PM Svanidhi Yojana ಆಧಾರ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ ಜಾಮೀನು ರಹಿತ 50, 000ರೂ. ಸಾಲ

PM Svanidhi Yojana ಆಧಾರ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ ಜಾಮೀನು ರಹಿತ 50,000 ರೂ. ಸಾಲ

ಆಧಾರ್ ಕಾರ್ಡ್ ಮೂಲಕ ಯಾವುದೇ ಜಾಮೀನು ಇಲ್ಲದೆ 50 ಸಾವಿರ ಸಾಲ ಪಡೆಯುವ ಪಿಎಮ್ ಸ್ವನಿಧಿ ಯೋಜನೆಗೆ (PM Svanidhi Yojana) ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ಮಾಹಿತಿಯು ಇಲ್ಲಿದೆ.

WhatsApp Group Join Now
Telegram Group Join Now

ಸಣ್ಣಪುಟ್ಟ ವ್ಯಾಪಾರಸ್ಥರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲಾ ಬಗೆಯ ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರವು ಈಗಾಗಲೇ ಜಾರಿಗೆ ತಂದಿದೆ. ಜೊತೆಗೆ ಈ ಎಲ್ಲ ಯೋಜನೆಗಳಿಗೆ ಸುಲಭದಲ್ಲಿ ಸಾಲವನ್ನು ನೀಡಲಾಗುತ್ತಿದೆ, ಚಿಕ್ಕ ಪುಟ್ಟ ವ್ಯಾಪಾರಿಗಳನ್ನು ಬೆಂಬಲಿಸುವ ಉದ್ದೇಶದಿಂದ ಮತ್ತು ಅವರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಸೋ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಎಲ್ಲಾ ಯೋಜನೆಗಳಲ್ಲಿ PM Svanidhi Yojana ಕೂಡ ಒಂದಾಗಿದೆ.

Covid 19 ಸಂದರ್ಭದಲ್ಲಿ, ಹಲವರ ಜೀವನ ಅಸ್ತವ್ಯಸ್ತಗೊಂಡಿತ್ತು, ಅದರಲ್ಲೂ ಬೀದಿಬದಿ ವ್ಯಾಪಾರಿಗಳ ಜೀವನವಂತು ಶೋಚನೀಯ, ಅವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಪ್ರಯೋಜನವೂ ಕೂಡ ತುಂಬಾ ಉಪಕಾರಿಯಾಗಿದೆ.

ಆಧಾರ್ ಕಾರ್ಡ್ ಹೊಂದಿರುವ ಫಲಾನುಭವಿಗಳು  ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಯಾವುದೇ ಖಾತರಿ ಇಲ್ಲದೆ ಅಂದರೆ, ಯಾವುದೇ ಜಾಮೀನು ಇಲ್ಲದೆ ಸಾಲವನ್ನು ಪಡೆಯಬಹುದು. ಈ ಯೋಜನೆಯನ್ನು ಕೇಂದ್ರ ಸರ್ಕಾರವು ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ಅಂದರೆ ಬೀದಿಬದಿ ವ್ಯಾಪಾರಿಗಳಿಗೆ ಸಹಾಯವಾಗಲಿ ಎಂದು ಈ ಯೋಜನೆಯನ್ನು ಜಾರಿಗೆ ತಂದಿದೆ.

ಪಿಎಂ ಸ್ವ ನಿಧಿ ಯೋಜನೆಯ ಕುರಿತು ಹೇಳುವುದಾದರೆ, ಆರಂಭದಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ರೂ.10 ಸಾವಿರ ರೂಪಾಯಿಗಳವರೆಗೆ ಸಾಲ ನೀಡಲಾಗುತ್ತದೆ, ಈ ಸಾಲವು ಅವರಿಗೆ ಚಿಕ್ಕಪುಟ್ಟ ವ್ಯಾಪಾರ ನಡೆಸಲು ಸಹಾಯವಾಗಲಿದೆ, ವ್ಯಾಪಾರಿಗಳು ಈ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ, ನಂತರ ಅವರು 20,000 ಸಾಲ ಪಡೆಯಬಹುದು, ಈ ಸಾಲವನ್ನು ಕೂಡ ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಿದರೆ, ಕೊನೆಯಲ್ಲಿ ಅವರಿಗೆ ರೂ.50,000 ಸಾಲ ಸಿಗಲಿದೆ.

ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯಡಿ ಸಾಲ ಪಡೆಯುವವರಿಗೆ ಯಾವುದೇ ಶುರಿಟ್ ಬೇಕಾಗಿಲ್ಲ, ಆದರೆ ಸಾಲ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ, ಫಲಾನುಭವಿಗಳು ಆಧಾರ್ ಕಾರ್ಡ್ ಬಳಸಿ ಈ ಯೋಜನೆಗೆ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬಹುದು. ಪಡೆದ ಸಾಲವನ್ನು 12 ತಿಂಗಳ ಒಳಗೆ ಮರುಪಾವತಿ ಮಾಡಬೇಕು, ಆಧಾರ್ ಅಪ್ಡೇಟ್ ಆಗಿರಬೇಕು.

ಸರ್ಕಾರದ ಕಲ್ಯಾಣ ಯೋಜನೆಗಳಿಂದ ಭವಿಷ್ಯದ ಪ್ರಯೋಜನಗಳಿಗಾಗಿ ಸಾಲಗಾರರು ನಗರ ಸ್ಥಳೀಯ ಸಂಸ್ಥೆಗಳಿಂದ (ULB) ಶಿಫಾರಸ್ಸು ಪತ್ರವನ್ನು ಪಡೆಯಬೇಕಾಗುತ್ತದೆ. ಸಾಲಗಾರರು ಅಧಿಕೃತ ವೆಬ್ಸೈಟ್ ಇಲ್ಲವೇ CSC (ಸಾಮಾನ್ಯ ಸೇವಾ ಕೇಂದ್ರ) ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸಾಲದ ಬಡ್ಡಿ ನೋಡುವುದಾದರೆ, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳ ಬಡ್ಡಿ ದರಗಳು ಚಾಲ್ತಿಯಲ್ಲಿರುವ ದರಗಳಂತೆಯೇ ಇರುತ್ತದೆ. NBFC,NBFC-MFI ಇತ್ಯಾದಿಗಳಿಗೆ ಬಡ್ಡಿ ದರಗಳು ಸಾಲದಾತ ವರ್ಗಕ್ಕೆ RBI ಮಾರ್ಗ ಸೂಚಿಗಳ ಪ್ರಕಾರ ಇರುತ್ತದೆ.

https://pmsvanidhi.mohua.gov.in/Home/PreApplication

ಸಾಲಗಾರರು ಅರ್ಜಿ ಸಲ್ಲಿಸಿರುವ ಮೇಲೆ ನೀಡಿದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

 

Leave a Comment

WhatsApp Group Join Now
Telegram Group Join Now