Drive Scheme: ಕೇಂದ್ರದಿಂದ ದ್ವಿಚಕ್ರ ವಾಹನ ಖರೀದಿಸಲು ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?
PM E DRIVE SCHEME: ದೇಶದಲ್ಲಿ ವಿದ್ಯುತ್ ಚಲನಶೀಲತೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆಯು ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ 11 ಸಪ್ಟೆಂಬರ್ 2024 ರಂದು ಅನುಮೋದನೆಯನ್ನು ಕಂಡಿತ್ತು. ಈ ಯೋಜನೆಯಡಿ ಎರಡು ವರ್ಷದಲ್ಲಿ 19,000 ಕೋಟಿ ಆರ್ಥಿಕ ವೆಚ್ಚವನ್ನು ಹೊಂದಿದೆ.
PM E DRIVE ಯೋಜನೆಯ ಉದ್ದೇಶವೇನು?
ಡೀಸೆಲ್, ಪೆಟ್ರೋಲ್ ಚಾಲಿತ ವಾಹನಗಳಿಂದ ಪರಿಸರದಲ್ಲಿ ಸಾಕಷ್ಟು ವಾಯುಮಾಲಿನ್ಯಗಳು ಹೆಚ್ಚಾಗುತ್ತಿದ್ದು, ಇದನ್ನು ಹತೋಟಿಗೆ ತರುವ ಉದ್ದೇಶದಿಂದ ವಿದ್ಯುತ್ ಚಾಲಿತ ವಾಹನದ ಉಪಯೋಗವನ್ನು ಹೆಚ್ಚಿಸುವುದಾಗಿದೆ.
ಈ ಯೋಜನೆ ಅಡಿ ದ್ವಿಚಕ್ರ ವಾಹನ ಖರೀದಿಸುವವರಿಗೆ ಕೇಂದ್ರ ಸರ್ಕಾರವು ರೂ.32,000 ಸಹಾಯಧನವನ್ನು ನೀಡಲಿದೆ.
ಯಾವ ವಾಹನಗಳಿಗೆ ಎಷ್ಟು ಸಬ್ಸಿಡಿ ಸಿಗಲಿದೆ?
ದ್ವಿಚಕ್ರ ವಾಹನ ಖರೀದಿಸುವವರಿಗೆ ಮೊದಲ ವರ್ಷದಲ್ಲಿ ರೂ.10,000 ಹಾಗೂ ಎರಡನೇ ವರ್ಷದಲ್ಲಿ ರೂ.5,000 ಸಬ್ಸಿಡಿ ನೀಡಲಾಗುವುದು.
ತ್ರಿಚಕ್ರ ವಾಹನಗಳಿಗೆ ಮೊದಲ ವರ್ಷ 25 ಸಾವಿರ ಹಾಗೂ ಎರಡನೇ ವರ್ಷದಲ್ಲಿ 12,500 ರೂ. ಸಬ್ಸಿಡಿ ನೀಡಲಾಗುವುದು.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
pmedrive.heavyindustries.gov.in/
ಈ ಯೋಜನೆ ಅಡಿ ಲಾಭ ಪಡೆಯುವವರು ಮೊದಲು ನಿಮ್ಮ ವಿದ್ಯುತ್ ವಾಹನವನ್ನು, ನಿಮ್ಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೊಂದಣಿ ಮಾಡಿಸಿ, ನಂತರ ನಿಮ್ಮ ವಾಹನದ ಡೀಲರ್ ಮತ್ತು ಆಧಾರ್ ಸಂಖ್ಯೆ ಬಳಸಿ E-Voucher ಪಡೆಯಿರಿ.
ದ್ವಿಚಕ್ರ ವಾಹನ ಸಹಾಯಧನದ ಇನ್ನಷ್ಟು ಮಾಹಿತಿಗೆ ಮೇಲೆ ನೀಡಲಾದ ಅಧಿಕೃತ ವೆಬ್ಸೈಟ್ಗೆ, ಭೇಟಿ ನೀಡಿ ಪ್ರಮುಖ ಮಾಹಿತಿಯನ್ನು ಪಡೆದುಕೊಳ್ಳಿ.