Jio Offer’s: ಕೇವಲ 601 ರೂ. ಗೆ, ವರ್ಷವಿಡಿ 5G ಅನ್ಲಿಮಿಟೆಡ್ ವೋಚರ್!

Jio Offer’s: ಕೇವಲ 601 ರೂ. ಗೆ, ವರ್ಷವಿಡಿ 5G ಅನ್ಲಿಮಿಟೆಡ್ ವೋಚರ್!

ಜಿಯೋ (Jio) ಗ್ರಾಹಕರಿಗೆ ಇದೀಗ ಸಿಹಿ ಸುದ್ದಿ, ತನ್ನ ಗ್ರಾಹಕರಿಗಾಗಿ ರಿಲಯನ್ಸ್ ಜಿಯೋ (Reliance jio) ಹೊಸದಾಗಿ ವರ್ಷಪೂರ್ತಿ ಅನ್ಲಿಮಿಟೆಡ್ 5G ಡೇಟಾ ಬಳಸುವ ಯೋಜನೆಯನ್ನು ಪರಿಚಯಿಸಿದೆ, ಈ ಡೇಟಾ ಯೋಜನೆಯ ವಿಶೇಷವೇನೆಂದರೆ, ಯೋಜನೆಯನ್ನು ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರಿಗೆ ಹುಡುಗರೆಯಾಗಿ ಕೊಡಬಹುದು, 5G ಗಿಫ್ಟ್ ವೊಚರ್ ನ ಬಗ್ಗೆ ಇನ್ನಷ್ಟು ಮಾಹಿತಿಯು ಕೆಳಗಿನಂತಿವೆ.

ತನ್ನ ಗ್ರಾಹಕರಿಗೆ ಅನ್ಲಿಮಿಟೆಡ್ 5G ಡೇಟಾವನ್ನು ಒದಗಿಸಲು ಜಿಯೋ (Jio) ಉತ್ತಮ ಕೊಡುಗೆಯನ್ನು ತಂದಿದೆ, ಹೊಸ ವರ್ಷದ ಆಗಮನದಲ್ಲಿ ಈ ಕೊಡುಗೆಯು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತದೆ ಎಂದು Jio ನಿರೀಕ್ಷಿಸುತ್ತಿದೆ. ಈ ಆಫರ್ ನಲ್ಲಿ ನೀವು ಕೇವಲ ರೂ.601 ಪಾವತಿಸಿ ವರ್ಷವಿಡಿ ಅನ್ಲಿಮಿಟೆಡ್ 5G ಡೇಟಾವನ್ನು ಪಡೆಯಲು, ‘Jio true 5G Gift voucher’ ಪಡೆಯಬೇಕು, ಇದನ್ನು ಸಕ್ರಿಯಗೊಳಿಸಿದರೆ ನೀವು ವರ್ಷಪೂರ್ತಿ 5G ಸೇವೆಯನ್ನು ಪಡೆಯಬಹುದು.

ನೀವು ರೂ.601 ಪಾವತಿಸಿ 5G Upgrade Gift Voucher ಖರೀದಿಸಬೇಕು, ನೀವು ಮೈ ಜಿಯೋ ಆಪ್ (My Jio App) ಬಳಸಿ ಇದನ್ನು ಸಕ್ರಿಯಗೊಳಿಸಿದರೆ ನಿಮಗೆ ಹಲವು ಪ್ರಯೋಜನ ಸಿಗಲಿದೆ. ವಿಶೇಷವೇನೆಂದರೆ, 4G ಬಳಕೆದಾರರು ಕೂಡ ಈ ಯೋಜನೆಯನ್ನು ಬಳಸಬಹುದು. ಅದೇನೆಂದರೆ ಈಗಾಗಲೇ 4G ಸೇಬಿಯನ್ನು ಪಡೆಯುತ್ತಿರುವ ಗ್ರಾಹಕರು, 5G ಸೇವೆಗಳನ್ನು ಪಡೆಯಲು ಈ ವೋಚರ್ ಮೂಲಕ ನೀವು ಅಪ್ಗ್ರೇಡ್ ಮಾಡಿಕೊಳ್ಳಬಹುದು.

