Post Office) ಉದ್ಯೋಗ ಪಡೆದುಕೊಳ್ಳಿ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ಸಂಬಳ, ಅರ್ಜಿ ಶುಲ್ಕ, ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯವಾಗಿದೆ, ಈ ಎಲ್ಲದರ ಕುರಿತಾಗಿ ಮಾಹಿತಿಯು ಕೆಳಗಿನಂತಿವೆ;

ಶೈಕ್ಷಣಿಕ ಅರ್ಹತೆ:

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಆಸಕ್ತ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:

ಭಾರತೀಯ ಅಂಚೆ ಇಲಾಖೆ ಹೊರಡಿಸಿದ ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠವಾಗಿ 27 ವರ್ಷ ವಯೋಮಿತಿಯನ್ನು ಮೀರಿರಬಾರದು, ಹಾಗೂ ಪ್ರವರ್ಗದ ಆಧಾರದ ಮೇಲೆ ವಯಸ್ಸಿನ ಸಡಲಿಕ್ಕೆ ಮಾಡಲಾಗಿದೆ.

ವಯೋಮಿತಿ ಸಡಿಲಿಕೆ:

  • ಒಬಿಸಿ ಅಭ್ಯರ್ಥಿಗಳು- 3 ವರ್ಷ
  • SC/ST ಅಭ್ಯರ್ಥಿಗಳು- 5 ವರ್ಷ

ವೇತನ ಪ್ರಕ್ರಿಯೆ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ  ರೂಪಾಯಿ19,900 ರಿಂದ 63,200 ರ ವರೆಗೆ ವೇತನವನ್ನು ನೀಡಲಾಗುತ್ತದೆ.

ಉದ್ಯೋಗದ ಸ್ಥಳ:

ಬಿಹಾರದ ಪಾಟ್ನಾ

ಆಯ್ಕೆಯ ವಿಧಾನ:

  • ಟ್ರೇಡ್ ಟೆಸ್ಟ್
  • ಡ್ರೈವಿಂಗ್ ಟೆಸ್ಟ್
  • ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನಯನ್ನು ಕೆಳಗೆ ನೀಡಲಾದ ಅಧಿಕೃತ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು;

ಅಸಿಸ್ಟೆಂಟ್‌ ಡೈರೆಕ್ಟರ್‌, ಮುಖ್ಯ ಪೋಸ್ಟ್‌ಮಾಸ್ಟರ್, ಜನರಲ್ ಕಚೇರಿ ಬಿಹಾರ ಸರ್ಕಲ್ ಪಾಟ್ನಾ-800001

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲಾರಂಭವಾದ ದಿನಾಂಕ 14 ಡಿಸೆಂಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಜನವರಿ 2025

 

WhatsApp Group Join Now
Telegram Group Join Now

Leave a Comment

copy
share with your friends.