HSRP NUMBER PLATE ಅಳವಡಿಕೆಗೆ ಡೇಡ್ ಲೈನ್! ಇದುವೇ ಕೊನೆಯಾವಕಾಶ
ಕರ್ನಾಟಕ ರಾಜ್ಯವು ವಾಹನ ಸವಾರರಿಗೆ HSRP Number Plate ಅಳವಡಿಸಲು ಇಲ್ಲಿಯವರೆಗೂ 5 ಬಾರಿ ಅವಕಾಶ ನೀಡಿದರು ಸಹ, ಇನ್ನು ಹಲವಾರು ವಾಹನ ಸವಾರರು ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇರುವುದರಿಂದ ಇದೀಗ ಕೊನೆಯ ಅವಕಾಶವನ್ನು ಘೋಷಣೆ ಮಾಡಿದೆ.
HSRP Number Plate ಅಳವಡಿಕೆಗೆ ಕೊನೆಯ ದಿನಾಂಕ ಯಾವಾಗ? ಅಳವಡಿಸುವುದು ಹೇಗೆ? ಎಲ್ಲಾ ಮಾಹಿತಿಯು ಕೆಳಗಿನಂತಿವೆ;
HSRP ನಂಬರ್ ಪ್ಲೇಟ್ ಅಂದರೆ ಏನು?
HSRP ಇದರ ವಿಸ್ಕೃತ ರೂಪ ಅಂದರೆ, High Security Registration Plate, ಈ ನಂಬರ್ ಪ್ಲೇಟ್ ಅತ್ಯಂತ ಸುರಕ್ಷಿತವಾದ ನಂಬರ್ ಪ್ಲೇಟ್ ಆಗಿದೆ, ಇದನ್ನು ಇನ್ನೊಂದು ಸವಾರರು ಮರುಬಳಕೆ ಮಾಡಲು ಸಾಧ್ಯವಿಲ್ಲ. ಈ ನಂಬರ್ ಪ್ಲೇಟ್ ನಿಂದ ವಾಹನ ಕಳುವಾದಾಗ ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ, ವಾಹನ ಸವಾರರು ಅನಧಿಕೃತವಾಗಿ ಬಳಕೆ ಮಾಡಲು ಸಾಧ್ಯವಿಲ್ಲ.
ಕೊನೆಯ ದಿನಾಂಕ ಯಾವಾಗ?
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಇದೆ 31 ಜನವರಿ 2025 ಕೊನೆಯ ದಿನಾಂಕವಾಗಿದೆ, ಇಲ್ಲವಾದಲ್ಲಿ ನೀವು ಫೆಬ್ರುವರಿ 01 ರಿಂದ ಭಾರಿ ದಂಡವನ್ನು ಕಟ್ಟಬೇಕಾಗುತ್ತದೆ.
ಯಾರು HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕು?
ಈ ನಂಬರ್ ಪ್ಲೇಟ್ ಅನ್ನು ಏಪ್ರಿಲ್ 1 2019ಕ್ಕಿಂತಲೂ ಮೊದಲು ವಾಹನ ಖರೀದಿ ಮಾಡಿದವರು ಅಳವಡಿಸಿಕೊಳ್ಳಬೇಕು. ಇವರನ್ನು ಹೊರತುಪಡಿಸಿ ಯಾರು ತಮ್ಮ ವಾಹನಗಳಿಗೆ ಹೆಚ್ಎಸ್ಆರ್‌ಪಿ (HSRP) ನಂಬರ್ ಪ್ಲೇಟ್ ಹೊಂದಿಲ್ಲವೋ ಅವರು ಕೂಡ ಅಳವಡಿಸಿಕೊಳ್ಳಬೇಕು.
HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?
SIAM(ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್) ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು, ಅಥವಾ ನಿಮ್ಮ ವಾಹನದ ಶೋರೂಮ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ನಂಬರ್ ಪ್ಲೇಟ್ ಪಡೆಯಬಹುದು.