PM Awas Yojana: ಮನೆ ಕಟ್ಟುವವರಿಗೆ ಕೇಂದ್ರ ಸರಕಾರದಿಂದ ಸಿಗಲಿದೆ 2.30 ಲಕ್ಷ ರೂ. ಹಣವನ್ನು ಪಡೆಯುವುದು ಹೇಗೆ?
ಪ್ರತಿಯೊಬ್ಬರಿಗೂ ಕೂಡ ತನ್ನದೇ ಆದ ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಎನ್ನುವ ಕನಸು ಇದ್ದೇ ಇರುತ್ತದೆ, ಆದರೆ ಒಂದು ಮನೆ ನಿರ್ಮಾಣ ಮಾಡುವುದು ತಮಾಷೆಯ ಮಾತಲ್ಲ. ಕೆಲವರು ಸಾಲ(Home Loan) ಮಾಡಿ ಮನೆ ಕಟ್ಟುತ್ತಾರೆ, ಅವರಿಗೆ 20 ವರ್ಷ ಬಡ್ಡಿ (Intrest) ಕಟ್ಟೋಕೆ ಆಗದೆ ತುಂಬಾ ಕಷ್ಟ ಪಡುತ್ತಾರೆ. ಬಡವರಿಗಂತೂ ಸ್ವಂತ ಮನೆ ಅನ್ನುವುದು ಒಂದು ಕನಸಾಗಿ ಇರುತ್ತದೆ, ಹಲವರಿಗೆ ಅದು ಕನಸಾಗಿಯೇ ಇರುತ್ತದೆ. ಈಗ ಮೋದಿ ಸರ್ಕಾರವು ಬಡವರಿಗೂ ಕೂಡ ಈ ಕನಸನ್ನು ನನಸು ಮಾಡಲು ಹೊಸ ಯೋಜನೆಯನ್ನು ಜಾರಿಗೆ ತಂದಿದೆ, ಈಗ ನೀವು ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ಹಣವನ್ನು (Money) ನೀಡುತ್ತದೆ. ಕೇಂದ್ರ ಸರ್ಕಾರಗಳು ಮನೆ ನಿರ್ಮಾಣ ಮಾಡುವವರಿಗೆ ರೂ.2.50 ಲಕ್ಷ ಸಾಲವನ್ನು ನೀಡಲಿದೆ, ಇದಕ್ಕೂ ಕೂಡ ಒಂದು ಶರತ್ತು ಇದೆ, ಅದೇನೆಂದರೆ ನಿಮ್ಮ ಹೆಸರಿನಲ್ಲಿ ಯಾವುದೇ ಸ್ವಂತ ಮನೆ ಇರಬಾರದು. ಈ ಹಣವನ್ನು ಹೇಗೆ ಮತ್ತು ಎಲ್ಲಿ ಪಡೆಯಬೇಕು ಎಂಬ ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ;
ಈ ಲೇಖನದಲ್ಲಿ ನಾವು ನಿಮಗೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣವನ್ನು ಹೇಗೆ ಪಡೆಯಬೇಕು ಎಂಬ ಮಾಹಿತಿಯನ್ನು ತಿಳಿಸಲಿದ್ದೇವೆ, ಪ್ರಧಾನ ಮಂತ್ರಿ ಹವಾಸಿ ಯೋಜನೆ ಅಡಿ ನಗರ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗಿಡುಕುವ ದರದಲ್ಲಿ ಮನೆಯನ್ನು ನೀಡಲು ಪ್ರಧಾನ್ ಮಂತ್ರಿ ಆವಾಸ್ 2.0 ಅಂತವನ್ನು ಆರಂಭಿಸಲಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿಗೂ ಹೆಚ್ಚಿನ ನಗರ ಕುಟುಂಬಗಳಿಗೆ ಮನೆಯನ್ನು ನಿರ್ಮಿಸಲು, ಬಾಡಿಗೆ ನೀಡಲು ಅಥವಾ ಖರೀದಿ ಮಾಡಲು ಹಣಕಾಸಿನ ನೆರವನ್ನು ನೀಡಲಾಗುವುದು, ಕೇಂದ್ರ ಸರ್ಕಾರವು ಮನೆ ಖರೀದಿಗೆ ಸಹಾಯ ಮಾಡಲಿದೆ.
