Indian Railway Recruitment: ರೈಲ್ವೆ ಇಲಾಖೆಯಲ್ಲಿ 753 ಹುದ್ದೆಗಳ ನೇಮಕಾತಿ, ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ
ರೈಲ್ವೆ ನೇಮಕಾತಿ(RRB) ಮಂಡಳಿಯಲ್ಲಿ ನೂರಾರು ಬೋಧಕರ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಅವಮಾನ ಮಾಡಲಾಗಿದೆ, ನೇಮಕಾತಿಯು 2025 ನೇ ಸಾಲಿನಲ್ಲಿ ನಡೆಯಲಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ, ಅರ್ಹ ವಿದ್ಯಾರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ.
ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಹಾಗೂ ಬೋಧಕ ವೃತ್ತಿಯಲ್ಲಿ ಆಸಕ್ತಿಯುಳ್ಳವರು, ಉದ್ಯೋಗ ಓದುವ ಆಸೆ ಇರುವವರು ಕೂಡಲೇ ಅರ್ಜಿ ಸಲ್ಲಿಸಬಹುದು. ಒಟ್ಟು 753 ಬೋಧನಾ ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.
ಈ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಾನ ಪ್ರಕ್ರಿಯೆ, ಆಯ್ಕೆಯ ವಿಧಾನ ಹಾಗೂ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ ಅಭ್ಯರ್ಥಿಗಳು ಮಾಹಿತಿಯನ್ನು ಸಂಪೂರ್ಣವಾಗಿ ಓದಿ, ತಿಳಿದುಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು.
ಹುದ್ದೆಗಳಿಗೆ ಸಂಬಂಧಿಸಿದ ವಿವರಗಳು;
ಇಲಾಖೆಯ ಹೆಸರು | ರೈಲ್ವೆ ನೇಮಕಾತಿ ಮಂಡಳಿ (RRB) |
ಹುದ್ದೆಯ ಹೆಸರು | ಶಿಕ್ಷಕ ವೃತ್ತಿ |
ಖಾಲಿ ಇರುವ ಹುದ್ದೆಗಳು | 753 |
ಉದ್ಯೋಗ ಸ್ಥಳ | ಭಾರತದಾದ್ಯಂತ |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ವೇತನ ಶ್ರೇಣಿ | ನಿಯಮದ ಪ್ರಕಾರ |
ಖಾಲಿ ಇರುವ ಹುದ್ದೆಗಳ ವಿವರಗಳು:
ಹುದ್ದೆಗಳ ಹೆಸರು | ಖಾಲಿ ಇರುವ ಹುದ್ದೆಗಳು |
ಸ್ನಾತಕೋತ್ತರ ಶಿಕ್ಷಕರು | 187 |
ತರಬೇತಿ ಪಡೆದ ಪದವಿದರ ಶಿಕ್ಷಕರು | 338 |
ಪ್ರಾಥಮಿಕ ಶಿಕ್ಷಕರು | 188 |
ಸಹಾಯಕ ಶಿಕ್ಷಕ | 02 |
ಗ್ರಂಥಪಾಲಕ | 10 |
ದೈಹಿಕ ತರಬೇತಿ ಭೋದಕ | 18 |
ಪ್ರಯೋಗಾಲಯ ಸಹಾಯಕ | 07 |
ಸಂಗೀತ ಶಿಕ್ಷಕ | 03 |
RRB ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಕೆ ಹೇಗೆ?
ಆರ್ ಆರ್ ಬಿ ಶಿಕ್ಷಕರ ಹುದ್ದೆಯಲ್ಲಿ 753 ಹುದ್ದೆಗಳು ಖಾಲಿ ಇದ್ದು ನೇಮಕಾತಿಯಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಅರ್ಜಿ ಸಲ್ಲಿಸುವ ದಿನಾಂಕ 7 ಜನವರಿ 2025 ರಿಂದ ಆರಂಭವಾಗಿ 6 ಫೆಬ್ರವರಿ 2025 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ, ಮಾರ್ಚ್ 2025ರ ಹೊತ್ತಿಗೆ ಪರೀಕ್ಷೆಯನ್ನು ನಿರೀಕ್ಷೆ ಮಾಡಲಾಗಿದೆ.
ಅಭ್ಯರ್ಥಿಗಳು ದಾಖಲಾತಿಗಳ ಸಮೇತ ಮೇಲೆ ನೀಡಲಾದ ಅಧಿಕೃತ ವೆಬ್ಸೈಟ್ ಮೂಲಕ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕು, ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ತಾವು ಯಾವ ಹುದ್ದೆಗಳಿಗೆ ಅರ್ಹರು ಎಂದು ತಿಳಿದು ಅರ್ಜಿ ಸಲ್ಲಿಸುವುದು ಒಳ್ಳೆಯದು.
ಅಗತ್ಯವಿರುವ ದಾಖಲೆಗಳು
- ವೈಯಕ್ತಿಕ ವಿವರಗಳು
- ಶಿಕ್ಷಣ, ಇತಿಹಾಸ ವೃತ್ತಿಪರ ಅನುಭವ ಮಾಹಿತಿ ನೀಡಬೇಕು
- ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ಪಾಸ್ಪೋರ್ಟ್ ಸೈಜ್ ಫೋಟೋ
- ಸಹಿ
- ಶೈಕ್ಷಣಿಕ ಪ್ರಮಾಣ ಪತ್ರ
ಅರ್ಜಿ ಶುಲ್ಕ ಪಾವತಿಯ ವಿಧಾನಗಳು:
- ನೆಟ್ ಬ್ಯಾಂಕಿಂಗ್
- ಡೆಬಿಟ್/ಕ್ರೆಡಿಟ್ ಕಾರ್ಡ್
- ಆನ್ಲೈನ್ ನಲ್ಲಿ ಅರ್ಜಿ ಶುಲ್ಕ ಪಾವತಿಸಬೇಕು