ನೀವು 5G ಡೇಟಾ ವೋಚರನ್ನು ಬಳಸಬೇಕಾದರೆ ಈಗಾಗಲೇ ಕನಿಷ್ಠ ಅಂದರೆ 1.5GB 4G ಡೇಟಾಗೆ ಮಾಸಿಕ ಇಲ್ಲವೇ ತ್ರೈಮಾಸಿಕ ಯೋಜನೆಯಲ್ಲಿ ರಿಚಾರ್ಜ್ ಮಾಡಿಸಿಕೊಂಡಿರಬೇಕು. ಈಗಾಗಲೇ ದಿನಕ್ಕೆ 1GB ಡೇಟಾ ಯೋಜನೆಯಲಿರುವವರು ಮತ್ತು ರೂ.1899 ರ ವಾರ್ಷಿಕ ರಿಚಾರ್ಜ್ ಹಾಕಿಸಿಕೊಂಡಿರುವವರಿಗೆ ಈ 5G ವೋಚರ್ ಕೆಲಸ ಮಾಡುವುದಿಲ್ಲ, ಅಂದರೆ ದಿನಕ್ಕೆ 1GB ಬಳಸುವವರು True 5G ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಜಿಯೋ ಟ್ರೂ 5ಜಿ ಅಪರಿಮಿತ ಡೇಟಾ ಗಿಫ್ಟ್ ವೋಚರ್

ನೀವು Jio true 5G Gift voucher ಅನ್ನು ನಿಮಗಾಗಿ ಮಾತ್ರವಲ್ಲದೆ ನಿಮ್ಮ ಸ್ನೇಹಿತರು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಬಹುದು, My Application ಮೂಲಕ ಈ ವೋಚರ್ ಅನ್ನು ಬೇರೆಯವರಿಗೆ ಉಡುಗೊರೆಯಾಗಿ ಕೊಡಬಹುದು. ನೀವು ಈ ವೋಚರ್ ಬಳಸಿ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುವವರಾಗಿರಬೇಕು, ಆಗ ಮಾತ್ರ 5G ವೋಚರ್ ಅನ್ನು ಹುಡುಗರಿಯಾಗಿ ನೀಡಬಹುದು.

ಈ 5G ಡೇಟಾ ವೋಚರ್ ರೂ.199, ರೂ.239, ರೂ.299, ರೂ.319, ರೂ.329, ರೂ.579, ರೂ.666, ರೂ.769, ರೂ.899 ರಿಚಾರ್ಜ್ ಹಾಕಿಸಿಕೊಂಡವರು ಮಾತ್ರ ಪ್ರಯೋಜನಗಳನ್ನು ಪಡೆಯಬಹುದು. ಗ್ರಾಹಕರು ಈ ಮೂಲಕವಾಗಿ ಯೋಜನೆಯನ್ನು ಆಧರಿಸಿ 5G ಡೇಟಾ ಡೇಟಾ ವೋಚರ್ ಸಿಂಧುತ್ವ ಪಡೆಯಬಹುದು.

 

5G ಡೇಟಾ ವೋಚರ್ ಸಕ್ರಿಯಗೊಂಡ ಬಳಿಕ ಗ್ರಾಹಕರು 3GB ದೈನಿಕ 4G Data ಜೊತೆಗೆ, ಅಪರಿಮಿತ 5G ಡೇಟಾವನ್ನು ಸಹ ಪಡೆಯಬಹುದು. ಇದಲ್ಲದೆ ನೀವು ಜಿಯೋ 51ರೂ. (1 ತಿಂಗಳು), 101ರೂ. (2 ತಿಂಗಳುಗಳು),151ರೂ. (3 ತಿಂಗಳುಗಳು) ಬೆಲೆಯಲ್ಲಿ 5G voucher ಯೋಜನೆಗಳನ್ನು ಸಹ ನೀಡುತ್ತಿದೆ.

 

Leave a Comment