Mechanization Scheme: ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಪಡೆಯುವುದು ಹೇಗೆ?

Mechanization Scheme: ಇತ್ತೀಚಿನ ದಿನಗಳಲ್ಲಿ ಕೃಷಿ ಉಪಕರಣಗಳು ತುಂಬಾ ದುಬಾರಿ ಆಗಿರುವ ಕಾರಣ ರೈತರಿಗೆ ಯಂತ್ರೋಪಕರಣಗಳನ್ನು ಕೊಳ್ಳಲು ಸರ್ಕಾರವೇ ಸಹಾಯಧನ ನೀಡುತ್ತಿದೆ. ಇದಕ್ಕಾಗಿ ಕೃಷಿ ಯಾಂತ್ರಿಕೀಕರಣ ಯೋಜನೆಯನ್ನು ಜಾರಿ ಮಾಡಲಾಗಿದ್ದು, ಈ ಯೋಜನೆಯಡಿ ರೈತರಿಗೆ ಏನಿಲ್ಲ ಸಹಾಯಧನ ಸಿಗಲಿದೆ, ಸಬ್ಸಿಡಿಗಾಗಿ ರೈತರು ಹೇಗೆ ಅರ್ಜಿ ಸಲ್ಲಿಸಬೇಕು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಕರ್ನಾಟಕದ ಇನ್ನಿತರ ಸುದ್ದಿಗಳ ಮಾಹಿತಿ ಪಡೆಯಲು ಈ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಕೃಷಿ ಯಾಂತ್ರೀಕರಣ ಯೋಜನೆ ಅಂದರೇನು?

ಕೃಷಿ ಕಾರ್ಯ ಚಟುವಟಿಕೆಗಳ ದಕ್ಷತೆಯನ್ನು ಹೆಚ್ಚಿಸಲು, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಕೃಷಿ ಆರ್ಥಿಕತೆಯ ಸುಧಾರಣೆ ಮಾಡಲು ಯಾಂತ್ರಿಕರಣ ಅತಿ ಅಗತ್ಯ. ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿರುವಾಗ ಕೃಷಿ ಕೆಲಸದ ಶ್ರಮವನ್ನು ಕಡಿಮೆ ಮಾಡುವಲ್ಲಿಯೂ ಇದು ಅನುಕೂಲವಾಗಲಿದೆ. ಈ ಅನುಕೂಲಗಳನ್ನು ಗುರುತಿಸಿ 2001-02 ರಲ್ಲಿ ಕೇಂದ್ರ ಪ್ರಯೋಜಿತ ಕೃಷಿ ಯಾಂತ್ರಿಕೀಕರಣ ಯೋಜನೆಯನ್ನು ಕರ್ನಾಟಕದಲ್ಲಿ ಆರಂಭಿಸಲಾಯಿತು. ಈ ಯೋಜನೆಯಡಿ ರೈತರಿಗೆ ಶೇಕಡ 25ರಷ್ಟು ಸಬ್ಸಿಡಿಯನ್ನು ಒದಗಿಸಿತು. 2002-03 r ರಲ್ಲಿ ರಾಜ್ಯ ಸರ್ಕಾರವು ತನ್ನ ಪಾಲಿನಲ್ಲಿ ಶೇಕಡ 25ರಷ್ಟು ಕೊಡುಗೆ ನೀಡುವ ಮೂಲಕ ಸಬ್ಸಿಡಿಯನ್ನು 50ಕ್ಕೆ ಹೆಚ್ಚಿಗೆ ಮಾಡಿದೆ.

Mechanization Scheme:

ಕೃಷಿ ಯಾಂತ್ರೀಕರಣ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅವಿಭಾಜ್ಯ ಅಂಗವಾಗಿದ್ದು, ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ರಾಜ್ಯವು ತನ್ನ ಸ್ವಂತ ಸಂಪನ್ಮೂಲಗಳಿಂದ ಶೇಕಡಾ 50ರಷ್ಟು ಸಬ್ಸಿಡಿಯನ್ನು ಬೆಂಬಲಿಸುತ್ತಿದೆ ಮತ್ತು ಮಿಷನ್ ಮೋಡ್ನಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ರೂ. ಲಕ್ಷಕ್ಕಿಂತ ಕಡಿಮೆ ಬೆಲೆ ಉಪಕರಣಗಳನ್ನು ಖರೀದಸಲು ಶೇಕಡ 50% ಸಬ್ಸಿಡಿಯಾಗಿ ಮತ್ತು ಹೆಚ್ಚು ಇದ್ದರೆ 40% ಶಬ್ಸಿಡಿಯನ್ನು ನೀಡಲಾಗುತ್ತದೆ. ಆದಾಗಿಯೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ 90ರಷ್ಟು ಸಬ್ಸಿಡಿಯನ್ನು ನೀಡಲಾಗುತ್ತಿದೆ.

