KSRTC BUS TICKET: ಪ್ರಯಾಣಿಕರಿಗೆ ಬಿಗ್ ಶಾಕ್! ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ?
ಹೊಸ ವರ್ಷದ ಆರಂಭದ ಬೆನ್ನೆಲೆ, ಇತ್ತ ರಾಜ್ಯದ ಜನತೆಗೆ ಸಾರಿಗೆ ಇಲಾಖೆಯು ಬಿಗ್ ಶಾಕ್ ನೀಡಲು ಮುಂದಾಗಿದೆ, ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯ ಬಳಿಕ ಬಸ್ ಟಿಕೆಟ್(Bus Ticket) ದರ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಎಲ್ಲಾ ಸಾರಿಗೆ ಇಲಾಖೆಯು ಹಿಂದೆ, 25% ರಷ್ಟು ಬಸ್ ಟಿಕೆಟ್ ದರದ ಏರಿಕೆಗೆ ಮನವಿ ಮಾಡಿದ್ದರು, 25% ಅಲ್ಲದಿದ್ದರೂ ಅರ್ಧದಷ್ಟು ಟಿಕೆಟ್ ದರ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಸರ್ಕಾರವು ಸಂಕ್ರಾಂತಿ ಹಬ್ಬದ ನಂತರ ಬಸ್ ಟಿಕೆಟ್ ದರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ, ಸಿಎಂ ಜೊತೆಗೂಡಿ ಸಾರಿಗೆ ನೌಕರರ ಸಂಘಟನೆಗಳ ಸಭೆಯಲ್ಲಿ ಪ್ರಸ್ತಾಪವಾಗಬಹುದು ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ದರ, ಬಿಡಿ ಭಾಗಗಳ ದರ ಏರಿಕೆಯಾಗಿದೆ, ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಇನ್ನು ಟಿಕೆಟ್ ದರ ಮೊದಲಿನಂತೆಯೇ ಇದೆ. ಇಂಧನಗಳ ದರಗಳು ನಾಲ್ಕೈದು ವರ್ಷಗಳಿಂದ ಏರಿಕೆಯಾಗುತ್ತಲೇ ಇದೆ, ಆದ್ದರಿಂದ ವಿವಿಧ ಬಸ್ ನಿಗಮಗಳು ಟಿಕೆಟ್ ದರದ ಏರಿಕೆಯ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದರು, ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೂಡಿ ಸಾರಿಗೆ ನೌಕರರ ಸಂಘಟನೆಗಳ ಸಭೆಯಲ್ಲಿ, ಸಂಕ್ರಾಂತಿಯ ಬಳಿಕ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.