Jio Electric Cycle| ಬಡವರ ಎಲೆಕ್ಟ್ರಿಕ್ ಸೈಕಲ್! 400 Km ಮೈಲೇಜ್, ಇಲ್ಲಿದೆ ಸಂಪೂರ್ಣ ಮಾಹಿತಿ
ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ತುಂಬಾ ಹೆಚ್ಚಾಗುತ್ತಿದೆ, ದೊಡ್ಡ ಕಂಪನಿ ಗಳಿಂದ ಹಿಡಿದು ಸಣ್ಣ ಸ್ಟಾರ್ಟ್ ಅಪ್ ಕಂಪನಿಗಳವರೆಗೂ ಎಲೆಕ್ಟ್ರಿಕ್ ವಾಹನಗಳನ್ನು (Electic Vehicles) ಬಿಡುಗಡೆ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ಸೈಕಲ್ ಗಳಿಗೂ ಭಾರಿ ಬೇಡಿಕೆ ಹೆಚ್ಚಾಗುತ್ತಿದೆ. ಹೆಚ್ಚಿನ ತಂತ್ರಜ್ಞಾನ ವಿಷಯಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಇದೇ ಸಮಯದಲ್ಲಿ ಜಿಯೋ ಕೂಡ ತಮ್ಮದೇ ಆದ ಎಲೆಕ್ಟ್ರಿಕ್ ಸೈಕಲ್ ಗಳನ್ನು(Jio Electric Cycle) ಬಿಡುಗಡೆ ಮಾಡಲು ಸಜ್ಜಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನವನ್ನು ಹುಟ್ಟು ಹಾಕಿರುವ, ಜಿಯೋ(Jio) ಈಗ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸೈಕಲ್ಗಳನ್ನು ಬಿಡುಗಡೆ ಮಾಡಲಿದೆಯೇ? ಇನ್ನು ಯಾವುದೇ ಅಧಿಕೃತ ಘೋಷಣೆ ಹೊರ ಬಂದಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಜಿಯೋ 2025ರ ಕೊನೆಯ ವೇಳೆಗೆ ಎಲೆಕ್ಟ್ರಿಕ್ ಸೈಕಲ್(Electric Cycle) ಗಳನ್ನು ಬಿಡುಗಡೆ ಮಾಡುತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ವೆಚ್ಚವು ರೂ.30,000 ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ.
ಹಲವು ಮಾಹಿತಿಗಳ ಪ್ರಕಾರ, ಈ ಸೈಕಲ್ ರಿಮೂವ್ ಮಾಡಬಹುದಾದ ಲಿಥಿಯಂ- ಅಯಾನ್ ಬ್ಯಾಟರಿಯನ್ನು ಹೊಂದಿದೆ, ಇದು ಫಾಸ್ಟ್ ಚಾರ್ಜಿಂಗ್ಗೆ ಸಹಾಯ ಮಾಡಲಿದೆ, ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಿ ಸೈಕಲ್ ಬಳಸಬಹುದು ಎಂದು ಹೇಳಲಾಗುತ್ತಿದೆ.
ಜೊತೆಗೆ ಡಿಜಿಟಲ್ ಡಿಸ್ಪ್ಲೇ, GPS ಟ್ರ್ಯಾಕಿಂಗ್, ಬ್ಲೂಟೂತ್ ಮತ್ತು ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ಸೈಕಲನ್ನು ಆರಂಭಿಸಿ ನಿಯಂತ್ರಿಸುವ ಆವಿಷ್ಕಾರವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ದಿನನಿತ್ಯದ ಕೆಲಸಕ್ಕೆ ಹೋಗಿ ಬರುವ ವ್ಯಕ್ತಿಗಳಿಗೆ ಈ ಸೈಕಲ್ ಉಪಯೋಗವಾಗಲಿದೆ ಎಂದು ಹೇಳಲಾಗುತ್ತಿದೆ, ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನವನ್ನು ಸೃಷ್ಟಿಸಿದ ಹಾಗೆ EV ಕ್ಷೇತ್ರಕ್ಕೂ ಕ್ರಾಂತಿ ತರಬಹುದೆಂದು ನೋಡಬೇಕಾಗಿದೆ.