PM KISSAN: ಪಿಎಂ ಕಿಸಾನ್ ಸಹಾಯಧನ ಹೆಚ್ಚಳ! ಏಷ್ಟು ಪ್ರಮಾಣದಲ್ಲಿ ಹೆಚ್ಚಳ ಸಂಪೂರ್ಣ ಮಾಹಿತಿ ಇಲ್ಲಿದೆ;
ದೇಶದ ರೈತರಿಗೆ ಆರ್ಥಿಕ ಬೆಂಬಲ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM KISSAN) ಯೋಜನೆಯನ್ನು ಜಾರಿಗೊಳಿಸಿದೆ. ದೇಶದಾದ್ಯಂತ ಕೃಷಿ ಭೂಮಿಯನ್ನು ಹೊಂದಿರುವ ಹಾಗೂ ಕೆಲವು ಮಾನದಂಡಗಳಿಗೆ ಒಳಪಟ್ಟ ರೈತರ ಕುಟುಂಬಗಳಿಗೆ ವಾರ್ಷಿಕ ಹಣಕಾಸಿನ ನೆರವನ್ನು ನೀಡುವ ಸಲುವಾಗಿ ಈ ಯೋಜನೆಯಡಿ ಹಣವನ್ನು ನೀಡಲಾಗುತ್ತದೆ, ಈ ಯೋಜನೆಯಡಿ ರೈತರ ಬ್ಯಾಂಕ್ (Bank) ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ.
ಈ ಯೋಜನೆ ಅಡಿ ದೇಶದ ಅರ್ಹ ರೈತರಿಗೆ ವಾರ್ಷಿಕವಾಗಿ ರೂ.6000 ಅನ್ನು ಮೂರು ಸಮಾನ ಕಂತುಗಳಲ್ಲಿ ಅಂದರೆ 4 ತಿಂಗಳಿಗೆ ಒಮ್ಮೆ ರೂ.2000 ನೇರವಾಗಿ ರೈತರ ಆಧಾರ್ ಸೀಡೆಡ್ ಬ್ಯಾಂಕ್ ಖಾದಿ ಗಳಿಗೆ ವರ್ಗಾಯಿಸಲಾಗುತ್ತದೆ. ಆದರೆ ಈಗ ಈ ಹಣವನ್ನು, ವಾರ್ಷಿಕವಾಗಿ ರೂ.12000 ನೀಡಲಾಗುತ್ತದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಿಸಾನ್ ಸಮ್ಮಾನ್ ನಿಧಿ ಮೊತ್ತ ಏರಿಕೆ?;
25 26 ನೇ ಸಾಲಿನ ಕೇಂದ್ರ ಬಜೆಟ್ ಸಭೆಯಲ್ಲಿ ಇತ್ತೀಚಿಗೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು, ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಸಂಘಟನೆಗಳ ಮುಖ್ಯಸ್ಥರು, ಪ್ರಮುಖರು ಹಲವು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದರು.
ರೈತರು ಬೇಡಿಕೆಟ್ಟ ಪ್ರಮುಖ ಅಂಶಗಳು, ದೀರ್ಘಾವಧಿ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸುವುದು, ಕನಿಷ್ಠ ಬೆಂಬಲ ಬೆಲೆ ಯೋಜನೆ, ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಆರ್ಥಿಕ ನೆರವನ್ನು ರೂ. 12,000 ಗಳಿಗೆ ಏರಿಕೆ ಮಾಡುವುದು ಮುಂತಾದವುಗಳ ಕುರಿತು ಸರ್ಕಾರದ ಗಮನವನ್ನು ಸೆಳೆಯಲಾಯಿತು.
ಕೇಂದ್ರದ ಹಣಕಾಸು ಸಚಿವರ ಮುಂದೆ ದೀರ್ಘಾವಧಿ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಶೆ.1 ರಷ್ಟು ನಿಗದಿಗೊಳಿಸಬೇಕು ಎಂದು ಬೇಡಿಕೆ ಸಲ್ಲಿಸಲಾಯಿತು, ಇದೇ ಮಾದರಿಯಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡುವ ಆರ್ಥಿಕ ನೆರವನ್ನು ರೂ. 6,000 ದಿಂದ 12 ಸಾವಿರಕ್ಕೆ ಏರಿಕೆ ಮಾಡುವ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡಬೇಕು ಎಂದು ಮನವಿಯನ್ನು ಸಲ್ಲಿಕೆ ಮಾಡಲಾಗಿದೆ.
ಜೊತೆಗೆ, ಸಣ್ಣ ರೈತರಿಗೆ ಶೂನ್ಯ ಪ್ರೀಮಿಯಂ(zero premium) ಬೆಳೆ ವಿಮೆ ಯೋಜನೆಯನ್ನು ಜಾರಿಗೊಳಿಸಬೇಕು, ಪ್ರಧಾನ ಮಂತ್ರಿ ಫಸಲ್ ಭೀಮಾ(Pasal Bheema) ಯೋಜನೆಯಡಿ ಈ ನೆರವನ್ನು ಒದಗಿಸಿದರೆ ಬೆಳೆ ನಷ್ಟವಾದಾಗ ಲಕ್ಷಾಂತರ ಸಣ್ಣ ಹರಿತರಿಗೆ ಅನುಕೂಲವಾಗಲಿದೆ ಎಂದು ರೈತ ಸಂಘಟನೆ ಮುಖ್ಯಸ್ಥರು ಸಚಿವರ ಗಮನವನ್ನು ಸೆಳೆದರು.
GST ವ್ಯಾಪ್ತಿಯಿಂದಾಗಿ ರೈತರಿಗೆ ಅಗತ್ಯವಾದ ಹೊಸ ಗೊಬ್ಬರ ಯಂತ್ರೋಪಕರಣ ಬೀಜ ಮತ್ತು ಔಷಧಿಗಳನ್ನು ಹೊರಗಿಡಬೇಕು, ಆಗ ಬೀಜಗಳ ದರಗಳು ಕಡಿಮೆಯಾಗಲಿದ್ದು ರೈತರಿಗೆ ಕೊಂಡುಕೊಳ್ಳಲು ಸಹಾಯವಾಗದೆ ಎಂದು ಸಚಿವರಿಗೆ ಮನವಿಯನ್ನು ಸಲ್ಲಿಸಲಾಗಿದೆ.
ಸದ್ಯದಲ್ಲಿ ಕೇವಲ 23 ಉತ್ಪನ್ನಗಳಿಗೆ ಮಾತ್ರ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಜಾರಿದೆ, ಇದನ್ನು ಇನ್ನಷ್ಟು ಉತ್ಪನ್ನಗಳಿಗೆ ವಿಸ್ತರಣೆ ಮಾಡಬೇಕಾಗಿದೆ. ಅದರಿಂದಾಗಿ ರೈತರ ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗಲಿದ್ದು, ಅವರಿಗೂ ಅನುಕೂಲವಾಗಿ ಕೃಷಿ ಉತ್ಪಾದನೆಯು ಹೆಚ್ಚಳವಾಗಲಿದೆ ಎಂದು ತಿಳಿಸಿದರು.