Jio Reacharge Plan: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ಕಡಿಮೆ ಬೆಲೆಯ 03 ತಿಂಗಳ ಹೊಸ ರಿಚಾರ್ಜ್ ಪ್ಲಾನ್
ಜಿಯೋ ಪ್ರಸ್ತುತವಾಗಿ ಭಾರತದ ಎಲ್ಲರ ಮನೆ ಮಾತಾಗಿದೆ, ಇತ್ತೀಚಿಗೆ ಎಲ್ಲಾ ಟೆಲಿಕಾಂ(Telicom) ಕಂಪನಿಗಳು ರಿಚಾರ್ಜ್ ಬೆಲೆಯನ್ನು ಹೆಚ್ಚು ಮಾಡಿದ ಹಿನ್ನೆಲೆಯಲ್ಲಿ ಗ್ರಾಹಕರು ಜಿಯೋ ತೊರೆದು ಬೇರೆ ನೆಟ್ವರ್ಕ್ ಗಳನ್ನು ಹುಡುಕುತ್ತಿದ್ದಾರೆ, ಇದೀಗ ಜಿಯೋ (Jio) ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ರಿಚಾರ್ಜ್ ಯೋಜನೆಯನ್ನು ಪರಿಚಯ ಮಾಡಿದೆ. ದೀರ್ಘಾವಧಿಯ ವ್ಯಾಲಿಡಿಟಿ ಹುಡುಕುತ್ತಿದ್ದರೆ ನಿಮಗೆ ಈ ರಿಚಾರ್ಜ್ ಪ್ಲಾನ್ (Reacharge Plan) ಉತ್ತಮವಾಗಿದೆ.
ಗ್ರಾಹಕರಿಗೆ ಅನುಕೂಲವಾದ ಹಾಗೂ ಉತ್ತಮ ಮೌಲ್ಯವುಳ್ಳ 90 ದಿನಗಳ ಅಂದರೆ 03 ತಿಂಗಳ ಜನಪ್ರಿಯ ಹೊಸ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ, ಜಿಯೋ ಕಂಪನಿಯ ತನ್ನ ರಿಚಾರ್ಜ್ ಮೌಲ್ಯವನ್ನು ಹೆಚ್ಚು ಮಾಡಿದ ಬೆನ್ನಲ್ಲೇ ಗ್ರಾಹಕರು BSNL,AIRTEL ಮುಂತಾದ ಕಂಪನಿಗಳಿಗೆ ಜಂಪ್ ಆಗಿದ್ದರು, ಹೀಗಾಗಿ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಜಿಯೋ ಹೊಸ ಹರಿಶ್ಚಂದ್ರ ಪ್ಲಾನ್ ಅನ್ನು ಜಾರಿ ಮಾಡಿದೆ, ಕೇವಲ ರೂ.899 ರಿಚಾರ್ಜ್ ಪ್ಲಾನ್(Reacharge Plan) ಆಗಿದೆ.
ನೀವು ಈ ಹೊಸ ರೂ.899 ರ ರಿಚಾರ್ಜ್ ಮಾಡಿಸಿಕೊಂಡರೆ, ಯಾವುದೇ ನೆಟ್ವರ್ಕ್ ಗೆ ಉಚಿತವಾಗಿ ಅನಿಯಮಿತ 90 ದಿನಗಳವರೆಗೆ ಕರೆಗಳನ್ನು(Free Unlimited Call) ಮಾಡಬಹುದು, ಈ ಯೋಜನೆಯಲ್ಲಿ 100 sms ದಿನಕ್ಕೆ ಉಚಿತವಾಗಿ ಸಿಗುತ್ತದೆ, ಪ್ರತಿದಿನ ನೀವು 2GB ಹೈ ಸ್ಪೀಡ್ ಇಂಟರ್ನೆಟ್(Highspeed Internet) ಉಪಯೋಗಿಸಬಹುದು. ನೀವು ಒಟ್ಟಾರೆ 90 ದಿನಗಳಿಗೆ 180 GB ಡೇಟಾವನ್ನು ಬಳಸಬಹುದು. ಇದರ ಜೊತೆಗೆ ನಿಮಗೆ ಜಿಯೋ ಮನರಂಜನ ಅಪ್ಲಿಕೇಶನ್ (Entertainment Application) ಸೇವೆಗಳಿಗೆ ಉಚಿತ ಪ್ರವೇಶ ಪಡೆಯಬಹುದು.
ಕೈಗೆಟಕುವ ಬೆಲೆಯಲ್ಲಿ, ನೀವು ಕರೆಸೇವೆ ಮತ್ತು ತಡೆರಹಿತ ಇಂಟರ್ನೆಟ್ ಹುಡುಕುವರಾದರೆ ನಿಮಗೆ ಈ ರಿಚಾರ್ಜ್ ಪ್ಲಾನ್ ಉಪಯೋಗವಾಗಲಿದೆ. ರೂ.899 ರಿಚಾರ್ಜ್ ಪ್ಲಾನ್ ಮಾಡುವ ಮೂಲಕ ಜಿಯೋ ಬಳಕೆದಾರರು ಮೂರು ತಿಂಗಳ ಹೆಚ್ಚಿನ ವೇಗದ ಡಾಟಾ, ತಡೆರಹಿತ ಸಂಪರ್ಕ ಆನಂದಿಸಬಹುದು. ನಿಮಗೆ ಈ ರಿಚಾರ್ಜ್ ಫ್ಯಾನ್ ಇಷ್ಟವಾದರೆ ಇಂದೇ ರೀಚಾರ್ಜ್ ಮಾಡಿಸಿಕೊಳ್ಳಿ.