UPI ಬಳಕೆದಾರರಿಗೆ ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ;
ವ್ಯಾಪಾರ ಕ್ಷೇತ್ರದಲ್ಲಿ UPI ವಹಿವಾಟನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದೇ ತರಹದ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ ಹಾಗೆ ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ
ಯುಪಿಐ ಪಾವತಿ ಪ್ರೋತ್ಸಾಹ:
ಈ ಬಾರಿ ಸಣ್ಣ ಪುಟ್ಟ ಉದ್ಯಮಿಗಳಿಗೆ ಪ್ರೋತ್ಸಾಹವನ್ನು ನೀಡುವ ಸಲುವಾಗಿ ಕೇಂದ್ರ ಸಚಿವ ಸಂಪುಟವು ನಿರ್ಧಾರವನ್ನು ಮಾಡಿದೆ, ಇದಕ್ಕಾಗಿ ಕೇಂದ್ರ ಸರ್ಕಾರ ರೂ.1500 ಕೋಟಿ ಅನುಮೋದಿಸಿದೆ, ಸಾಮಾನ್ಯವಾಗಿ ಯುಪಿಐ ವಹಿವಾಟಿನ ಕ್ಯಾಶ್ ಬ್ಯಾಕ್ ಬಗ್ಗೆ ಎಲ್ಲರಿಗೂ ತಿಳಿದಿದೆ. (ಪ್ರತಿದಿನ ಯುಪಿಐ ಪಾವತಿಯ ಮಿತಿ)
ಆದರೆ ಈ ಬಾರಿ ಯುಪಿಐ ಬಳಕೆ ದಾರಿಗೆ ಸರ್ಕಾರ ಕ್ಯಾಶ್ಬ್ಯಾಕ್ ಮಾತ್ರವಲ್ಲದೆ, ಇನ್ಸೆಂಟಿವ್ ಕೂಡ ನೀಡಲಿದೆ.
ಬುದುವಾರ ಯುಪಿಐ ಪಾವತಿಗಳ ಬಗ್ಗೆ ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ, ರೂ.2,000 ವಹಿವಾಟುಗಳಿಗೆ ಇನ್ಸೆಂಟಿವ್ಸ್ ನೀಡಲಾಗುವುದು ಎಂದು ತಿಳಿದಿದೆ.
ಪ್ರಶಕ್ತ ಹಣಕಾಸು ವರ್ಷದಲ್ಲಿ ಸಣ್ಣಪುಟ್ಟ ಉದ್ಯಮಿಗಳಿಗೆ ರೂ.2000 ಮೇಲೆ 0.15% ಇನ್ಸೆಂಟಿವ್ ಸಿಗಲಿದೆ.
ಈ ಯೋಜನೆಯಡಿಯಲ್ಲಿ ಒಬ್ಬ ವ್ಯಕ್ತಿಯು UPI ಮೂಲಕಾ ವ್ಯಾಪಾರಿಗಳಿಗೆ ರೂ.2000 ದ ವರೆಗೆ ಕಳುಹಿಸಿದರೆ ವಹಿವಾಟಿನ ಮೇಲೆ 0.15% ಇನ್ಸೆಂಟಿವ್ಸ್ ನೀಡಲಾಗುವುದು ಎಂದು ಕೇಂದ್ರ ಸರ್ಕಾರವು ಘೋಷಣೆಯನ್ನು ಮಾಡಿದೆ.
ಆದರೆ ಈ ಸೌಲಭ್ಯವು ಸಣ್ಣ ಉದ್ಯಮಿಗಳಿಗೆ ಮಾತ್ರ ಸಿಗಲಿದೆ, ದೊಡ್ಡ ಉದ್ಯಮಿಗಳಿಗೆ ಪ್ರೋತ್ಸಾಹ ದ ಯಾವುದೇ ಲಾಭವು ಸಿಗುವುದಿಲ್ಲ.
ಅಲ್ಲದೆ ಸಣ್ಣಪುಟ್ಟ ವಹಿವಾಟುಗಳಿಗೆ ಶೂನ್ಯ ವ್ಯಾಪಾರಿ ರಿಯಾಯಿತಿ ದರ(MDR)ವನ್ನು ನಿರ್ವಹಿಸಲಾಗುತ್ತದೆ, ಇದು ಉಚಿತ ಡಿಜಿಟಲ್ ವಹಿವಾಟನ್ನು ಖಚಿತಪಡಿಸುತ್ತದೆ.
ಒಂದು ವೇಳೆ ಗ್ರಾಹಕರು ರೂ. 2000 ಅಥವಾದಕ್ಕಿಂತ ಕಡಿಮೆ ಖರೀದಿ ಮಾಡಿದರೆ ಮತ್ತು UPI ಮೂಲಕ ವಹಿವಾಟನ್ನು ನಡೆಸಿದರೆ, ಸಣ್ಣಪುಟ್ಟ ಉದ್ಯಮಕ್ಕೆ ಪ್ರತಿ ವಹಿವಾಟಿನ ಮೇಲೆ ರೂ.1.5 ಇನ್ಸೆಂಟಿವ್ ಸಿಗಲಿದೆ. (UPI ಪ್ರೋತ್ಸಾಹ ಧನ)
ಮತ್ತೊಂದೆಡೆ ಬ್ಯಾಂಕುಗಳಿಗೆ ಈ ಪ್ರೋತ್ಸಾಹ ಭತ್ಯೆ ಸಿಗಲಿದೆ, ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಮತ್ತು ನಗದು ರಹಿತ ಆರ್ಥಿಕ ವ್ಯವಹಾರವನ್ನು ಬಲಪಡಿಸುವ ಉದ್ದೇಶದಿಂದ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ.
ಸರ್ಕಾರದ ಪ್ರಕಾರ ಅಂಗಡಿಯವರಿಗೆ UPI ಈಗ ಸುಲಭದ ದಾರಿ, ಇದು ಸುರಕ್ಷಿತ ಮತ್ತು ವೇಗವಾದ ಪಾವತಿ ವಿಧಾನ ಎಂದು ಹೇಳಬಹುದಾಗಿದೆ. ಇದರ ಮೂಲಕವಾಗಿ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹೋಗುತ್ತದೆ.
ಈ ಸೌಲಭ್ಯವು ಯುಪಿಐ ಸೇವೆಯಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಲಭ್ಯವಿರುತ್ತದೆ.
ಡಿಜಿಟಲ್ ವಹಿವಾಟಿನ ದಾಖಲೆ ಸೃಷ್ಟಿಯಾಗುತ್ತದೆ, ಇದರಿಂದ ಸಾಲ ಪಡೆಯಲು ಗ್ರಾಹಕರಿಗೆ ಸುಲಭವಾಗುತ್ತದೆ, ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನಗಳು ಸಿಗಲಿವೆ ಮತ್ತು ಅದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬೇಕಾಗಿಲ್ಲ.