RBI UPDATE: ನಕಲಿ ₹500 ನೋಟು ಗುರುತಿಸುವುದು ಹೇಗೆ? RBI ಸ್ಪಷ್ಟಣೆ! ಇಲ್ಲಿದೆ ಸಂಪೂರ್ಣ ಮಾಹಿತಿ
RBI: ದೇಶದಲ್ಲಿ ಹಲವು ಕ್ರಮಗಳನ್ನು ಕೈಕೊಂಡರು ಸಹ ನಕಲಿ ನೋಟುಗಳ ಹಾವಳಿ ಪ್ರಕರಣಗಳು ಹೆಚ್ಚುತ್ತಲೇ ಇದೆ, ಇದೀಗ RBI ನಕಲಿ ₹500 ನೋಟುಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ, ದೇಶದಲ್ಲಿ 500ರ ನಕಲಿ ನೋಟುಗಳು ಹೆಚ್ಚು ಚಲಾವಣೆ ಆಗುತ್ತಿದೆ, ಹೀಗಾಗಿ ಅದನ್ನು ನಕಲಿಯೋ, ಅಸಲಿಯೋ ಅನ್ನುವುದನ್ನು ಗುರುತಿಸಲು ಮಾರ್ಗ ಸೂಚಿ ನೀಡಿದೆ.
500 ರೂ ನೋಟು (ನೋಟು ಅಮಾನ್ಯೀಕರಣದ ನಂತರ)
ನೋಟು ಅಮಾನೀಕರಣದ ನಂತರ ₹500 ನೋಟು ಒಂದು ಮುಖ್ಯವಾದ ಹಣಕಾಸಿನ ಮೌಲ್ಯವಾಗಿದೆ, ವಿಶೇಷವಾಗಿ ರೂ.1,000 ಮತ್ತು ರೂ.2,000 ನಿಲ್ಲಿಸಿದ ನಂತರ ಕಳೆದ ಐದು ವರ್ಷಗಳಲ್ಲಿ ₹5,00 ನೋಟುಗಳ ಚಲಾವಣೆಯಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ, ವರದಿಗಳ ಪ್ರಕಾರ 217% ಚಲಾವಣೆ ಯು ಹೆಚ್ಚಳವಾಗಿದೆ ಎಂದು ಸೂಚಿಸುತ್ತದೆ.
ಸಂಸತ್ತಿನ ಮಾಹಿತಿ
ನಕಲಿ ನೋಟುಗಳ ಹಾವಳಿಯು, 2018-19 ರಲ್ಲಿ 21,865 ಮಿಲಿಯನ್ ನೋಟುಗಳಿಂದ 2022-23 ರಲ್ಲಿ 91,110 ಮಿಲಿಯನ್ ಮೌಲ್ಯದ ನಕಲಿ ನೋಟುಗಳು ಏರಿಕೆಯಾಗಿದೆ, ಎಂದು ಸಂಸತ್ತಿನ ಮಾಹಿತಿಯು ಬಹಿರಂಗಪಡಿಸುತ್ತದೆ, 2023-24 ರಲ್ಲಿ 15% ರಷ್ಟು ನಕಲಿ ನೋಟುಗಳು ಇಳಿಕೆಯಾಗಿದೆ ಅಂದರೆ 85,711 ಮಿಲಿಯನ್ ಆಗಿದೆ.
ನಕಲಿ ನೋಟುಗಳ ಬಗ್ಗೆ ಎಚ್ಚರ
ನಕಲಿ ನೋಟುಗಳ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ, ನಕಲಿ ನೋಟುಗಳನ್ನು ಗುರುತಿಸಲು RBI ಕೆಲವು ಮಾರ್ಗ ಸೂಚಿಗಳನ್ನು ಒದಗಿಸುತ್ತದೆ, ಇವುಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ತಡೆಗಟ್ಟಲು ಸಹಾಯ ಮಾಡುತ್ತದೆ.
ಮೊದಲ ಹಂತ;
ನಿಜವಾದ ₹5,00 ನೋಟಿನ ಅಳತೆಯು 66mm ×159mm ಇರುತ್ತದೆ, ಭದ್ರತಾ ಧಾರವನ್ನು ಓರಿಯಾಗಿ ಮಾಡಿದಾಗ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ನೋಟು ಬದಲಾಗುತ್ತದೆ.
ಎರಡನೇ ಹಂತ;
ನೋಟಿನಲ್ಲಿ ದೇವನಾಗರಿ ಲಿಪಿಯಲ್ಲಿ ‘500’ ಅಂಕಿಯನ್ನು ಬರೆಯಲಾಗಿದೆ, ವಾಟರ್ ಮಾರ್ಕ್ ನಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಮತ್ತು 500 ಸಂಖ್ಯೆ ಇದೆ.
ಕೊನೆಯ ಹಂತ;
ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧೀಜಿಯವರ ಚಿತ್ರವು ಸ್ಪಷ್ಟವಾಗಿ ಗೋಚರಿಸುತ್ತದೆ, ‘RBI ‘ ಮತ್ತು ಭಾರತವನ್ನು ಸೂಕ್ಷ್ಮಾಕ್ಷರಗಳಲ್ಲಿ ಮುದ್ರಿಸಲಾಗಿದೆ. ಏರುತ್ತಿರುವ ಅಂಕಿ ಅಂಶಗಳು ಮೇಲಿನ ಎಡ ಮತ್ತು ಕೆಳಗಿನ ಬಲಭಾಗದಲ್ಲಿ ಇದೆ. ಅಶೋಕಸ್ಥಂಭದ ಲಾಂಛನ ಬಲಭಾಗದಲ್ಲಿದೆ ಮತ್ತು ಮುದ್ರಣದ ವರ್ಷ ಎಡಭಾಗದಲ್ಲಿದೆ.