PM KISSAN MONEY 19ನೇ ಕಂತಿನ ಹಣ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಿ
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM KISSAN) ಯೋಜನೆಯಡಿ 19ನೇ ಕಂತಿನ 2000 ರೂ. ಹಣವನ್ನು ಪಡೆಯಲಿರುವ ಅರ್ಹರಿ ತರ ಪಟ್ಟಿ ಬಿಡುಗಡೆಯಾಗಿದ್ದು, ರೈತರು ಅಧಿಕೃತ ವೆಬ್ಸೈಟ್ಗೆ(Website) ಭೇಟಿ ನೀಡಿ ತಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಬಹುದು..
ಕೇಂದ್ರ ಸರ್ಕಾರದ ಈ ಯೋಜನೆಯನ್ನು 2019 ರಿಂದ ದೇಶದ ಎಲ್ಲಾ ವರ್ಗದ ರೈತನಿಗೆ ಅನುಕೂಲವಾಗುವಂತೆ ರಸಗೊಬ್ಬರ ಮತ್ತು ಬಿತ್ತನೆ ಬೀಜ ಖರೀದಿ ಮಾಡಲು ಆರ್ಥಿಕ ನೆರವು ನೀಡುವ ಸಲುವಾಗಿ ಈ ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ, ಈ ಯೋಜನೆಯಡಿ ಇಲ್ಲಿಯವರೆಗೆ ರೈತರ ಖಾತೆಗೆ 18 ಕಂತುಗಳ PM KISSAN MONEY ಜಮಾ ಆಗಿದ್ದು ಒಟ್ಟು 36,000 ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗಿದೆ.
ಅರ್ಹ ರೈತರು ಈ ಯೋಜನೆ ಅಡಿ, ಒಂದು ವರ್ಷಕ್ಕೆ ರೂ.6000 ಆರ್ಥಿಕ ನೆರವನ್ನು ಪಡೆಯಲಿದ್ದಾರೆ, ಹಣವು ನೇರವಾಗಿ ರೈತರ ಬ್ಯಾಂಕ್ ಖಾತೆಗೆ (Bank Account) ಜಮಾ ಆಗುತ್ತದೆ. ಅದರಂತೆ ಕೊನೆಯ 19ನೇ ಕಂತಿನ ಹಣವನ್ನು ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆಯಾಗಿದ್ದು, ಅರ್ಹ ರೈತರು ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಚೆಕ್ ಮಾಡಿಕೊಳ್ಳಬಹುದು..
ರೈತರು ತಮ್ಮ ಮೊಬೈಲ್ ನಲ್ಲಿ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ನೋಡುವುದು ಹೇಗೆ? ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದ್ದು, ಅರ್ಹ ರೈತರು ಪೂರ್ಣ ಮಾಹಿತಿಯನ್ನು ಸರಿಯಾಗಿ ಓದಿ, ಮಾಹಿತಿ ಉಪಯುಕ್ತವೆನಿಸಿದರೆ ನಿಮ್ಮ ವಾಟ್ಸಪ್ ಗುಂಪುಗಳಲ್ಲಿ ಶೇರ್ ಮಾಡಿ.
19ನೇ ಕಂತಿನ ಪಿಎಂ ಕಿಸಾನ್ ಹಣ ಪಡೆಯಲು ಅರ್ಹ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡುವುದು ಹೇಗೆ?
ನೀವು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ಪಿಎಂ ಕಿಸನ್(PM KISSAN) ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಕೆಳಗೆ ನೀಡಿರುವ ಹಾಗೆ ಎಲ್ಲಾ ಹಂತಗಳನ್ನು ಸರಿಯಾಗಿ ಅನುಸರಿಸಿ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಎಂದು ಒಮ್ಮೆ ಚೆಕ್ ಮಾಡಿಕೊಳ್ಳಬಹುದು..
ಹಂತ 1: ನೀವು ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ನಂತರ PM KISSAN Beneficiary List ಮೇಲೆ ಕ್ಲಿಕ್ ಮಾಡಿ, ಅಧಿಕೃತ ಪಿಎಂ ಕಿಸಾನ್ ಸಮ್ಮಾನ್ ಇದೆಯಾ ಯೋಜನೆಯ ಜಾಲತಾಣಕ್ಕೆ ಪ್ರವೇಶ ಪಡೆಯಬೇಕು.
