Ration Card: ಹೊಸ ಸದಸ್ಯರನ್ನು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡುವುದು ಹೇಗೆ? ಇಲ್ಲಿದೆ ಪ್ರಮುಖ ಅಂಶಗಳು…

Ration Card: ಹೊಸ ಸದಸ್ಯರನ್ನು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡುವುದು ಹೇಗೆ? ಇಲ್ಲಿದೆ ಪ್ರಮುಖ ಅಂಶಗಳು…

ಸಾಮಾನ್ಯ ಜನರಿಗೆ ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ, ಪಡಿತರ ಚೀಟಿಯನ್ನು ಹೊಂದಿರುವಂತಹ ಜನರಿಗೆ ಸರ್ಕಾರವು ಕಡಿಮೆ ಬೆಲೆಯಲ್ಲಿ ದಿನಸಿಗಳನ್ನು ನೀಡುತ್ತದೆ. ಅದರಲ್ಲೂ BPL ಕಾರ್ಡ್ ಹೊಂದಿರುವ ಜನರಿಗೆ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರವು ನೀಡುತ್ತಿದೆ. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸ ಬಯಸುವವರು ಪ್ರಮುಖ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

ಸರ್ಕಾರವು ಜಾರಿಗೆ ತರುವಂತಹ ಹಲವು ಯೋಜನೆಗಳು ಹಾಗೂ ಕಡಿಮೆ ದರದಲ್ಲಿ ಪಡಿತರ ಸಿಗಲೆಂದು ಪಡಿತರ ಚೀಟಿಗಳನ್ನು ಬಡವರಿಗೆ ನೀಡುತ್ತದೆ. ಪಡಿತರ ಚೀಟಿಯಲ್ಲಿ(Ration Card) ಕುಟುಂಬದ ಸದಸ್ಯನ ಸೇರಿಸುವುದು ಗೊತ್ತಿಲ್ಲದಿದ್ದರೆ ಆನ್ಲೈನ್ (Online) ಮೂಲಕ ಸುಲಭವಾಗಿ ಸೇರಿಸಬಹುದು.

ಮನೆಯ ಸದಸ್ಯರನ್ನು ಪಡಿತರ ಚೀಟಿಗೆ ಸೇರ್ಪಡಿಸುವ ಚಿಂತೆ ನಿಮಗಿದ್ದರೆ ಈಗ ಚಿಂತಿಸುವ ಅಗತ್ಯವಿಲ್ಲ, ನೀವು ಮನೆಯಿಂದಲೇ ಆನ್ಲೈನ್(ಆನ್ಲೈನ್) ಮೂಲಕ ಪಡಿತರ ಚೀಟಿಗೆ ಕುಟುಂಬದ ಸದಸ್ಯರನ್ನು ಸೇರಿಸಬಹುದು. ಹೀಗೆ ಮಾಡಲು ಕುಟುಂಬದ ಮುಖ್ಯಸ್ಥರ ಪಡಿತರ ಚೀಟಿ(Ration Card) ಮತ್ತು ಅದರ ಫೋಟೋ ಪ್ರತಿಯನ್ನು ನೀವು ಹೊಂದಿರಬೇಕು, ಪಡಿತರ ಚೀಟಿಗೆ ಸಣ್ಣ ಮಗುವಿನ ಹೆಸರನ್ನು ಸೇರ್ಪಡೆ ಮಾಡಲು, ಆ ಮಗುವಿನ ಜನನ ಪ್ರಮಾಣ ಪತ್ರ ಮತ್ತು ಪೋಷಕರ ಆಧಾರ್ ಕಾರ್ಡ್(Adhar Card) ಮುಖ್ಯವಾಗಿರುತ್ತದೆ, ಜೊತೆಗೆ ವಿವಾಹಿತ ಮಹಿಳೆಯ ಹೆಸರನ್ನು ಕೂಡ ಸೇರಿಸಬೇಕಾಗುತ್ತದೆ.

ಪತ್ನಿಯ ಹೆಸರು ಸೇರ್ಪಡೆ ಮಾಡಲು ಬೇಕಾದ ದಾಖಲೆಗಳು; 

  • ಆಧಾರ್ ಕಾರ್ಡ್
  • ವಿವಾಹಿತ ಪ್ರಮಾಣ ಪತ್ರ
  • ಪೋಷಕರ ಪಡಿತರ ಚೀಟಿ ಬಹು ಮುಖ್ಯ.

ಮಗುವಿನ ಹೆಸರು ಸೇರ್ಪಡೆ ಮಾಡಲು ಬೇಕಾದ ದಾಖಲೆಗಳು; 

  • ಪೋಷಕರ ಆಧಾರ್ ಕಾರ್ಡ್
  • ಮಗುವಿನ ಜನನ ಪ್ರಮಾಣ ಪತ್ರ

ಹೊಸ ಸದಸ್ಯರ ಹೆಸರನ್ನು ಪಡಿತರ ಚೀಟಿಗೆ ಸೇರ್ಪಡೆ ಮಾಡಲು ಮೊದಲು ನೀವು ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು, ನಂತರ ಒಂದು ID ರಚಿಸಬೇಕಾಗುತ್ತದೆ, ಒಂದು ವೇಳೆ ID ಯನ್ನು ಮೊದಲೇ ರಚಿಸಿದ್ದರೆ, ಪಾಸ್ವರ್ಡ್ (Password) ಬಳಸಿ ಲಾಗಿನ್ ಆಗಿ, ನಂತರ ನೀವು ನಿಮ್ಮ ಪಡಿತರ ಚೀಟಿಗಳ ವಿವರಗಳನ್ನು ನೋಡುವಿರಿ, ಅದರಲ್ಲಿ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವ ಬಟನ್ ಮೇಲೆ ಕ್ಲಿಕ್ ಮಾಡಿ, ಕೊನೆಯಲ್ಲಿ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.

ಅರ್ಜಿ ಭರ್ತಿ ಮಾಡುವಾಗ ಸದಸ್ಯರ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ, ನಂತರ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಫಾರ್ಮ್ ಅನ್ನು ಸಲ್ಲಿಸಬೇಕು, ಫಾರ್ಮ ಸಲ್ಲಿಸಿದ ನಂತರ ನೀವು ನಿಮ್ಮ ನೋಂದಣಿ ಸಂಖ್ಯೆಯನ್ನು ಸ್ವೀಕರಿಸುವಿರಿ, ನೀವು ನಿಮ್ಮ ನೊಂದಣಿ ಸಂಖ್ಯೆಯನ್ನು ಬಳಸಿಕೊಂಡು ರೇಷನ್ ಕಾರ್ಡ್ ವಿವರಗಳನ್ನು ಟ್ರ್ಯಾಕ್ ಮಾಡಬಹುದು. ಇಲಾಖೆಯು ನೀವು ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿ, ಹೊಸ ಸದಸ್ಯರನ್ನು ನಿಮ್ಮ ಪಡಿತರ ಚೀಟಿಗೆ ಸೇರಿಸಲಾಗುತ್ತದೆ, ನೀವು ಹತ್ತಿರದ ಅಂಗಡಿಗೆ ಹೋಗುವ ಮೂಲಕ ಪಡಿತರ ಚೀಟಿ(Ration Card)ಯಲ್ಲಿ ನಿಮ್ಮ ಹೆಸರನ್ನು ಸೇರ್ಪಡೆ ಮಾಡಬಹುದಾಗಿದೆ.

 

WhatsApp Group Join Now
Telegram Group Join Now

Leave a Comment

copy
share with your friends.