Jio vs Airtel ಜಿಯೋ – ಏರ್ಟೆಲ್ ನಲ್ಲಿ ಯಾವುದು ಬೆಸ್ಟ್ ಪ್ಲಾನ್? ಇಲ್ಲಿದೆ ಸಂಪೂರ್ಣ ಮಾಹಿತಿ
Jio VS Airtel Best Recharge Plan:
ಜಿಯೋ(Jio) ಮತ್ತು ಏರ್ಟೆಲ್(Airtel) ಭಾರತದ ಎರಡು ಅತಿ ದೊಡ್ಡ ಖಾಸಗಿ ಕಂಪನಿಗಳಾಗಿವೆ, ಎರಡು ಕಂಪನಿಗಳು ತಮ್ಮ ಪೋಸ್ಟ್ ಪೈಡ್(Postpaid) ಮತ್ತು ಪ್ರಿಪೇಯ್ಡ್(Prepaid) ಯೋಜನೆಗಳ ಬೆಲೆಯನ್ನು ಗಣನೆಯವಾಗಿ ಹೆಚ್ಚಿಗೆ ಮಾಡಿದ್ದು, ಇದರಿಂದ ಗ್ರಾಹಕರಿಗೆ ತಮ್ಮ ಬಜೆಟ್(Budget) ಗೆ ಅನುಗುಣವಾಗಿ ಕಡಿಮೆ ಬೆಲೆಯ ರಿಚಾರ್ಜ್(Reacharge) ಗಳನ್ನು ಆಯ್ಕೆ ಮಾಡುವುದು ತುಂಬಾ ಕಷ್ಟಕರವಾಗುತ್ತಿದೆ.
ಜಿಯೋದ ಅತ್ಯಂತ ಅಗ್ಗದ ಯೋಜನೆ:
ಜಿಯೋ ರೂ.249 ರ ಪ್ರಿಪೇಡ್(Prepaid) ಯೋಜನೆಯನ್ನು ಬಳಕೆದಾರರಿಗೆ ತುಂಬಾ ಉಪಯುಕ್ತ ಮತ್ತು ಕಂಪನಿಯು ಸಹ ಈ ಯೋಜನೆಯನ್ನು ಜನಪ್ರಿಯ ವರ್ಗದ ಪಟ್ಟಿಯಲ್ಲಿ ಇರಿಸಿದೆ. ಈ ಯೋಜನೆಯ ಮಾನ್ಯತೆಯು 28 ದಿನಗಳು, ಪ್ರತಿದಿನ 1GB ಡಾಟಾ(Data) ಸಿಗಲಿದೆ, ದೈನಂದಿನ ವೇಗದ ಡಾಟಾ ಮುಗಿದ ಬಳಿಕ 64kbps ವೇಗದಲ್ಲಿ ಡಾಟಾ ಸೌಲಭ್ಯಗಳು ಸಿಗಲಿದೆ.
ಇದರೊಂದಿಗೆ ಈ ಯೋಜನೆಯಲ್ಲಿ ಅನಿಯಮಿತ ಕರೆ (Unlimited Calls) ಮತ್ತು ದಿನಕ್ಕೆ 100 ಎಸ್ಎಂಎಸ್ (Sms) ಸೌಲಭ್ಯಗಳನ್ನು ಪಡೆಯಬಹುದು. ಜಿಯೋ ಸಿನಿಮಾ(Jio Cinema), ಜಿಯೋ ಟಿವಿ(Jio Tv) ಮತ್ತು ಜಿಯೋ ಕ್ಲೌಡ್(Jio Cloud) ಚಂದದಾರಿಕೆಯನ್ನು ಪಡೆಯಬಹುದು. ಆದರೆ ಈ ಯೋಜನೆಯಲ್ಲಿ ಜಿಯೋ ಸಿನಿಮಾ ಪ್ರೀಮಿಯಂ(Jio Cinema Premium) ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ.
ಏರ್ಟೆಲ್ನ ಅತ್ಯಂತ ಅಗ್ಗದ ಯೋಜನೆ:
ಏರ್ಟೆಲ್(Airtel) ರೂ.249 ರ ಪ್ರಿಪೇಯ್ಡ್(Prepaid) ಯೋಜನೆಯನ್ನು ನೀಡುತ್ತಿದೆ, ಆದರೆ ಈ ಯೋಜನೆಯ ಮಾನ್ಯತೆಯು ಕೇವಲ 24 ದಿನಗಳು ಮಾತ್ರ. ಜಿಯೋ(Jio) ದ ರೂ.249 ರ ಯೋಜನೆಯಲ್ಲಿ ಬಳಕೆದಾರರು 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ.
ಏರ್ಟೆಲ್ ನ ರೂ.249 ರ ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 1ಜಿಬಿ ಡೇಟಾ, ಪ್ರತಿದಿನ 100 Sms ಮತ್ತು ಅನಿಯಮಿತ ಕರೆ ಸೌಲಭ್ಯವನ್ನು 24 ದಿನಗಳವರೆಗೆ ಪಡೆಯುತ್ತಾರೆ. ಯೋಜನೆಯಲ್ಲಿ ಏರ್ಟೆಲ್ ಎಕ್ಸ್ಟ್ರೀಮ್ ಅಪ್ಲಿಕೇಶನ್(Airtel extreme Application) ಉಚಿತ ವಿಷಯವನ್ನು ಪಡೆಯಬಹುದು, ಆದರೆ ಯಾವುದೇ ಪ್ರೀಮಿಯಂ ವಿಷಯದ ಪ್ರಯೋಜನಗಳು ಈ ಯೋಜನೆಯಲ್ಲಿ ಲಭ್ಯವಿಲ್ಲ. ಈ ಯೋಜನೆಯಲ್ಲಿ ಉಚಿತ ಹೆಲೋಟ್ಯೂನ್(HelloTune) ಸೌಲಭ್ಯವನ್ನು ಪಡೆಯಬಹುದು.
ನೀವೇನಾದರೂ ಏರ್ಟೆಲ್ (Airtel) ಬಳಕೆದಾರರಾಗಿದ್ದರೆ, ಅದೇ ಪ್ರಯೋಜನಗಳನ್ನು 28 ದಿನಗಳ ಅವಧಿಗೆ ಪಡಿಯಬೇಕೆಂದಿದ್ದರೆ, ರೂ.299 ರ ಪ್ರಿಪೇಯ್ಡ್ ಯೋಜನೆಯನ್ನು ಖರೀದಿಸಬೇಕಾಗುತ್ತದೆ. ನೀವು ಇಸ್ಟೇ ಅವಧಿಯ ಯೋಜನೆಗಾಗಿ ಜಿಯೋಕ್ಕಿಂತ(Jio) ಏರ್ಟೆಲ್(Airtel) ಅಲ್ಲಿ ರೂ.50 ಹೆಚ್ಚುವರಿಯಾಗಿ ಖರ್ಚು ಮಾಡಬೇಕಾಗುತ್ತದೆ.