State Government: ಹೊಸ ವರ್ಷದಂದು ರಾಜ್ಯ ಸರ್ಕಾರದಿಂದ 3 ಗುಡ್ ನ್ಯೂಸ್! ಸಂಪೂರ್ಣ ಮಾಹಿತಿಯು ಇಲ್ಲಿದೆ.

State Government: ಹೊಸ ವರ್ಷದಂದು ರಾಜ್ಯ ಸರ್ಕಾರದಿಂದ 3 ಗುಡ್ ನ್ಯೂಸ್! ಸಂಪೂರ್ಣ ಮಾಹಿತಿಯು ಇಲ್ಲಿದೆ.

ಹೊಸ ವರ್ಷಕ್ಕೆ ಕರ್ನಾಟಕ ಸರ್ಕಾರವು ರಾಜ್ಯದ ಜನರಿಗೆ ಮೂರು ಶುಭ ಸುದ್ದಿಯನ್ನು ನೀಡಿದೆ, ರಾಜ್ಯದ ಎಲ್ಲಾ ಭಕ್ತಾದಿಗಳಿಗೆ ಗ್ಯಾರಂಟಿ ಸರ್ಕಾರದಿಂದ ‘ಯಾತ್ರಾ ಭಾಗ್ಯ’ ದೊರೆಯಲಿದೆ.

ರಾಜ್ಯ ಸರ್ಕಾರ ‘ಯಾತ್ರಾ ಭಾಗ್ಯ’ ಯೋಜನೆಯಡಿ ಒಟ್ಟು ಮೂರು ಟೂರ್ ಪ್ಯಾಕೇಜ್ ಗಳ ಸಬ್ಸಿಡಿ(subsidy) ಘೋಷಣೆ ಮಾಡಿದೆ. ಇದೇ ಮೊದಲ ಬಾರಿಗೆ ದ್ವಾರಕ, ಪುರಿ ಜಗನ್ನಾಥ ದಕ್ಷಿಣ ಕ್ಷೇತ್ರಗಳಿಗೆ ಸಹಾಯಧನ ಘೋಷಣೆ ಮಾಡಿದೆ. ಈ ಮೂಲಕವಾಗಿ ಧಾರ್ಮಿಕ ದತ್ತಿ ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯವನ್ನು ರಾಜ್ಯ ಸರ್ಕಾರವು ಕರುಣಿಸಲಿದೆ. ರಾಜ್ಯ ಸರ್ಕಾರದಿಂದ ದಕ್ಷಿಣ ಕ್ಷೇತ್ರಗಳ ದ್ವಾರಕೆಯಾತ್ರ, ಪೂರಿ ಜಗನ್ನಾಥ ದರ್ಶನ ನಿಮಗೆ ಸಿಗಲಿದೆ.

ದಕ್ಷಿಣ ಕ್ಷೇತ್ರಗಳ ತೀರ್ಥಯಾತ್ರ ಸ್ಥಳಗಳು..!

ಮಧುರೈ-ಕನ್ಯಾಕುಮಾರಿ-ರಾಮೇಶ್ವರ, ತಿರುವನಂತಪುರಂ: ಇದು ಒಟ್ಟು ಆರು ದಿನಗಳ ತೀರ್ಥಯಾತ್ರ ಪ್ಯಾಕೇಜ್ ಆಗಿದೆ, ಅದಕ್ಕಾಗಿ ಒಟ್ಟು 25,000 ಖರ್ಚು ಆಗಲಿದೆ, ಇದಕ್ಕೆ ಸರ್ಕಾರ ನಿಮಗೆ ಸಬ್ಸಿಡಿ ರೂಪದಲ್ಲಿ ರೂ. 10,000 ನೀಡಲಿದೆ, ಜೊತೆಗೆ 5000 ಸಹಾಯಧನ ಸೇರಿ ಒಟ್ಟು 15000 ರೂಪಾಯಿಯನ್ನು ರಾಜ್ಯ ಸರ್ಕಾರವು ನಿಮಗೆ ನೀಡಲಿದೆ. ಯಾತ್ರಿಗಳಾದ ನೀವು 10,000ಗಳನ್ನು ಮಾತ್ರ ಪಾವತಿ ಮಾಡಬೇಕಾಗುತ್ತದೆ.