ಕೃಷಿ ಯಾಂತ್ರಿಕ ಕಾರಣ ಯೋಜನೆ ಅಡಿಯಲ್ಲಿ ರಾಜ್ಯವು ಸುಮಾರು 50,000 ರೈತರಿಗೆ ಆರ್ಥಿಕ ನೆರವನ್ನು ನೀಡಲಿದ್ದು, ಇದಕ್ಕಾಗಿ 428 ಕೋಟಿ ಹಣವನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.

ಸೌಲಭ್ಯಗಳು ಏನು?

  • ಭೂಮಿ ಉಳುಮೆ
  • ಕೃಷಿ ಯಾಂತ್ರೀಕರಣ ಕಾರ್ಯಕ್ರಮದ ಅಡಿ ಪವರ್ ಟಿಲ್ಲರ್
  • ಸಣ್ಣ ಟ್ರ್ಯಾಕ್ಟರ್
  • ಡೀಸೆಲ್ ಪಂಪ್ ಸೆಟ್ಗಳು
  • ಬಿತ್ತನೆ ಮತ್ತು ಅಂತರ ಬೇಸಾಯಕ್ಕೆ ಕೃಷಿ ಯಂತ್ರೋಪಕರಣ
  • ಟಿಲ್ಲರ್/ಟ್ರ್ಯಾಕ್ಟರ್/ಇಂಜಿನ್ ಚಾಲಿತ ಸಂರಕ್ಷಣ ಉಪಕರಣಗಳು
  • ಕೃಷಿ ಸಂಸ್ಕರಣೆಗೆ ಉಪಯುಕ್ತವಾಗುವ ವಿವಿಧ ಮಾದರಿಯ ಕೃಷಿ ಯಂತ್ರೋಪಕರಣಗಳು

ಎಷ್ಟು ರಿಯಾಯಿತಿ ಸಿಗಲಿದೆ?

  • ಸಾಮಾನ್ಯ ರೈತರಿಗೆ ಶೇಕಡ 50ರಷ್ಟು ಸಹಾಯಧನ.
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ರೈತರಿಗೆ 90ರಷ್ಟು ಸಹಾಯಧನ
  • ಕೃಷಿ ಯಂತ್ರೋಪಕರಣ (ಗರಿಷ್ಠ ಮಿತಿ 1 ಲಕ್ಷದವರೆಗೆ ನೀಡಲಾಗುತ್ತದೆ)

ಅರ್ಹತೆಗಳು/ಮಾನದಂಡಗಳು;

  • ಈ ಯೋಜನೆಯು ವೈಯಕ್ತಿಕ ರೈತರು, ನೊಂದಾಯಿತ ರೈತ ಸಹಕಾರ ಸಂಘಗಳು ಮತ್ತು ಜಂಟಿ ಕೃಷಿ, ಗುಂಪುಗಳಿಗೆ ಲಭ್ಯವಿದೆ.
  • ರಾಜ್ಯದ ಎಲ್ಲಾ ತಾಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆಯ ಸಹಾಯಧನ ಪಡೆಯಬಹುದು
  • ರೈತರು ಕನಿಷ್ಠ 1 ಎಕರೆ ಕೃಷಿ ಭೂಮಿಯನ್ನು ಹೊಂದಿರಬೇಕು.
  • ರೈತರು FID ನಂಬರ್ ಪಡೆದಿರಬೇಕು
  • ಜಮೀನು, ಫಲಾನುಭವಿ ಹೆಸರಿನಲ್ಲಿ ಇರಬೇಕು
  • ಫಲಾನುಭವಿ ಹೆಸರಿನಲ್ಲಿ ಬ್ಯಾಂಕ್ ಖಾತೆ ಇರಬೇಕು
  • ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು ಮತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

https://raitamitra.karnataka.gov.in/

ಮೇಲೆ ನಿಡಲಾದ ವೆಬ್ಸೈಟ್ಗೆ  ಭೇಟಿ ನೀಡಿ ಅಗತ್ಯ ದಾಖಲಾತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು ಇಲ್ಲವೇ ಹತ್ತಿರದ ಕೃಷಿ ಇಲಾಖೆಯ ಕಚೇರಿ ಅಥವಾ ಕೃಷಿ ವಿಸ್ತರಣಾಧಿಕಾರಿ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಅಗತ್ಯವಿರುವ ದಾಖಲೆಗಳು;

  • ಪಡಿತರ ಚೀಟಿ
  • ಆಧಾರ್ ಕಾರ್ಡ್
  • ಮತದಾರರ ಗುರುತಿನ ಚೀಟಿ
  • ಯುಟಿಲಿಟಿ ಬಿಲ್
  • ಬ್ಯಾಂಕ್ ಪಾಸ್ ಬುಕ್
  • ಭೂ ಮಾಲೀಕತ್ವ ದಾಖಲೆ
  • ಯಂತ್ರ ಉಪಕರಣಗಳ ಉಲ್ಲೇಖ
  • ಪಾಸ್ಪೋರ್ಟ್ ಗಾತ್ರದ ಫೋಟೋ
  • ಯಾವುದೇ ಇತರೆ ದಾಖಲೆಗಳು

 

 

 

WhatsApp Group Join Now
Telegram Group Join Now

Leave a Comment

copy
share with your friends.