Post Office: ಪೋಸ್ಟ್ ಆಫೀಸ್ ಬಂಪರ್ ಯೋಜನೆ! 2 ಲಕ್ಷಕ್ಕೆ ಸಿಗಲಿದೆ ರೂ.29776
ಪೋಸ್ಟ್ ಆಫೀಸ್ನಲ್ಲಿ ಬ್ಯಾಂಕ್ ಎಫ್ಡಿ ಗಿಂತ (Fixed Deposit) ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (Post Office Time Deposit) ಕೂಡ ಜನಪ್ರಿಯವಾಗಿದೆ. ಟಿಡಿ ಖಾತೆಯನ್ನು ಆರಂಭಿಸಿದರೆ, ನಿಗದಿತ ಅವಧಿಯ ಬಳಿಕ ನಿಮ್ಮ ಠೇವಣಿ ಮೆಚುರಿಟಿ ಅವಧಿಯಲ್ಲಿ ಲಾಭದಾಯಕವಾಗಿರುತ್ತದೆ. ಈ ಪ್ಲಾನ್ ಜನರು ಹೆಚ್ಚಿನ ಲಾಭ ಪಡೆಯಲು ಸಹಾಯಕವಾಗಲಿದೆ.
₹2 ಲಕ್ಷ ಠೇವಣಿ ಮಾಡಿದರೆ ಎಷ್ಟು ಸಿಗುತ್ತೆ;
ಪೋಸ್ಟ್ ಆಫೀಸ್ನಲ್ಲಿ ಎರಡು ವರ್ಷದ TD ಪ್ಲಾನ್ ಅಲ್ಲಿ ಪ್ರಸ್ತುತವಾಗಿ,7% ಬಡ್ಡಿದರ ನೀಡುತ್ತದೆ, ಈ ಪ್ಲಾನ್ ಅಲ್ಲಿ ನೀವು ರೂ. 2 ಲಕ್ಷ ಠೇವಣಿ ಇಟ್ಟರೆ, ಅವಧಿಯ ಬಳಿಕ ನೀವು ರೂ. 2,29,776 ರೂಪಾಯಿ ಪಡೆಯುವಿರಿ, ಇದರ ಅರ್ಥ ನಿಮಗೆ ಬಡ್ಡಿಯಾಗಿ ರೂ.29,776 ಹೆಚ್ಚುವರಿಯಾಗಿ ಸಿಗಲಿದೆ.
ಟಿಡಿ ಖಾತೆಯ ಪ್ರಮುಖ ಸೌಕರ್ಯಗಳು
ಪೋಸ್ಟ್ ಆಫೀಸ್ TD ಖಾತೆಯು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಇದು ತುಂಬಾ ಸುರಕ್ಷಿತವಾಗಿದೆ. ಈ ಖಾತೆಯನ್ನು ದೇಶದ ಯಾವುದೇ ನಾಗರಿಕರು ತೆರೆಯಬಹುದಾಗಿದೆ, ಕನಿಷ್ಠ ಮೊತ್ತ ರೂ.1,000 ಆಗಿದ್ದು, ಗರಿಷ್ಠ ಠೇವಣಿಗೆ ಮಿತಿ ಇಲ್ಲ. ಖಾತೆ ಉಳಿಯಲು ಪೋಸ್ಟ್ ಆಫೀಸ್ನಲ್ಲಿ ಒಂದು ಉಳಿತಾಯ ಖಾತೆ ಹೊಂದಿರಬೇಕು.
ಬ್ಯಾಂಕಿಗಿಂತ ಲಾಭದಾಯಕವೋ?
ಹೌದು, ಅದೇ ಹೇಗೆಂದರೆ ಪೋಸ್ಟ್ ಆಫೀಸ್ TD ಖಾತೆ ಹೆಚ್ಚಿನ ಬಡ್ಡಿ ನೀಡುವುದರಿಂದ, ಇದು ಬ್ಯಾಂಕಿನ ಎಫ್ಡಿ ಗಿಂತ ಲಾಭದಾಯಕ, ಹೆಚ್ಚಿನ ಭದ್ರತೆ ಮತ್ತು ಖಚಿತ ಲಾಭ ನೀಡುವ ಈ ಯೋಜನೆ ನಿಮ್ಮ ಉಳಿತಾಯದ ಭವಿಷ್ಯವನ್ನು ಬಲಪಡಿಸಲಿದೆ.