Personal Loan: ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಬೇಕಾ? ಈ ದಾಖಲೆಗಳು ಪ್ರಮುಖ
ವೈಯಕ್ತಿಕ ಸಾಲದ(Personal Loan) ಬಡ್ಡಿದರ ಕಡಿಮೆ ಮಾಡಲು ಯಾವ ಪ್ರಮುಖ ದಾಖಲೆಗಳು ಸಹಾಯ ಮಾಡುತ್ತದೆ ಎನ್ನುವುದನ್ನು ಈ ಮೂಲಕ ತಿಳಿಯಿರಿ.
ವೈಯಕ್ತಿಕ ಸಾಲ ತೆಗೆದುಕೊಳ್ಳಲು ಸಿದ್ಧರಿದ್ದೀರಾ ನೀವು?
ಸಾಮಾನ್ಯವಾಗಿ ಸಾಲ ಪಡೆಯಲು ಬೇರೆ ಬೇರೆ ಕಂಪನಿಗಳ, ಬೇರೆ ಬೇರೆ ಅರ್ಹತೆಗಳನ್ನು ಪೂರೈಸ ಬೇಕಾಗುತ್ತದೆ. ವೈಯಕ್ತಿಕ ಸಾಲದ ಬಡ್ಡಿ ದರವು ಪ್ರತಿಯೊಬ್ಬ ವ್ಯಕ್ತಿಗೂ ಬೇರೆಯೇ ಆಗಿರುತ್ತದೆ. ಏಕೆಂದರೆ ಕ್ರೆಡಿಟ್ ಸ್ಕೋರ್, ವೈಯಕ್ತಿಕ ಆದಾಯ, ಮುಂತಾದ ಅಂಶಗಳು ಇದಕ್ಕೆ ಮಾನದಂಡಗಳಗಿವೆ. ಯಾವ್ಯಾವ ಪ್ರಮುಖ ದಾಖಲೆಗಳು ಬಡ್ಡಿದರ(Intrest Rate)ವನ್ನು ಕಡಿಮೆ ಮಾಡಲಿದೆ ಎನ್ನುವುದನ್ನು ತಿಳಿದುಕೊಳ್ಳಿ.
ಬ್ಯಾಂಕ್ ಸ್ಟೇಟ್ ಮೆಂಟ್, ಸ್ಯಾಲರಿ ಸ್ಲಿಪ್ ಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್ ಮುಂತಾದ ದಾಖಲೆಗಳು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಕೇಳುವ ಪ್ರಮುಖ ದಾಖಲೆಗಳಾಗಿವೆ. ಎಲ್ಲಾ ದಾಖಲೆಗಳು ನಿಮ್ಮ ಆರ್ಥಿಕ ಸ್ಥಿತಿಯು ಸರಿಯಾಗಿದೆ ಎಂದು ತೋರಿಸಿದರೆ ಬ್ಯಾಂಕ್ (Bank) ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ (Loan) ನೀಡಬಹುದು. ಹೇಗೆಂದರೆ ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ಬ್ಯಾಂಕ್ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು(Personal loan) ನೀಡುವುದು ಹೆಚ್ಚು. ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ದುರ್ಬಲವಾಗಿದ್ದರೆ ಬ್ಯಾಂಕ್ (Bank) ನಿಮಗೆ ಸಾಲ ನೀಡಿದರು ಹೆಜ್ಜೆ, ಒಂದು ವೇಳೆ ಸಾಲ ನೀಡಿದರೆ ನೀವು ಹೆಚ್ಚಿನ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬೇಕಾಗುತ್ತದೆ.
ಪ್ರಮುಖ ದಾಖಲೆಗಳು:
ಆರ್ಥಿಕ ಸ್ಥಿರತೆ: ಬ್ಯಾಂಕ್ ಸ್ಟೇಟ್ಮೆಂಟ್ ಗಳು (Bank Statements) ಮತ್ತು ಸ್ಯಾಲರಿ ಸ್ಲಿಪ್‌ಗಳು (Sallary slip) ನಿಮ್ಮ ಸ್ಥಿರ ಆದಾಯದ ಪುರಾವೆ ಗಳಾಗಿವೆ, ಇವುಗಳನ್ನು ನೋಡಿ ಬ್ಯಾಂಕ್ ನಿಮಗೆ ಸಾಲ ನೀಡುತ್ತದೆ.
ಕ್ರೆಡಿಟ್ ಅರ್ಹತೆ: ಕ್ರೆಡಿಟ್(Credit) ಅರ್ಹತೆಯು ನಿಮ್ಮ ಸಾಲದ ಮರುಪಾವತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ, ಇದನ್ನು ಮಾತ್ರ ಬ್ಯಾಂಕುಗಳು ಎಚ್ಚರಿಕೆಯಿಂದ ಪರಿಶೀಲನೆ ಮಾಡುತ್ತದೆ.
ಖಾತರಿದಾರರು: ಪರ್ಸನಲ್ ಲೋನ್(Personal Loan) ನೀಡುವಿಕೆಯು ತುಂಬಾ ಅಪಾಯಕಾರಿಯಾಗಿದ್ದರು, ಖಾತರಿದಾರರಿಂದ ಬ್ಯಾಂಕಿನ ಅಪಾಯ ಕಡಿಮೆಯಾಗಿರುತ್ತದೆ. ಖಾತರಿದಾರರಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.
ಕ್ರೆಡಿಟ್ ಸ್ಕೋರ್: ಸಾಲ ಪಡೆಯುವಲ್ಲಿ ಕ್ರೆಡಿಟ್ ಸ್ಕೋರ್(Credit Score) ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ಹೆಚ್ಚಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.