Jio Payments Bank: ಜಿಯೋ ಪೇಮೆಂಟ್ಸ್ ಬ್ಯಾಂಕಿನಿಂದ ಬಂಪರ್ ಆಫರ್! ಹೊಸ ಖಾತೆದಾರರು ರೂ.5000 ಮೌಲ್ಯದ ರಿವಾರ್ಡ್ ಗಳಿಸಿ.
ಜಿಯೋ ಪೇಮೆಂಟ್ಸ್ ಬ್ಯಾಂಕಿನಿಂದ(Jio Payments Bank) ಗ್ರಾಹಕರಿಗೆ ಹಬ್ಬದ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ, ಡಿಸೆಂಬರ್ 25 ರಿಂದ 31ರವರೆಗೆ ಹೊಸ ಖಾತೆಯನ್ನು(ಅಕೌಂಟ್) ತೆರೆಯುವ ಗ್ರಾಹಕರು ರೂ.5000 ಮೌಲ್ಯದ ರಿವರ್ಡ್ಸ್(Rewards) ಗಳನ್ನು ಪಡೆದುಕೊಳ್ಳಬಹುದು.
ನೀವು ಈ ಖಾತೆಯನ್ನು ತೆರೆಯುವುದರಿಂದ, ಮೆಕ್ ಡೊನಾಲ್ಡ್ ಇಸ್ ಮೈ ಟ್ರಿಪ್ ಮತ್ತು ಮ್ಯಾಕ್ಸ್ ಫ್ಯಾಶನ್ ನಂತಹ ಜನಪ್ರಿಯ ಕುಪನ್ಗಳನ್ನು(Coupons) ಪಡೆಯಬಹುದು. ಈ ಬ್ಯಾಂಕ್ ತನ್ನ ಡಿಜಿಟಲ್ ಫಸ್ಟ್(Digitel First) ವಿಧಾನಕ್ಕೆ ಖ್ಯಾತಿಯನ್ನು ಪಡೆದಿದ್ದು, ಕೇವಲ 5 ನಿಮಿಷಗಳಲ್ಲಿ ಗ್ರಾಹಕರು ಉಳಿತಾಯ ಖಾತೆಯನ್ನು(Savings Accounts) ತೆರೆಯಬಹುದು.
ಖಾತೆ ತೆರೆಯುವಿಕೆ ಸುಲಭ!
ಈ ಬ್ಯಾಂಕ್ ತನ್ನ ಡಿಜಿಟಲ್ ಫಸ್ಟ್(Digitel First) ವಿಧಾನಕ್ಕೆ ಖ್ಯಾತಿಯನ್ನು ಪಡೆದಿದ್ದು, ಕೇವಲ 5 ನಿಮಿಷಗಳಲ್ಲಿ ಗ್ರಾಹಕರು ಉಳಿತಾಯ ಖಾತೆಯನ್ನು(Savings Accounts) ತೆರೆಯಬಹುದು, 18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯನು ಈ ಬ್ಯಾಂಕ್(Jio Payments Bank) ಖಾತೆಯನ್ನು ತೆರೆಯಬಹುದು ಎಂದು ಬ್ಯಾಂಕ್ ಅಧಿಕೃತ ಮಾಹಿತಿಯನ್ನು ಹೊರಡಿಸಿದೆ.
Jio Payments Bank ನ ಪ್ರಮುಖ ಲಕ್ಷಣಗಳು;
ಈ ಬ್ಯಾಂಕಿನ ಪ್ರಮುಖ ಲಕ್ಷಣಗಳು ಯಾವುದೆಂದರೆ,
- ಬಯೋಮೆಟ್ರಿಕ್ ಆಧಾರಿತ ದೃಢೀಕರಣ
- ವರ್ಚುಯಲ್ &
- ರೂಪೇ ಪ್ಲಾಟಿನಮ್ ಕಾರ್ಡುಗಳು
- ತಡೆರಹಿತ ಬ್ಯಾಂಕಿಂಗ್ ಅನುಭವ
ಜಿಯೋ ಹಬ್ಬದ ಸಮಯದಲ್ಲಿ ಗ್ರಾಹಕರಿಗೆ ಈ ರೀತಿಯ ಉಡುಗೊರೆಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ಗ್ರಾಹಕರು ಜಿಯೋ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನು ತೆರೆಯಲು ಯಾವುದೇ ಶುಲ್ಕವಿಲ್ಲ (No Fees), ಖಾತೆಯನ್ನು ತೆರೆಯಲು ಗ್ರಾಹಕರು ಕೇವಲ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ (Pan Card) ಅನ್ನು ನೀಡಬೇಕಾಗುತ್ತದೆ. ವಿಶೇಷವೇನೆಂದರೆ, ನಿಮ್ಮ ಬಳಿ ಜಿಯೋ ನಂಬರ್ ಇಲ್ಲದಿದ್ದರೂ ನೀವು ಜಿಯೋ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನು (Jio Payments Bank Account) ತೆರೆಯಬಹುದು.
ಜಿಯೋ UPI ಹ್ಯಾಂಡಲ್!
ಖಾತೆದಾರರು ಬ್ಯಾಂಕ್ ಖಾತೆಯನ್ನು ತೆರೆದ ತಕ್ಷಣವೇ, JIO UPI handle ಅನು ಸ್ವೀಕರಿಸುತ್ತಾರೆ. ಇದನ್ನು ಗ್ರಾಹಕರು ಖಾತೆಯನ್ನು ತೆರೆಯುವಾಗ ಕಸ್ಟಮೈಸ್ ಮಾಡಬಹುದು, ಇದಲ್ಲದೆ ಖಾತೆಯು ನಿಷ್ಕ್ರಿಯವಾಗಿದ್ದರೆ ಯಾವುದೇ ದಂಡವಿಲ್ಲ, ಜಿಯೋ ಪೇಮೆಂಟ್ಸ್ ಬ್ಯಾಂಕ್ ಹಬ್ಬದ ಸಮಯಗಳಲ್ಲಿ ಈ ರೀತಿಯ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.