Income Tax| ಮಧ್ಯಮ ವರ್ಗದವರಿಗೆ ಜಾಕ್ ಫಾಟ್! ಆದಾಯ ತೆರಿಗೆ ಮಹತ್ವದ ಬದಲಾವಣೆ

Income Tax| ಮಧ್ಯಮ ವರ್ಗದವರಿಗೆ ಜಾಕ್ ಫಾಟ್! ಆದಾಯ ತೆರಿಗೆ ಮಹತ್ವದ ಬದಲಾವಣೆ

ಕೇಂದ್ರ ಬಜೆಟ್ 2025: ನಿರ್ಮಲಾ ಸೀತಾರಾಮನ್

ಫೆಬ್ರವರಿ 01 2025 ಶನಿವಾರ ಸತತ 7ನೇ ಬಾರಿಗೆ ನಿರ್ಮಲ ಸೀತಾರಾಮನ್ ಅವರು ಹಣಕಾಸು ಸಚಿವರಾಗಿ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ, ಈ ಬಾರಿಯ ಬಜೆಟ್ ನಲ್ಲಿ ಜನಸಾಮಾನ್ಯರಿಗೆ ಹಣಕಾಸು ಸಚಿವರು ಏನು ಕೊಡುಗೆ ನೀಡಲಿದ್ದಾರೆ ಎನ್ನುವ ಸಾಕಷ್ಟು ನಿರೀಕ್ಷೆಗಳಿವೆ.

ಆದಾಯ ತೆರಿಗೆ ಸಂಬಂಧಿಸಿದ ಹಾಗೆ ಈ ಬಾರಿಯ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಕೊಡುಗೆ ಬಗ್ಗೆ ಮಾಧ್ಯಮ ವರ್ಗದವರು ಮತ್ತು ತೆರಿಗೆದಾರರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

2025 ರ ಬಜೆಟ್ ನಲ್ಲಿ ನಿರ್ಮಲ ಸೀತಾರಾಮನ್ ಅವರು ಆದಾಯ ತೆರಿಗೆಯ ಮೂರು ಮಹತ್ವದ ಬದಲಾವಣೆಗಳನ್ನು ತರಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿಯ ಬಜೆಟ್ ನಲ್ಲಿ ಸ್ಟ್ಯಾಂಡರ್ಡ್ ಡಿಟೆಕ್ಷನ್ ಮೊತ್ತವನ್ನು ರೂ.75,000 ದಿಂದ ರೂ 1,00,000 ದವರಿಗೆ ಇರಿಸಬಹುದು ಎಂದು ನಿರೀಕ್ಷಿಸಲಾಗಿದೆ, ಇದರಿಂದ ವಾರ್ಷಿಕ ರೂ.1 ಲಕ್ಷದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ.

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 87 A ಅಡಿಯಲ್ಲಿ ಪ್ರಸ್ತುತ ರೂ.7 ಲಕ್ಷ ಇರುವ ತೆರಿಗೆ ಮುಕ್ತ ಆದಾಯದ ಮಿತಿಯನ್ನು ರೂ.8 ಲಕ್ಷದವರೆಗೆ ಏರಿಸಬಹುದು ಎಂಬ ನಿರೀಕ್ಷೆ ಇದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ತೆರಿಗೆ ಸ್ಲ್ಯಾಬ್‌ಗಳನ್ನು ಕೆಳಗಿನಂತೆ ನಿರೀಕ್ಷೆ ಮಾಡಬಹುದು. ರೂ. 4 ಲಕ್ಷದವರೆಗಿನ ಆದಾಯ – ಶೂನ್ಯ ತೆರಿಗೆ ರೂ.4 ಲಕ್ಷದಿಂದ ರೂ. 8 ಲಕ್ಷ – 5% ತೆರಿಗೆ ರೂ.8 ಲಕ್ಷದಿಂದ ರೂ10 ಲಕ್ಷ – 10% ತೆರಿಗೆ, ರೂ10 ಲಕ್ಷದಿಂದ ರೂ12 ಲಕ್ಷ – 15% ತೆರಿಗೆ, ರೂ12 ಲಕ್ಷದಿಂದ ರೂ15 ಲಕ್ಷ – 20% ತೆರಿಗೆ, ರೂ15 ಲಕ್ಷಕ್ಕಿಂತ ಹೆಚ್ಚು – 30% ತೆರಿಗೆ

 

 

Leave a Comment