New Maruti Alto|ಇದೇ ನೋಡಿ ಹೊಸ ತಲೆಮಾರಿನ ಕಾರ್! ಕಡಿಮೆ ಬೆಲೆ, ಹೆಚ್ಚು ಮೈಲೇಜ್;
ಮಾರುತಿ ಸುಜುಕಿ ಆಲ್ಟೊ, ತನ್ನ ಗ್ರಾಹಕರಿಗೆ ಮಗದೊಮ್ಮೆ ಹೊಸ ತಲೆಮಾರಿನ ರೂಪದಲ್ಲಿ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ, ಈ ಹೊಸ ಆವೃತ್ತಿಯು ಹೆಚ್ಚು ಇಂಧನ-ಸಾರ್ವಕಾಲಿಕ(mileage) ನೀಡುವಂತೆ ವಿನ್ಯಾಸ ಮಾಡಲಾಗಿದೆ. ತಂತ್ರಜ್ಞಾನ ಸುದ್ದಿಗಳನ್ನು ಓದಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಮಾರುತಿ ಕಂಪನಿಯ ಹೊಸ ಕಾರ್ ಈಗಾಗಲೇ ಜಪಾನ್ ನ ಮಾರುಕಟ್ಟೆಗೆ ಬಂದಿದೆ, ಈ ಹೊಸ ತಂತ್ರಜ್ಞಾನವನ್ನು ಭಾರತಕ್ಕೂ ತರಲು ಕಂಪನಿಯು ಯೋಜನೆಯನ್ನು ರೂಪಿಸಿದೆ. ಅಂದಹಾಗೆ ಈ ಹೊಸ ಆಟೋ ಕಾರು 2026 ರ ಹೊತ್ತಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ.
ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 23 ವರ್ಷಗಳ ಯಶಸ್ವಿ ಪಯಣ ಮುಗಿಸಿದ ಆಲ್ಟೋ, ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಕಳೆದ ವರ್ಷಗಳಲ್ಲಿಯೇ ಸುಮಾರು 45 ಲಕ್ಷ ಕಾರುಗಳ ಮಾರಾಟದ ದಾಖಲೆಯನ್ನು ಈ ಕಂಪನಿ ಬರೆದಿದೆ. ಹೊಸ ತಲೆಮಾರಿನ ಆಲ್ಟೊ ಇದನ್ನು ಮತ್ತಷ್ಟು ವಿಸ್ತರಣೆ ಮಾಡುವ ಸಾಧ್ಯತೆ ಇದೆ.
ಹೊಸ ಆಲ್ಟೋ: ಕಡಿಮೆ ತೂಕ, ಹೆಚ್ಚಿನ ಮೈಲೇಜ್!
ಹಳೆಯ ಆಲ್ಟೊ ಕಾರಿಗಿಂತ ಹೊಸ ಆವೃತ್ತಿಯ ಕಾರಿನಲ್ಲಿ 100KG ಯ ತೂಕ ಕಡಿಮೆಯಾಗಲಿದೆ, ಈಗಾಗಲೇ ಈ ಕಾರು 680-760 ಕೆಜಿ ತೂಕವನ್ನು ಹೊಂದಿದ್ದು, ಹೊಸ ಮಾದರಿಯೂ ಇನ್ನಷ್ಟು ಹಗುರವಾಗಲಿದೆ, ಇದರಿಂದ ಕಾರ್ಯ ಸಾಮರ್ಥ್ಯ ಮತ್ತು ಇಂಧನ ದಕ್ಷತೆಯು ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನು ತಯಾರಿಕೆ ಮಾಡಲು ಬೇಕಾಗುವ ಸಾಮಗ್ರಿಗಳು ಕೂಡ ಕಡಿಮೆಯಾಗುವುದರಿಂದ, ಉತ್ಪಾದನಾ ವೆಚ್ಚವು ಕೂಡ ಕಡಿಮೆಯಾಗಲಿದೆ. ಹೀಗಾಗಿ ಹೊಸ ಆಲ್ಟೊ ಇನ್ನಷ್ಟು ಕಡಿಮೆ ಬೆಲೆಗೆ ಲಭ್ಯವಾಗಬಹುದು. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಇದು ಅತ್ಯಂತ ಲಾಭದಾಯಕವಾದ ಆಯ್ಕೆಯಾಗಲಿದೆ.
ಹೈಬ್ರಿಡ್ ತಂತ್ರಜ್ಞಾನ ಬರಲಿದೆ?
ಹೊಸ ಆಲ್ಟೊ K10 ನಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಕಾಣಿಸಿಕೊಳ್ಳುವ ಸಾಧ್ಯತೆಯೂ ಕೂಡ ಇದೆ. ಜಪಾನಿನಲ್ಲಿ ಹೈಬ್ರಿಟಿ ಇಂಜಿನ್ ಮತ್ತು ಪೆಟ್ರೋಲ್ ಗಳ ಆಯ್ಕೆಯನ್ನು ಒದಗಿಸಿರುವ ಮಾರುತಿ ಇದೇ ತಂತ್ರಜ್ಞಾನವನ್ನು ಭಾರತಕ್ಕೂ ತರಬಹುದು, ಇದು ಇಂಧನ ಬಳಕೆಯನ್ನು ಕಡಿಮೆ ಮಾಡುವ ಜೊತೆಗೆ ಹೆಚ್ಚಿನ ಮೈಲೇಜ್ ನೀಡಲಿದೆ.
ಮಾರುತಿ ಸುಜೂಕಿ ಆಲ್ಟೋ: ಎಲೆಕ್ಟ್ರಿಕ್ ಆವೃತ್ತಿ ಬರುವ ಸಾಧ್ಯತೆ?
ಇಂಧನ ದಕ್ಷತೆಯನ್ನು ಮನದಲ್ಲಿಟ್ಟುಕೊಂಡು ಮಾರುತಿ ಎಲೆಕ್ಟ್ರಿಕ್ ಆವತ್ತಿಯನ್ನು ಸಂಶೋಧಿಸುತ್ತಿದೆ ಎನ್ನುವ ಸುದ್ದಿಯು ಕೇಳಿಬಂದಿದೆ, ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇಂಧನ ದುಬಾರಿ ಬೆಲೆ ಹೆಚ್ಚುತ್ತಿರುವ ಕಾರಣ ಜನರೂ ಇಂತಹ ಕಡಿಮೆ ಆಪ್ಷನ್ ಗಳನ್ನು ಹೆಚ್ಚು ಪರಿಗಣನೆ ಮಾಡಬಹುದು.
New Maruti Alto, Low-price, More-Milage