KSRTC BUS: ಜ.01 ರಿಂದ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಬಂದ್! ಎಲ್ಲೆಡೆ ಕರಪತ್ರ ಹಂಚಿಕೆ; ಯಾಕೆ ಎಂಬ ಮಾಹಿತಿ ಇಲ್ಲಿದೆ.

KSRTC BUS: ಜ.01 ರಿಂದ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಬಂದ್! ಎಲ್ಲೆಡೆ ಕರಪತ್ರ ಹಂಚಿಕೆ; ಯಾಕೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಒಟ್ಟು ಆರು ಸಾರಿಗೆ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದೆ.

ಡಿಸೆಂಬರ್ 31 ರಿಂದ ಮುಷ್ಕರವು ಘೋಷಣೆಯಾಗಲಿದ್ದು, ಮುಷ್ಕರವು ಯಶಸ್ವಿಯಾಗುವ ನಿಟ್ಟಿನಲ್ಲಿ ಬುದುವಾರದಿಂದಲೇ ಸಾರಿಗೆ ಸಂಘಟನೆಗಳು ತಯಾರಾಗಿದೆ, ಡಿಸೆಂಬರ್ 31 ರಿಂದ ರಾಜ್ಯದ ಆರು ಸಂಘಟನೆಗಳ ಬಸ್ ಸಂಚಾರ ಅನುಮಾನವಾಗಿದೆ.

ಜನವರಿ ಒಂದರಿಂದ ಸಾರಿಗೆ ಸಂಘಟನೆಗಳ ಇಲಾಖೆಯು, ಸಂಚಾರ ಇರುವುದಿಲ್ಲ ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿಕೊಂಡಿದೆ, ಪ್ರಯಾಣಿಕರಿಗೆ ಮತ್ತು ಸಾರಿಗೆ ನೌಕರರಿಗೆ ಕರ ಪತ್ರ ಹಂಚಿಕೆ ಮಾಡಿದೆ. ಡಿಪೋ-13 ಕತ್ರಿಗುಪ್ಪೆ, ಡಿಪೋ -20 ಬನಶಂಕರಿ, ಡಿಪೋ -7 ವಾಲ್ಟೋ ಬಸ್ ಡಿಪೋ, ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಸೇರಿದಂತೆ BMTC  ಬಸ್ ಡಿಪೋಗಳಿಗೆ ತೆರಳಿ ಡಿಸೆಂಬರ್ 31 ರಿಂದ ಯಾರು ಕರ್ತವ್ಯ ನಿರ್ವಹಿಸಬಾರದು ಡ್ರೈವರ್, ನಿರ್ವಾಹಕರು, ಮೆಕಾನಿಕ್ ಗಳಿಗೆ ಸಾರಿಗೆ ಮುಖಂಡರು ಕರ ಪತ್ರ ಹಂಚಿದ್ದಾರೆ.

ಇದೇ ವಿಷಯವಾಗಿ ಮಾತನಾಡಿದ ಸಾರಿಗೆ ಮುಖಂಡರು, ಶಕ್ತಿ ಯೋಜನೆಯ ಹಣ ಬಾಕಿ ರೂ. 2000 ಕೋಟಿ ಹಾಗೆ ಉಳಿದಿದೆ, ಅದನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

WhatsApp Group Join Now
Telegram Group Join Now

Leave a Comment

copy
share with your friends.