Fake Watermelon| ಮಾರುಕಟ್ಟೆಗೆ ಬಂದಿದೆ ನಕಲಿ ಕಲ್ಲಂಗಡಿ ಹಣ್ಣು! ಪತ್ತೆ ಹಚ್ಚುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ವ್ಯಾಪಾರಗಳನ್ನು ಹೆಚ್ಚಿಸಲು ಮಾರುಕಟ್ಟೆಗಳಲ್ಲಿ ಕೆಲವು ವ್ಯಾಪಾರಿಗಳು ಹಣ್ಣುಗಳಿಗೆ ಕೃತಕ ಬಣ್ಣಗಳನ್ನು ಬೆರೆಸಿ ಮಾರಾಟ ಮಾಡುತ್ತಿದ್ದಾರೆ, ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಮಾತ್ರ ಗ್ರಾಹಕರಿಗೆ ಹೆಚ್ಚು ಆಕರ್ಷಕವಾಗಿ ಕಾಣಲಿ ಎನ್ನುವ ಕಾರಣಕ್ಕೆ ಕೃತಕ ಬಣ್ಣಗಳು ಮತ್ತು ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದಾರೆ.
ಬೇಸಿಗೆಯ ದಿನಗಳಲ್ಲಿ ಕಲ್ಲಂಗಡಿ ಹಣ್ಣುಗಳ ಮಾರಾಟ ಹೆಚ್ಚಾಗುತ್ತಿದೆ, ಇದನ್ನು ಬೇಸಿಗೆಯ ಹಣ್ಣು ಎಂದು ಕರೆಯಲಾಗಿದೆ, ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾದ ನೀರಿನ ಅಂಶ ಇರುವುದರಿಂದ, ಇದು ಆರೋಗ್ಯಕ್ಕೆ ಒಳ್ಳೆಯದು ತಂಪಾಗಿರಿಸಲು ಸಹಾಯ ಮಾಡುತ್ತದೆ. ಇದು ತುಂಬಾ ಸಿಹಿಯಾಗಿರುವುದರಿಂದ ಪ್ರತಿಯೊಬ್ಬರಿಗೂ ಇಷ್ಟವಾದ ಹಣ್ಣಾಗಿದೆ.
ಕೆಂಪು ಕೆಂಪಾಗಿರುವ ಕಲ್ಲಂಗಡಿ ಹಣ್ಣನ್ನು ಖರೀದಿಸುವ ಮುನ್ನ ಅವು ತಿನ್ನಲು ಸೂಕ್ತವಾಗಿದೆಯಾ ಎನ್ನುವುದನ್ನು ಪತ್ತೆಹಚ್ಚುವುದು ಬಹಳ ಮುಖ್ಯವಾಗಿದೆ. ಕೆಲವು ರಾಸಾಯನಿಕಗಳಿಂದ ಹಣ್ಣಿನ ಬಣ್ಣವನ್ನು ಹೆಚ್ಚಿಸಬಹುದು, ಕೆಲವೊಂದು ಬಾರಿ ಕಲ್ಲಂಗಡಿಗೆ ಕೃತಕ ಬಣ್ಣವನ್ನು ಸೇರಿಸಲಾಗುತ್ತದೆ, ಇದು ಕಲ್ಲಂಗಡಿ ಹಣ್ಣಿನ ನೈಸರ್ಗಿಕತೆಯನ್ನು ತೆಗೆದುಹಾಕುತ್ತದೆ, ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಫುಡ್ ಪಾಯಿಸನಿಂಗ್ ಹಾಗೂ ಜೀವನಕಾರಿ ಸಮಸ್ಯೆಗಳು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಹಣ್ಣಿನ ಕೆಳಭಾಗವನ್ನು ಪರಿಶೀಲಿಸಿ:
ಹಣ್ಣಿನ ಕೆಳಭಾಗದಲ್ಲಿ ನೈಸರ್ಗಿಕವಾಗಿ ತಿಳಿ ಹಳದಿ ಬಣ್ಣದಾಗಿರುತ್ತದೆ, ಇದನ್ನು ಹೊರತುಪಡಿಸಿ ಕಲ್ಲಂಗಡಿ ಹಣ್ಣಿನಲ್ಲಿ ಒಂದೇ ಬಣ್ಣದಲ್ಲಿದ್ದರೆ ಇದಕ್ಕೆ ಕೃತಕ ಬಣ್ಣವನ್ನು ಬೆರಿಸಬಹುದು..
ನೀರಿನಲ್ಲಿ ಬೆರೆಸಿ:
ಒಂದು ಪೀಸ್ ಕಲ್ಲಂಗಡಿ ಹಣ್ಣನ್ನು ನೀರಿನಲ್ಲಿ ಬೆರೆಸಿ, ಆಗ ನೀರು ಗುಲಾಬಿ ಬಣ್ಣಕ್ಕೆ ತಿರುಗಿದರೆ, ಆ ಹಣ್ಣಿನಲ್ಲಿ ಕೃತಕ ಬಣ್ಣ ಸೇರಿಸಲಾಗಿದೆ ಎಂದು ತಿಳಿಯಬಹುದು.
ಬೀಜಗಳ ಮೂಲಕ ಪತ್ತೆ;
ನೈಸರ್ಗಿಕವಾಗಿ ಕಲ್ಲಂಗಡಿ ಹಣ್ಣಿನ ಬೀಜಗಳು ಕಪ್ಪು ಹಾಗೂ ಕಂದು ಬಣ್ಣದಲ್ಲಿರುತ್ತದೆ, ಅಲ್ಲದೇ ಅದರ ಒಳಭಾಗವು ಕೆಂಪು ಬಣ್ಣದಲ್ಲಿರುತ್ತದೆ, ಆದರೆ ಇದನ್ನು ಕೃತಕವಾಗಿ ಪತ್ತೆಹಚ್ಚಲಾಗುವುದಿಲ್ಲ.
ಕೃತಕವಾದ ಕಲ್ಲಂಗಡಿ ಹಣ್ಣಿನ ಬೀಜಗಳು ಬಿಳಿ ಬಣ್ಣದಲ್ಲಿರುತ್ತದೆ, ಇವು ಒಳಗಿನಿಂದ ಗಾಢವಾದ ಕೆಂಪು ಬಣ್ಣದಲ್ಲಿರುತ್ತದೆ, ಆದರೆ ಕೆಲವೊಮ್ಮೆ ಕೈಗಳಿಗೆ ಈ ಬಣ್ಣ ತಾಗುವ ಸಾಧ್ಯತೆ ಇರುತ್ತದೆ.
ಕೆಂಪು ಬಣ್ಣಕ್ಕೆ ಮಾರು ಹೋಗಬೇಡಿ:
ರಸಭರಿತವಾದ ಕೆಂಪು ಕಲ್ಲಂಗಡಿ ಹಣ್ಣು ಆಕಾಶಕವಾಗಿ ಕಾಣಿಸಬಹುದು, ಆದರೆ ಇದರ ಹಿಂದಿನ ಕಾರಣವೇನೆಂದು ಗುರುತಿಸುವುದು ಬಹಳ ಮುಖ್ಯ. ಹಾಗಾಗಿ ಯಾವಾಗಲೂ ಸುರಕ್ಷಿತ ಮತ್ತು ನೈಸರ್ಗಿಕ ಹಣ್ಣುಗಳನ್ನು ಆರಿಸುವುದು ಮುಖ್ಯ.