Electric Scooters: ಇಲ್ಲಿದೆ ನೋಡಿ! ಕಡಿಮೆ ಬೆಲೆಗೆ ಉತ್ತಮ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಗಳು

Electric Scooters: ಇಲ್ಲಿದೆ ನೋಡಿ! ಕಡಿಮೆ ಬೆಲೆಗೆ ಉತ್ತಮ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಗಳು

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಎಲೆಕ್ಟ್ರಿಕ್ ಸ್ಕೂಟರ್  ಗಳಿಗೆ (Electric Scooters) ಬಾರಿ ಬೇಡಿಕೆ ಹೆಚ್ಚುತ್ತಿದ್ದು, ಕಡಿಮೆ ಬಲಿಗೆ ಹೆಚ್ಚು ಮೈಲೇಜ್(Good Mailage) ನೀಡುವ ಸ್ಕೂಟರ್ ಗಳು ಗ್ರಾಹಕರ ಮನಸ್ಸನ್ನು ಸೆಳೆಯುತ್ತದೆ. ಹೊಸ ಹೊಸ ತಂತ್ರಜ್ಞಾನಗಳು, ಬೈಕ್, ಕಾರ್ ಮೊಬೈಲ್ಗಳ ಅಪ್ಡೇಟ್ ಪಡೆಯಲು ನಮ್ಮ ಗ್ರೂಪ್ ಸೇರಿಕೊಳ್ಳಿ  ಇಲ್ಲಿ ಕ್ಲಿಕ್ ಮಾಡಿ

ಈಗ ಎಲ್ಲೆಡೆ ವಿದ್ಯುತ್ ವಾಹನಗಳು ರಾರಾಜಿಸುತ್ತಿದೆ, ಅನೇಕ ಜನರು ವಿದ್ಯುತ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಆದ್ರೆ ಸ್ವಲ್ಪ ಬೆಲೆ ಹೆಚ್ಚಿರುವುದರಿಂದ ಹಿಂದೆ ಸರಿಯುತ್ತಿದ್ದಾರೆ.

ಈಗ ಚಿಂತೆ ಬೇಡ, ಒಂದೇ ಚಾರ್ಜಿನಲ್ಲಿ 100 ಕಿಲೋಮೀಟರ್ಗಳಗಿಂತ ಹೆಚ್ಚು ಸಾಗಬಹುದಾದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಗಳು (Electric Scooters) ಮಾರುಕಟ್ಟೆಯಲ್ಲಿ ಲಭ್ಯವಿದೆ.

ಈ ಹಿನ್ನೆಲೆಯಲ್ಲಿ ಕಡಿಮೆ ಬೆಲೆಯ ಉತ್ತಮ ವೈಶಿಷ್ಟ್ಯ ಉಳ್ಳ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಗಳ ವಿವರಗಳು ಕೆಳಗಿನಂತಿವೆ;

ಕೋಮಕಿ ಎಕ್ಸ್1 ಎಸ್ ಸ್ಕೂಟರ್ (Komaki X1 S)

 

Komaki X1 S ಈ ಸ್ಕೂಟರ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಪೋರ್ಟಬಲ್ ಚಾರ್ಜರ್ ಬಳಸಿಕೊಂಡು ಕೇವಲ 4-5 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಈ ಸ್ಕೂಟರ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 150 KM ಪ್ರಯಾಣಿಸಬಹುದು, ಇದರ ಬೆಲೆ ಕೇವಲ ರೂ.59,990 (ex showroom price) ಆಗಿದೆ.

ಕೈನೆಟಿಕ್ ಗ್ರೀನ್ ಜೂಮ್ ಬಿಗ್ ಬಿ ಸ್ಕೂಟರ್ (Kinetic Green Zoom Big B)

Kinetic Green Zoom Big B ಈ ಸ್ಕೂಟರ್ 1.7 kWh ಬ್ಯಾಟರಿಯನ್ನು ಹೊಂದಿದ್ದು, 3 ಘಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ಪ್ರಯಾಣಿಸಬಹುದು. ಇದರ ಬೆಲೆ ರೂ. 78,776 (ex showroom price).

ಅಥರ್ ರಿಜ್ಟಾ ಸ್ಕೂಟರ್ (Ather Rizta)

Ather Rizta  ಈ ಸ್ಕೂಟರ್ ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದ್ದು, 2.9 kWh ಮತ್ತು 3.7 kWh ಬ್ಯಾಟರಿಗಳನ್ನು ಸಹ ಒಳಗೊಂಡಿದೆ. ಇವುಗಳನ್ನು ಪೋರ್ಟಬಲ್ ಅಥವಾ ಡ್ಯುಯೋ ಚಾರ್ಜರ್ ಬಳಸಿ ಚಾರ್ಜ್ ಮಾಡಬಹುದು. ಇದೊಂದು ಬಾರಿ ಚಾರ್ಜ್ ಮಾಡಿದರೆ 123 ರಿಂದ 159 ಕಿಲೋಮೀಟರ್‌ ವರೆಗೆ ಪ್ರಯಾಣ ಮಾಡಬಹುದು. ಬೆಲೆ ರೂ.99,999 ರಿಂದ ರೂ.1.46 ಲಕ್ಷವರೆಗೆ ಇದೆ.

ವಿಡಾ ವಿ2 ಪ್ಲಸ್ (Vida V2 Plus)

Vida V2 Plus  ಮಾದರಿಯಲ್ಲಿ ತೆಗೆಯಬಹುದಾದ ಡ್ಯುಯಲ್ 3.4 kWh ಬ್ಯಾಟರಿಗಳು ಇದ್ದು, ಇದು ಶಾಶ್ವತವಾಗಿ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ 3.9kW ಶಕ್ತಿ ಮತ್ತು 25Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕೇವಲ 5.5 ಗಂಟೆಗಳ ಚಾರ್ಜಿಂಗ್ ನಂತರ 143km ಪ್ರಯಾಣಿಸಬಹುದು. ಬೆಲೆ ರೂ. 97,800 (ex showroom price).

ಓಲಾ S1X ಸ್ಕೂಟರ್ (Ola S1X)

Ola S1X ಈ ಸ್ಕೂಟರ್ ಮೂರು ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದ್ದು, 2kWh, 3kWh ಮತ್ತು 4kWh ಸಾಮರ್ಥ್ಯದ ಬ್ಯಾಟರಿಗಳ ಆಯ್ಕೆಗಳನ್ನು ಒಳಗೊಂಡಿದೆ. ಇದನ್ನು 5-7 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು. ಈ ಸ್ಕೂಟರ್ 95 ರಿಂದ 190 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಬೆಲೆ ರೂ.69,999 ರಿಂದ ರೂ.91,999 ವರೆಗೆ ಇದೆ.

 

 

Leave a Comment