PM KISSAN: ಡಿಸೆಂಬರ್ 31ರ ಒಳಗೆ ರೈತರು ಈ ಕೆಲಸ ಮಾಡುವುದು ಕಡ್ಡಾಯ! ಇಲ್ಲದಿದ್ದರೆ ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಬರುವುದಿಲ್ಲ!
ಕೇಂದ್ರ ಸರ್ಕಾರವು ದೇಶದ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಪ್ರಧಾನಮಂತ್ರಿ ಕಿಸಾನ್ ಸನ್ಮಾನ್(PM KISSAN) ನಿಧಿ ಯೋಜನೆಯನ್ನು ಆರಂಭಿಸಿದೆ, ಈ ಯೋಜನೆ ಅಡಿ ಪ್ರತಿ ವರ್ಷ ರೈತರ ಖಾತೆಗೆ ರೂ.6000 ನೇರವಾಗಿ ವರ್ಗಾವಣೆಯಾಗುತ್ತದೆ. ರೈತರು ಈ ಮೊತ್ತವನ್ನು ಮೂರು ಕಂತುಗಳ ರೂಪದಲ್ಲಿ ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಪಡೆಯುತ್ತಾರೆ, ಕಿಸಾನ್ ಸಮ್ಮಾನ್ ನಿಧಿಯ 19ನೇ ಕಂತಿನ ಹಣ ಇನ್ನೇನು ಬಿಡುಗಡೆಯ ಹಂತದಲ್ಲಿದೆ, ನೀವು ಈ ಹಣಕ್ಕಾಗಿ ಕಾಯುತ್ತಿದ್ದರೆ ಈ ಪ್ರಮುಖ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ ಇಲ್ಲದಿದ್ದರೆ ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಬರುವುದಿಲ್ಲ, ಯಾವ ಕೆಲಸ ಎಂಬ ಮಾಹಿತಿಯು ಕೆಳಗಿನಂತಿವೆ;
19ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ?
ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ(Installment) ಹಣವು 2025 ರ ಫೆಬ್ರವರಿ ಮೊದಲನೇ ವಾರದಲ್ಲಿ ರೈತರ ಖಾತೆಗೆ ಜಮಾ ಆಗಲಿದೆ ಎನ್ನಲಾಗಿದೆ, 18ನೇ ಕಂತಿನ ಹಣವು ಈಗಾಗಲೇ ಅಕ್ಟೋಬರ್ 2024ರಲ್ಲಿ ಬಿಡುಗಡೆಯಾಗಿತ್ತು, ಮುಂದಿನ ಕಂತಿನ ಮೊದಲು ರೈತರು ತಮ್ಮ ರೈತ ನೊಂದಣಿ(Farmer registration)ಯನ್ನು ಮಾಡಿಸಿಕೊಳ್ಳುವುದು ಬಹುಮುಖ್ಯವಾಗಿದೆ, ಇದಕ್ಕೆ 31 ಡಿಸೆಂಬರ್ ಗಡುವನ್ನು (Last Date) ನೀಡಲಾಗಿದೆ.
ಡಿಸೆಂಬರ್ 31 ರೊಳಗೆ ಈ ಪ್ರಕ್ರಿಯೆ ಮಾಡುವುದು ಕಡ್ಡಾಯ!
ರೈತರು ತಮ್ಮ ನಂದಣಿಯನ್ನು ಮಾಡಲು, ಅವರ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಪ್ರಮುಖವಾಗಿರುತ್ತದೆ, ರೈತರು ಒಟಿಪಿ (OTP) ಮತ್ತು ತಮ್ಮ ಫೇಸ್ ಐಡಿ (Face ID) ಮೂಲಕ ನೊಂದಾಯಿಸಿಕೊಳ್ಳಬಹುದು. ಈ ರೀತಿ ಆಯ್ತಾ ನೊಂದಣಿಯನ್ನು ಮಾಡಿಕೊಂಡರೆ ಸಮ್ಮಾನ್ ನಿಧಿಯಡಿ ನೀಡಲಾಗುವ ಮೊತ್ತವನ್ನು ಮಾತ್ರ ರೈತರು ಪಡೆಯಲು ಸಾಧ್ಯವಾಗುತ್ತದೆ, ಇದಲ್ಲದೆ ರೈತರಿಗೆ ಬೆಳೆ ವಿಮೆಯ ಲಾಭ ಕೂಡ ದೊರೆಯಲಿದೆ. ರೈತನೊಂದಣಿಯನ್ನು ಮಾಡಿಸಿಕೊಂಡರೆ, ರಸ ಗೊಬ್ಬರಗಳು, ಬೀಜಗಳು, ಕೃಷಿ ಉಪಕರಣಗಳು, ಬ್ಯಾಂಕ್ ಸಾಲಗಳು, ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಮೇಲೆ ರಿಯಾಯಿತಿಯನ್ನು ಪಡೆಯಲು ಸುಲಭವಾಗುತ್ತದೆ.
ಮೊಬೈಲ್ ಸಂಖ್ಯೆಯನ್ನು ಸಕ್ರಿಯಗೊಳಿಸುವುದು ಮುಖ್ಯವಾಗಿರುತ್ತದೆ.
ರೈತರು ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು, KYC ಯಲ್ಲಿ ನೊಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿರಿಸಿಕೊಳ್ಳುವುದು ಬಹು ಮುಖ್ಯ. ಈ ಮೊಬೈಲ್ ಸಂಖ್ಯೆಯನ್ನು ರೈತರ ಆಧಾರ್ ಕಾರ್ಡ್ ಗೆ ಲಿಂಕ್ (Aadhar-Mobile link) ಮಾಡಿರಬೇಕು, ಆಧಾರ್ ಮತ್ತು ಮೊಬೈಲ್ ನಂಬರ್ ಸಕ್ರಿಯಗೊಳಿಸದಿದ್ದರೆ ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು ತೊಂದರೆಯಾಗುತ್ತದೆ, ಇದಕ್ಕಾಗಿ ನೀವು E-KYC ಮಾಡಿಸಿಕೊಳ್ಳುವುದು ಅವಶ್ಯಕ, KYC ಮಾಡಿಸಿಲ್ಲವೆಂದರೆ OTP ನಿಮ್ಮ ಮೊಬೈಲ್ ಸಂಖ್ಯೆಗೆ ಬರುವುದಿಲ್ಲ, ಇನ್ನು ನೀವು ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದರೆ,PM KISSAN ಯೋಜನೆಯ ಅಧಿಕೃತ ವೆಬ್ ಸೈಟ್ ಗ ಭೇಟಿ ನೀಡಿ ಲಿಂಕ್ ಮಾಡಬಹುದು.
ಮೇಲೆ ನೀಡಲಾದ ಅಧಿಕೃತ ವೆಬ್ ಸೈಟ್ ಗ ಭೇಟಿ ನೀಡಿ, ಅಲ್ಲಿ ‘ಅಪ್ಡೇಟ್ ಮೊಬೈಲ್ ಸಂಖ್ಯೆ/ Update Mobile Number’ ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರ ಆಧಾರ್ ಸಂಖ್ಯೆ ಅಥವಾ ನೊಂದಣಿ ಮತ್ತು ಕ್ಯಾಪ್ಚ ಕೋಡ್ ನಮೂದಿಸುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಬಹುದು.