Property: ಜಮೀನು ಮಾಲೀಕರಿಗೆ ಗುಡ್ ನ್ಯೂಸ್ ನೀಡಿದ ಸುಪ್ರೀಂ ಕೋರ್ಟ್! ಇಲ್ಲಿದೆ ಸಂಪೂರ್ಣ ಮಾಹಿತಿ.
ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಿರುವುದರಿಂದ ಜನರು ತಮ್ಮ ಪಟ್ಟಾ ಹಾಗೂ ಕೃಷಿ ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟು ಕೊಡುವ ಪರಿಸ್ಥಿತಿ ಎದುರಾಗಿದೆ, ಬಿಟ್ಟುಕೊಟ್ಟ ಜಮೀನಿಗೆ ಸರ್ಕಾರವು ಹಣವನ್ನು ನೀಡುತ್ತದೆಯಾದರೂ, ಆದರೆ ರೈತರು ಆ ಪರಿಹಾರಕ್ಕಾಗಿ ಎಲ್ಲಡೆ ಅಲೇದಾಡುವ ಪರಿಸ್ಥಿತಿ ಇದೆ. ಇನ್ನು ಮುಂದೆ ಈ ರೀತಿಯ ಜಮೀನುಗಳಿಗೆ ಪರಿಹಾರವು ಬಿಡಂಬವಾದರೆ ಚಿಂತಿಸಬೇಕಾಗಿಲ್ಲ, ಯಾಕೆಂದರೆ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
ಸುಪ್ರೀಂ ಕೋರ್ಟ್ ಭೂ ಪರಿಹರಕ್ಕೆ ಸಂಬಂಧಿಸಿದ ಹಾಗೆ ಭೂಮಿ ಕಳೆದುಕೊಳ್ಳುವ ಸಂತ್ರಸ್ಥರ ಪರವಾಗಿ ಮಹತ್ವದ ತೀರ್ಪನ್ನು ನೀಡಿದೆ, ಈ ತೀರ್ಪನ್ನು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಬಳಸಿಕೊಂಡು ನ್ಯಾಯಾಲಯವು ತೀರ್ಪನ್ನು ನೀಡಿದೆ. ಈ ತೀರ್ಪಿನ ವಿಶೇಷವೇನೆಂದರೆ ಭೂ ಪರಿಹಾರದ ಹಣವನ್ನು ತಕ್ಷಣವೇ ನಡೆದಿದ್ದರೆ ಸರ್ಕಾರದ ಖಜಾನೆಗೆ ನಷ್ಟವಾಗಲಿದೆ, ಯಾಕೆಂದರೆ ಸರ್ಕಾರವು ಪರಿಹಾರದ ಹಣವನ್ನು ಸಮಯಕ್ಕೆ ಸರಿಯಾಗಿ ನೀಡಲಿಲ್ಲವೆಂದರೆ, ಈಗಿನ ಭೂಮಿಧರದ ಆಧಾರದ ಮೇಲೆ ಪರಿಹಾರ ನೀಡಬೇಕಾಗುತ್ತದೆ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೊಂದರೆಯಾಗಲಿದೆ.
ಯಾವ ಕಾರಣಕ್ಕೆ ಈ ಅದೇಶ ನೀಡಲಾಗಿದೆ..?
ರೈತರು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ವಿರುದ್ಧ ದೂರು ಸಲ್ಲಿಸಿದ ಆರೋಪದಡಿ ವಿಚಾರಣೆ ನಡೆಸಿ ಈ ಆದೇಶವನ್ನು ನೀಡಲಾಗಿದೆ, ಬೆಂಗಳೂರು ಮೈಸೂರು ಕಾಲಿಡಾರ್ ಯೋಜನೆಗಾಗಿ ಸಾವಿರಾರು ಎಕ್ಕರೆಗಟ್ಟಲೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು 2003 ರಲ್ಲಿ KIADB ಅಧಿಸೂಚನೆಯನ್ನು ಹೊರಡಿಸಿತ್ತು, ಆದರೆ ಆಗ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರು ಪರಿಹಾರವನ್ನು ನೀಡಿರಲಿಲ್ಲ, ಅಧಿಸೂಚನೆಯ ನಂತರವೂ ಪರಿಹಾರ ನ್ಯಾಯಾಲಯದ ಮೆಟ್ಟಿಲೇರಿದ್ದರು, 2019 ರಲ್ಲಿ ಪರಿಹಾರ ನೀಡಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಮುಂದಾಗಿತ್ತು, ಆದರೆ ಅದು 2013ರ ಭೂಮಿ ದರವಾಗಿತ್ತು, ಹೀಗಾಗಿ ರೈತರು ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಸುಪ್ರೀಂಕೋರ್ಟ್ ಈ ಪ್ರಕರಣದ ತೀರ್ಪನ್ನು ನೀಡಿದೆ. ಸುಪ್ರೀಂ ಕೋರ್ಟ್ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಸಂತ್ರಸ್ಥರಿಗೆ 2019ರ ಮಾರುಕಟ್ಟೆಯ ದರದಲ್ಲಿ ಪರಿಹಾರವನ್ನು ನೀಡಬೇಕು ಎಂದು ತೀರ್ಪನ್ನು ನೀಡಿದೆ, ನ್ಯಾಯಮೂರ್ತಿಗಳಾದ ಕೆ.ವಿ.ವಿಶ್ವನಾಥನ್ ಮತ್ತು ಬಿ.ಆರ್.ಗವಾಯಿ ಅವರ ಪೀಠ ಈ ಪ್ರಕರಣದ ವಿಚಾರಣೆಯನ್ನು ನಡೆಸಿದೆ.