Mobile Data: ನೀವು ಯಾವಾಗಲೂ ಮೋಬೈಲ್ ಡೇಟಾ ಒನ್ ಅಲ್ಲಿ ಇಡುತ್ತೀರಾ? ಹಾಗಾದರೆ ದಯವಿಟ್ಟು ಇಲ್ಲಿ ಗಮನಿಸಿ;

Mobile Data: ನೀವು ಯಾವಾಗಲೂ ಮೋಬೈಲ್ ಡೇಟಾ ಒನ್ ಅಲ್ಲಿ ಇಡುತ್ತೀರಾ? ಹಾಗಾದರೆ ದಯವಿಟ್ಟು ಇಲ್ಲಿ ಗಮನಿಸಿ;

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಆಡಿಯೋ, ಆನ್ಲೈನ್ ಗೇಮ್ಸ್, ಶಾಪಿಂಗ್, ವಿಡಿಯೋ ಮತ್ತು ಆನ್ಲೈನ್ ಶಿಕ್ಷಣದಿಂದ ಹಿಡಿದು ಬಹುತೇಕ ಎಲ್ಲಾ ವಿಷಯಕ್ಕೂ ತಮ್ಮ ಸ್ಮಾರ್ಟ್ ಫೋನ್ (Samrtphone) ಅನ್ನು ಬಳಸುತ್ತಿದ್ದಾರೆ. ಎಲ್ಲ ವಿಷಯಗಳನ್ನು ಅನುಸರಿಸಲು ಮೊಬೈಲ್ ಅಲ್ಲಿ ಡಾಟಾ ಆನ್ ಇರುವುದು ಅವಶ್ಯಕ, ತಂತ್ರಜ್ಞಾನ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಡೇಟಾ ಇಲ್ಲದೆ ಯಾವುದೇ ಸ್ಮಾರ್ಟ್ ಫೋನ್ ಅನ್ನು ಬಳಸಲು ಯಾವುದೇ ಪ್ರಯೋಜನವಿಲ್ಲ, ಕೆಲವೊಂದು ವ್ಯಕ್ತಿಗಳು ಪ್ರಮುಖ ಸಂದೇಶಗಳನ್ನು ಬಂದ ತಕ್ಷಣ ಅದಕ್ಕೆ ಪ್ರತ್ಯುತ್ತರ ನೀಡಲು, ತಮ್ಮ ಸ್ಮಾರ್ಟ್ ಫೋನ್ ಅನ್ನು ದಿನವಿಡೀ ಮೊಬೈಲ್ ಡಾಟಾವನ್ನು ಆನ್ ಅಲ್ಲಿಯೇ ಇಡುತ್ತಾರೆ. ಹಾಗಾದರೆ ಮೊಬೈಲ್ ಡಾಟಾವನ್ನು ಯಾವಾಗಲೂ ಆನ್ ಅಲ್ಲಿಯೇ, ಇಡಬೇಕೆ? ಅಥವಾ ಬೇಡವೇ? ಎನ್ನುವ ಕುರಿತು ಮಾಹಿತಿ ಎಲ್ಲಿದೆ ನೋಡಿ.

ಮೊಬೈಲ್ ತುಂಬಾ ಉಪಯುಕ್ತವಾದ ಸಾಧನೆವಾಗಿದೆ, ನೀವು ಪ್ರಮುಖ ಸಂದೇಶವನ್ನು ಓದಲು ಅಥವಾ ಕೆಲಸವಿದ್ದರೆ ನೀವು ಖಂಡಿತವಾಗಿಯೂ ಡೇಟಾವನ್ನು ಆನ್ ಅಲ್ಲಿಯೇ ಏರಿಸಬೇಕು. ಅದಾಗಿಯೂ ದಿನವಿಡಿ ಮೊಬೈಲ್ ಡೇಟಾವನ್ನು ಆನ್ ಅಲ್ಲಿ ಇಡುವುದರಿಂದ ನಿಮ್ಮ ಫೋನಿಗೆ ಸ್ವಲ್ಪ ಹಾನಿಯಾಗಬಹುದು, ಆದ್ದರಿಂದ ಅಗತ್ಯವಿಲ್ಲದಿದ್ದರೆ ಮೊಬೈಲ್ ಡಾಟಾವನ್ನು ಆಫ್ ಮಾಡುವುದು ಉತ್ತಮವಾಗಿದೆ. ಮೊಬೈಲ್ ಡೇಟಾವನ್ನು ಆನ್ ಅಲ್ಲಿ ಇಡುವುದರಿಂದ ಹಲವು ಅನಾನುಕೂಲತೆಗಳಿವೆ, ಅವುಗಳು ಏನು ಎನ್ನುವುದನ್ನು ಇಲ್ಲಿ ತಿಳಿಯೋಣ.

ಬ್ಯಾಟರಿ ಖಾಲಿಯಾಗುವಿಕೆ:

ಮೊಬೈಲ್ ಡಾಟಾವನ್ನು ಯಾವಾಗಲೂ ಆನ್ ಅಲ್ಲಿ ಇಡುವುದರಿಂದ, ನಿಮ್ಮ ಮೊಬೈಲ್  ಬ್ಯಾಟರಿ ಬೇಗ ಖಾಲಿಯಾಗಬಹುದು, ಮುಖ್ಯವಾಗಿ ನೀವು ನಿಯಮಿತವಾಗಿ ಬಳಸುವ ಅಪ್ಲಿಕೇಶನ್ಗಳನ್ನು ಇಂಟರ್ನೆಟ್ ಆನ್ ಮಾಡಿ ಇಟ್ಟಿದ್ದರೆ, ಅವುಗಳು ಬ್ಯಾಗ್ರೌಂಡಲ್ಲಿ ಚಾಲ್ತಿಯಲ್ಲಿ ಇದ್ದರೆ ಬ್ಯಾಟರಿ ಬಹುಬೇಗನೆ ಖಾಲಿಯಾಗುತ್ತದೆ.