ಪುರಿ ಜಗನ್ನಾಥ ಮತ್ತು ದ್ವಾರಕ ಯಾತ್ರೆ; ತ್ರಯಂಬಕೇಶ್ವರ, ದ್ವಾರಕಾ ನಾಗೇಶ್ವರ ಸೋಮನಾಥ ಒಳಗೊಂಡ ಎಂಟು ದಿನಗಳ ಯಾತ್ರ ಪ್ಯಾಕೇಜ್ ಇದಾಗಿದ್ದು, ಯಾತ್ರೆಯ ಪ್ಯಾಕೇಜ್ ನ ಒಟ್ಟು ಮೊತ್ತ ರೂ. 32,500 ಆಗಲಿದೆ, ಅದಕ್ಕಾಗಿ ಸರ್ಕಾರವು ನಿಮಗೆ 17500 ಹಣವನ್ನು ಒದಗಿಸಲಿದೆ, ಉಳಿದ 15 ಸಾವಿರ ರೂಪಾಯಿ ಹಣವನ್ನು ಭಕ್ತರು ಬರಿಸಬೇಕಾಗುತ್ತದೆ.

ವಿಶೇಷ ಸೌಲಭ್ಯಗಳು!

  • ಪ್ರಯಾಣಿಸುವ ಭಕ್ತರಿಗೆ ಟ್ರೈನ್ ಪ್ಯಾಂಟ್ರಿ ಕಾರಿನಲ್ಲಿ ತಾಜಾ ಆಹಾರದ ವ್ಯವಸ್ಥೆ
  • ಈ ಪ್ಯಾಕೇಜ್ ನಲ್ಲಿ ನೀವು 3 ಟೈರ್ ಎಸಿ ರೈಲಿನಲ್ಲಿ ಪ್ರಯಾಣಿಸಬಹುದು.
  • ಸ್ಥಳೀಯ ಸಾರಿಗೆ, ವಸತಿ, ಊಟ ಮತ್ತು ದರ್ಶನ ವ್ಯವಸ್ಥೆ
  • ಆರೋಗ್ಯದ ಹಿತ ದೃಷ್ಟಿಯಿಂದ ಯಾತ್ರಾತ್ರಿಗಳ ವೈದ್ಯಕೀಯ ಸೇವೆ
  • ರೈಲಿನಲ್ಲಿ ಭಕ್ತಾದಿಗಳಿಗೆ ನರ್ಸ್ ಮತ್ತು ವೈದ್ಯರ ಸೇವೆ ಒದಗಿಸಲಾಗುವುದು.

ದ್ವಾರಕಾ ನಾಥಕ್ಕೆ ಪ್ರಯಾಣಿಸುವವರಿಗೆ ಟ್ರೈನ್ ಹತ್ತುವ ಮತ್ತು ಇಳಿಯುವ ಸ್ಥಳಗಳು ಕೆಳಗಿನಂತಿವೆ;

ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ದಿಂದ ಹೊರಟು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಮತ್ತು ಬೆಳಗಾವಿ. ಈ ರೈಲು ಕರ್ನಾಟಕದಿಂದ ಜನವರಿ 6 ರಿಂದ ಹೊರಟು ಜನವರಿ 13 ಕ್ಕೆ ವಾಪಸ್ ಆಗಲಿದೆ, ಪುರಿ ಜಗನ್ನಾಥಕ್ಕೆ ಹೊರಡುವ ಟ್ರೈನ್ 2 ಫೆಬ್ರುವರಿಯಲ್ಲಿ ಹೊರಟು 10 ಫೆಬ್ರವರಿ ಎಂದು ವಾಪಸ್ ಆಗಲಿದೆ.

ರಸ್ತೆಯ ಮ್ಯಾಪ್ ಹೇಗಿದೆ..?

ದಕ್ಷಿಣ ಯಾತ್ರಿಗಳು ಹತ್ತುವ ಮತ್ತು ಇಳಿಯುವ ಸ್ಥಳಗಳು;

  • ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ,
  • ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು
  • ಹೊರಡುವ ದಿನಾಂಕ 25 ಜನವರಿ 2025 ರಿಂದ ಆರಂಭವಾಗಿ 30 ಜನವರಿ 2021 ಕ್ಕೆ ವಾಪಸ್ ಬರಲಿದೆ.

ಜೊತೆಗೆ, ಒಂದು ವರ್ಷದಲ್ಲಿ 12000 ಅರ್ಚಕರು ಹಾಗೂ ಅರ್ಚಕ ಕುಟುಂಬದ ಸದಸ್ಯರಿಗೆ ಸೇರಿ 2400 ಜನರನ್ನು ಉಚಿತವಾಗಿ ಕರೆದುಕೊಂಡು ಹೋಗಲಾಗುತ್ತದೆ.

 

 

WhatsApp Group Join Now
Telegram Group Join Now

Leave a Comment

copy
share with your friends.