2.30 ಲಕ್ಷ ಕೋಟಿ ನೆರವು!
ಕೇಂದ್ರ ಸರ್ಕಾರ ಯೋಜನೆಗೆ ಸುಮಾರು 2.30 ಲಕ್ಷ ಕೋಟಿ ನೆರವು ನೀಡಲಿದೆ, ಮೊದಲ ಹಂತದಲ್ಲಿ 1.18 ಕೋಟಿ ಮನೆ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ, ಅದರಲ್ಲಿ 85.5 ಲಕ್ಷ ಮನೆಗಳನ್ನು ನಿರ್ಮಿಸಿ ಅರ್ಹ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು, PMAY-U ನ ಪ್ರಮುಖ ಉದ್ದೇಶವೇನೆಂದರೆ ನಗರ ಪ್ರದೇಶಗಳಲ್ಲಿ ಅರ್ಹ ಫಲಾನುಭವಿಗಳಿಗೆ ಎಲ್ಲಾ ಸೌಕರ್ಯಗಳೊಂದಿಗೆ ಮನೆಯನ್ನು ಒದಗಿಸುವುದಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 1 ಲಕ್ಷ ಹೊಸ ಮನೆಗಳನ್ನು ನಿರ್ಮಿಸಲಾಗುವುದು, ಪ್ರತಿ ಮನೆಗೆ ತಲಾ ರೂ.2.30 ಲಕ್ಷ ಸಹಾಯಧನ ನೀಡಲಾಗುವುದು, ಇದರ ಜೊತೆಗೆ ಫಲಾನುಭವಿಗಳಿಗೆ ಕೈಗೆಟಕುವ ವಸತಿ ಸಹಭಾಗಿತ್ವ (AHP), ನೇತೃತ್ವದ ನಿರ್ಮಾಣ (BLC), ಬಡ್ಡಿ ಸಬ್ಸಿಡಿ ಯೋಜನೆ (ISS) ಮತ್ತು ಕೈಗೆಟ್ಟುಕುವ ಬಾಡಿಗೆ ವಸತಿ (ARH) ಅಂತಹ ಅನೇಕ ಸಮಸ್ಯೆಗಳನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ಮೇಲೆ ನೀಡಲಾದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ,
- ಮುಖ ಪುಟದಲ್ಲಿ ಕಾಣುವ ‘PMAY-U 2.0 ಅನ್ವಯಿಸು’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ನೀಡಿರುವ ಎಲ್ಲ ಮಾರ್ಗ ಸೂಚಿಗಳನ್ನು ಸರಿಯಾಗಿ ಓದಿ,
- ನಿಮ್ಮ ವಾರ್ಷಿಕ ಆದಾಯ ಮತ್ತು ಇತರ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ,
- ವಿಳಾಸ, ಆದಾಯದ ಪುರಾವೆ ಮತ್ತು ಅಗತ್ಯ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ
- ಆಧಾರ್ ಕಾರ್ಡ್ ಮಾಹಿತಿಯನ್ನು ಪರಿಶೀಲಿಸಿ,
- ಎಲ್ಲಾ ಮಾಹಿತಿಯನ್ನು ಬರ್ತೀ ಆಡಿದ ನಂತರ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲಾ ವಿವರಗಳು ಸರಿಯಾಗಿದೆ ಎಂದು ಒಮ್ಮೆ ಪರಿಶೀಲಿಸಿ, ತಪ್ಪಿದ್ದಲ್ಲಿ ಸರಿಪಡಿಸಿ ಅಪ್ಲೋಡ್ ಮಾಡಿ
ಅಗತ್ಯವಿರುವ ದಾಖಲೆಗಳು!
- ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಮತ್ತು ಅರ್ಜಿ ದಾಖಲೆಗಳು
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್ ಗ ಆಧಾರ್ ಲಿಂಕ್ಆಗಿರಬೇಕು
- ಭೂಮಿ ಅಥವಾ ಮನೆ ಖರೀದಿದಾರರ ದಾಖಲೆಗಳು