ಡೇಟಾ ಬಳಕೆ:

ಮೊಬೈಲ್ ಡಾಟಾವನ್ನು ಯಾವಾಗಲೂ ಆನ್ ಅಲ್ಲಿಯೇ ಇಡುವುದರಿಂದ, ನಿಮ್ಮ ಡಾಟಾ ಪ್ಲಾನ್ ಅಂದುಕೊಂಡ ಸಮಯಕ್ಕಿಂತ ಬಹು ಬೇಗನೆ ಖಾಲಿ ಆಗಬಹುದು, ಅಲ್ಲದೆ ಅನೇಕ ಅಪ್ಲಿಕೇಶನ್ಗಳ ನೋಟಿಫಿಕೇಶನ್ ಇಲ್ಲವೇ ಮೆಸೇಜ್ ಗಳ ಮೂಲಕ ಡೇಟಾವನ್ನು ಬಳಸುತ್ತವೆ ಮತ್ತು ಅನೇಕ ಫೋನ್ ಗಳು ಆಟೋಮೆಟಿಕ್ ಆಗಿ ಅಪ್ಲಿಕೇಶನ್ ಗಳನ್ನು ಮತ್ತು ಸಾಫ್ಟ್ವೇರ್ ಗಳನ್ನು ಅಪ್ಡೇಟ್ ಮಾಡುತ್ತಾ ಇರುತ್ತದೆ. ಹೀಗಾಗಿ ನಿಮ್ಮ ಫೋನಿನ ಇಂಟರ್ನೆಟ್ ಬಹುಬೇಗನೆ ಮುಗಿಯಬಹುದು.

ಭದ್ರತಾ ಅಪಾಯಗಳು:

ಮೊಬೈಲ್ ಡಾಟಾ ಯಾವಾಗಲು ಇರುವುದರಿಂದ, ಅದು ನಿಮ್ಮ ಮೊಬೈಲ್ ಸಾಧನಗಳನ್ನು ವೈರಸ್ ಗಳು, ಮಾಲ್ ವೇರ್ ಮತ್ತು ಹ್ಯಾಕರ್ ಗಳಿಗೆ ಹೊಡ್ಡಿಕೊಳ್ಳಬಹುದು. ಹ್ಯಾಕರ್ ಗಳು ನಿಮ್ಮ ಫೋನನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಏಕೆಂದರೆ ನಿಮ್ಮ ಇಂಟರ್ನೆಟ್ ಯಾವಾಗಲೂ ಸಂಪರ್ಕದಲ್ಲಿ ಇರುತ್ತದೆ ಹಾಗೂ ನಿಮ್ಮ ಫೋನ್ ಅಥವಾ ಅಪ್ಲಿಕೇಶನ್ಗಳ ಮೂಲಕ ಅವರು ಇಂಟರ್ನೆಟ್ ಲಾಭಗಳನ್ನು ಪಡೆದುಕೊಳ್ಳಬಹುದು.

ಕಿರಿ ಕಿರಿ ಸಮಸ್ಯೆ:

ಡಾಟಾ ಆನ್ ಆಗಿರುವುದರಿಂದ ಯಾವಾಗಲೂ ಸಂದೇಶ ಮತ್ತು ನೋಟಿಫಿಕೇಶನ್ ಹಾಗೂ ಸಾಮಾಜಿಕ ಮಾಧ್ಯಮದ ನವೀಕರಣದಿಂದ ನೀವು ವಿಚಲಿತರಾಗಬಹುದು. ಇದು ಇತರೆ ಕೆಲಸ ಅಥವಾ ನಿಮ್ಮ ಗಮನದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಮೊಬೈಲ್ ಡೇಟಾವನ್ನು ಆನ್ ಅಲ್ಲಿಡುವುದು ಸ್ವಲ್ಪ ಅಪಾಯಕಾರಿಯಾಗಿದೆ.

ಲೊಕೇಷನ್ ಅಥವಾ ಪರ್ಸನಲ್ ಡೇಟಾ ಟ್ರ್ಯಾಕಿಂಗ್ ಸಮಸ್ಯೆ:

ಮೊಬೈಲ್ ಡೇಟಾ ನೀಡುವುದರಿಂದ ಅನ್ಯ ವ್ಯಕ್ತಿಗಳಿಗೆ ನಿಮ್ಮನ್ನು ಟ್ರ್ಯಾಕ್ ಮಾಡಲು ತುಂಬಾ ಸಹಾಯವಾಗುತ್ತದೆ, ಇಂತಹ ಸನ್ನಿವೇಶಗಳಿಂದ ನೀವು ತಪ್ಪಿಸಿಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಬಳಸುವಾಗ ಮಾತ್ರ ಮೊಬೈಲ್ ಡೇಟಾವನ್ನು ಆನ್ ಅಲ್ಲಿ ಇಡಿ ಇಲ್ಲದ ಸಮಯದಲ್ಲಿ ಆಫ್ ಮಾಡುವುದು ಉತ್ತಮವಾದ ಕೆಲಸವಾಗಿದೆ.

 

Leave a Comment