New Rules: ಹೊಸ ಸಿಮ್ ಖರೀದಿ ಸುಲಭವಲ್ಲ! 3 ವರ್ಷ ಬ್ಯಾನ್, ನ್ಯೂ ರೂಲ್ಸ್ ಜಾರಿ

New Rules: ಹೊಸ ಸಿಮ್ ಖರೀದಿ ಸುಲಭವಲ್ಲ! 3 ವರ್ಷ ಬ್ಯಾನ್, ನ್ಯೂ ರೂಲ್ಸ್ ಜಾರಿ

ಜನವರಿ 2025 ರಿಂದ ಭಾರತದಲ್ಲಿ ಹಲವು ನಿಯಮಗಳು ಬದಲಾಗಲಿದೆ, ಕೆಲವು ನಿಯಮಗಳು ಇನ್ನಷ್ಟು ಕಠಿಣವಾಗಲಿದೆ, ಸಿಮ್ ಕಾರ್ಡ್ ಗಳ ವಿಚಾರದಲ್ಲಿ ಇದೀಗ ಸರ್ಕಾರವು ಮಹತ್ತರ ಬದಲಾವಣೆಗಳನ್ನು ತಂದಿದೆ, ಹೊಸ ನಿಯಮ ಏನು?

WhatsApp Group Join Now
Telegram Group Join Now

ಎಲ್ಲರೂ ಈಗ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ, ಇದರ ಜೊತೆಗೆ ಹಲವು ನಿಯಮಗಳು ಅಪ್ಡೇಟ್ ಆಗಿದೆ, UPI, ಸಿಲೆಂಡರ್ ಪಾವತಿ ಸೇರಿದಂತೆ ಹಲವು ನಿಯಮಗಳು ಬದಲಾಗುತ್ತಿದೆ. ಕೆಲವು ನಿಯಮಗಳು ಮತ್ತಷ್ಟು ಕಠಿಣವಾಗಲಿದೆ, ಈಗ ಕಠಿಣವಾಗುತ್ತಿರುವ ನಿಯಮಗಳ ಪೈಕಿ, ಟೆಲಿಕಾಂ ಕ್ಷೇತ್ರದ ನಿಯಮ ಕೂಡ ಒಂದಾಗಿದೆ, ಇನ್ನು ಮುಂದೆ ಹೊಸ ವರ್ಷದಿಂದ ಹೊಸ ಸಿಮ್ ಕಾರ್ಡ್ ಖರೀದಿ ಸುಲಭವಲ್ಲ, ಇಷ್ಟ ಅಲ್ಲ ನೀವು ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿಸುವುದು ಕೂಡ ಸುಲಭವಲ್ಲ, ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 3ವರ್ಷ ಬ್ಯಾನ್ ಸೇರಿದಂತೆ ಹಲವು ಕಠಿಣ ಶಿಕ್ಷೆಗಳು ಇಂದಿನಿಂದ ಜಾರಿಯಾಗಲಿದೆ.

ಇನ್ನು ಮುಂದೆ ಡಿಪಾರ್ಟ್ಮೆಂಟ್ ಆಫ್ ಟೆಲಿ ಕಮ್ಯುನಿಕೇಷನ್ ಹೊಸ ಹಾಗೂ ಕಟ್ಟುನಿಟ್ಟಿನ ನಿಯಮವನ್ನು ಜಾರಿ ಮಾಡಲಿದೆ, ಪ್ರಮುಖವಾಗಿ ಭಾರತದಲ್ಲಿ ಮೊಬೈಲ್ ಬಳಕೆದಾರರು ಸೈಬರ್ ವಂಚನೆ, ಅನಾಮಿಕ ಕರೆಗಳು, ಸ್ಪ್ಯಾಮ್ ಕಾಲ್ಸ್ ಸೇರಿದಂತೆ ಹಲವು ಅನಗತ್ಯ ಕರೆಗಳ ಸಂಖ್ಯೆ ಕೂಡ ಹೆಚ್ಚಾಗಿದೆ, ಇದೆಲ್ಲಾದರಿಂದ ಗ್ರಾಹಕರಿಗೆ ಮುಕ್ತಿ ನೀಡುವ ಸಲುವಾಗಿ ಟೆಲಿಕಮ್ಯುನಿಕೇಶನ ಜ.01 ರಿಂದ ಹೊಸ ನಿಯಮವನ್ನು ಜಾರಿ ಮಾಡಲಿದೆ.

ಇನ್ನು ಮುಂದೆ ಗ್ರಾಹಕರೇ ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿಸುವಂತಿಲ್ಲ, ನಕಲಿ ದಾಖಲೆಗಳು ಅಥವಾ ಇನ್ಯಾವುದೇ ರೂಪಗಳಲ್ಲಿ ಹೊಸ ಸಿಮ್ ಖರೀದಿಯೂ ನಿಯಮ ಬಿಗಿಯಾಗಿದೆ, ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ ಮೂರು ವರ್ಷ ಬ್ಯಾನ್ ಶಿಕ್ಷೆಗೆ ಒಳಗಾಗುವಿರಿ, ಮೂರು ವರ್ಷ ಬ್ಯಾನ್ ಆದವರಿಗೆ ಟೆಲಿಕಮ್ಯುನಿಕೇಷನ್ ಹೊಸ ಸಿಮ್ ನೀಡುವುದಿಲ್ಲ.

 

 

Leave a Comment

WhatsApp Group Join Now
Telegram Group Join Now