ಹಂತ 2: ನಂತರ ಬಲಬದಿಯ ಕೆಳಭಾಗದ ಕೊನೆಯಲ್ಲಿ ಕಾಣುವ Beneficiary List ಮೇಲೆ ಕ್ಲಿಕ್ ಮಾಡಬೇಕು.
ಹಂತ 3: ನೀವು Beneficiary List ಮೇಲೆ ಕ್ಲಿಕ್ ಮಾಡಿದ ನಂತರ, ಪೇಜ್ ನಲ್ಲಿ ಕಾಣುವ ರಾಜ್ಯ: Karnataka ಎಂದು ಕ್ಲಿಕ್ ಮಾಡಿ ನಂತರ ನಿಮ್ಮ ಸರಿಯಾದ ಜಿಲ್ಲೆ, ತಾಲೂಕು, ಹೋಬಳಿ ಮತ್ತು ನಿಮ್ಮ ಹಳ್ಳಿಯ ಹೆಸರನ್ನು ಸರಿಯಾಗಿ ಗುರುತಿಸಿ ‘Get Report ‘ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ, ನಿಮ್ಮ ಹಳ್ಳಿಯ ಎಲ್ಲಾ ರೈತರ ಪಟ್ಟಿ ಸಿಗುತ್ತದೆ, ಒಮ್ಮೆ ಸಂಪೂರ್ಣ ಪಟ್ಟಿ ನೋಡಿದ ನಂತರ ಅಲ್ಲಿ ನಿಮ್ಮ ಹೆಸರು ಇದೆಯಾ ಎಂದು ಖಚಿತಪಡಿಸಿಕೊಳ್ಳಿ.
PM ಕಿಸಾನ್ ಹಣ ಪಡೆಯಲು ನೀವು ಈ ಕೆಲಸ ಮಾಡುವುದು ಕಡ್ಡಾಯ!
ನೀವು ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯ ಹಾರ್ದಿಕ ನೆರವನ್ನು ಪಡೆಯಲು E-kyc ಯನ್ನು, ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿ, ಅರ್ಜಿದಾರರ ಹೆಸರು ಮತ್ತು ಜಮೀನಿನ ಹೆಸರು ಒಂದೇ ಇದೆಯಾ ಎಂದು ಚೆಕ್ ಮಾಡಿ, ಸರಿ ಇಲ್ಲದಿದ್ದಲ್ಲಿ ನಿಮಗೆ 19ನೇ ಕಂತಿನ ಹಣ ಪಡೆಯಲು ಸಾಧ್ಯವಾಗುವುದಿಲ್ಲ.
ಈ ಯೋಜನೆಯಡಿ ಆರ್ಥಿಕ ನೆರವು ಪಡೆಯುತ್ತಿರುವ ರೈತರು ಓಮ್ಮೆ KYC ಆಗಿದೆಯ ಎಂದು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಚೆಕ್ ಮಾಡಿಕೊಳ್ಳಿ.
ಈ ತಿಂಗಳಲ್ಲಿ 19ನೇ ಕಂತಿನ ಪಿಎಂ ಕಿಸಾನ್ ಹಣ ಜಮಾ ಆಗಲಿದೆ:
ಕೇಂದ್ರ ಸರ್ಕಾರವು ವರ್ಷದ ಕೊನೆಯ ಕಂತಿನ ಹಣವನ್ನು ಫೆಬ್ರವರಿ-ಮಾರ್ಚ್ ತಿಂಗಳ ಮಧ್ಯದಲ್ಲಿ ರೈತರ ಖಾತೆಗೆ ನೇರ ವರ್ಗಾವಣೆ ಮಾಡುವ ಮೂಲಕ ಜಮಾ ಮಾಡುತ್ತಾರೆ, ಇದರಂತೆ 19ನೇ ಕಂತಿನ ಹಣವನ್ನು ರೈತರು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ನಡುವೆ ನಿರೀಕ್ಷಿಸಬಹುದು, ಆ ಎರಡು ತಿಂಗಳ ಮಧ್ಯೆ ಪಿಎಂ ಕಿಸಾನ್ ಹಣವನ್ನು ಜಮಾ ಮಾಡುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳಿಂದ ಮಾಹಿತಿಯು ಲಭ್ಯವಾಗಿದೆ.