State Bank: ಬೆಳ್ಳಂ ಬೆಳಿಗ್ಗೆ ಸ್ಟೇಟ್ ಬ್ಯಾಂಕ್ ಖಾತೆಯನ್ನು ಹೊಂದಿದವರಿಗೆ ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣ ಮಾಹಿತಿ

State Bank: ಬೆಳ್ಳಂ ಬೆಳಿಗ್ಗೆ ಸ್ಟೇಟ್ ಬ್ಯಾಂಕ್ ಖಾತೆಯನ್ನು ಹೊಂದಿದವರಿಗೆ ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ಟೇಟ್ ಬ್ಯಾಂಕ್ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಇದು ಸಂತಸದ ಸುದ್ದಿಯಾಗಿದೆ, ಏನೆಂದರೆ ಪಿಕ್ಸ್ಡ್ ಡೆಪಾಸಿಟ್(Fixed Deposit) ಗಳ ಮೇಲೆ ಇರುವ ಬಡ್ಡಿ ದರಗಳು ಏರಿಕೆಯಾಗಿವೆ, SBI ಬ್ಯಾಂಕಿನಲ್ಲಿ 07 ದಿನಗಳಿಂದ 45 ದಿನಗಳವರೆಗೆ 3.50%, 46 ದಿನಗಳಿಂದ 179 ದಿನಗಳವರೆಗೆ 5.50%, 180 ದಿನಗಳಿಂದ 210 ದಿನಗಳವರೆಗೆ 6.00% ಮತ್ತು 211 ದಿನಗಳಿಂದ 1 ವರ್ಷಗಳ ಅವಧಿಗೆ 6.25 ಪ್ರತಿಶತ ಬಡ್ಡಿದರ(Intrest Rate) ಸಿಗಲಿದೆ.

WhatsApp Group Join Now
Telegram Group Join Now

ಉಳಿತಾಯ(Savings) ಮಾಡಬೇಕು ಅನ್ನುವವರಿಗೆ ಮೊದಲು ತಲೆಗೆ ಬರುವುದೇ FD ಅಂದರೆ ತಪ್ಪೇನಿಲ್ಲ. ಸ್ಥಿರ ಠೇವಣಿಯಲ್ಲಿ ನಿಮ್ಮ ಹೂಡಿಕೆಯು (Investment) ಸುರಕ್ಷಿತವಾಗಿರಲಿದೆ, ಅವಧಿಯ ನಂತರ ನೀವು ಖಚಿತವಾದ ಆದಾಯವನ್ನು ಪಡೆಯುವಿರಿ, ನೀವೇನಾದರೂ ಎಫ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ.

ಸ್ಥಿರಠೇವಣಿಯಲ್ಲಿ ಹೂಡಿಕೆ ಮಾಡುವ ಮೊದಲು ನೀವು ವಿವಿಧ ಬ್ಯಾಂಕುಗಳ ಬಡ್ಡಿದರವನ್ನು ಪರಿಶೀಲಿಸುವುದು ಬಹಳ ಮುಖ್ಯ. ದೇಶದ ಎರಡು ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ದಲ್ಲಿ ಎಷ್ಟು ಬಡ್ಡಿ ದರ (Intrest Rate) ನಿಮ್ಮ ಹೂಡಿಕೆಯ(Investment) ಮೇಲೆ ಸಿಗಲಿದೆ ಎಂದು ತಿಳಿದುಕೊಳ್ಳಿ.

ಎಫ್ ಡಿ ಯೋಜನೆಯಲ್ಲಿ ಹಣ ಸುರಕ್ಷಿತವಾಗಿ ಇರುತ್ತದೆ, ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಹೂಡಿಕೆ ಮಾಡಬೇಕು ಅನ್ನುವವರಿಗೆ ಈ ಯೋಜನೆಯು ಉತ್ತಮವಾದ ಆಯ್ಕೆ ಎಂದರೆ ತಪ್ಪೇನಿಲ್ಲ.

ಖರ್ಚು ಮಾಡುವುದನ್ನು ನಿಲ್ಲಿಸಲು ಖಂಡಿತವಾಗಿ ಎಲ್ಲರ ಕೈಯಿಂದಲೂ ಸಾಧ್ಯವಿಲ್ಲ, ಆದರೆ ಪ್ರತಿಯೊಬ್ಬರೂ ಕೂಡ ಹೂಡಿಕೆ(Invest) ಮಾಡುವುದು ಬಹಳ ಮುಖ್ಯ. ನಿಮ್ಮ ಮುಂದೆ ಹಲವು ಹೂಡಿಕೆಯ ಆಯ್ಕೆಗಳಿದ್ದರೂ ಅವೆಲ್ಲವೂ ಸುರಕ್ಷಿತವಲ್ಲ, ಹಣ ಕಳೆದುಕೊಳ್ಳುವ ಅಪಾಯ ಹೆಚ್ಚಿರುವುದರಿಂದ, ಸಾರ್ವಜನಿಕರು ಯಾವುದರಲ್ಲಿ ಹೂಡಿಕೆ ಮಾಡಬೇಕು ಎಂಬ ಹುಡುಕಾಟದಲ್ಲಿದ್ದಾರೆ, ಅವುಗಳಲ್ಲಿ ಅತ್ಯಂತ ಸುರಕ್ಷಿತವಾದದ್ದು SBI ಬ್ಯಾಂಕಿನ ಸ್ಥಿರ ಠೇವಣಿ.

ಎಸ್ ಬಿ ಐ ಬ್ಯಾಂಕಿನಲ್ಲಿ ನೀವು 7 ದಿನಗಳಿಂದ ಹಿಡಿದು 10 ವರ್ಷಗಳವರೆಗೆ ಸ್ಥಿರ ಠೇವಣಿಯನ್ನು ಇಡಬಹುದು, ನಿಮಗೆ ಉತ್ತಮ ಬಡ್ಡಿಯನ್ನು ನೀಡುತ್ತದೆ. ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡುವವರಿಗೆ ಆದಾಯ ತೆರಿಗೆ ಕಾಯ್ದೆಯ 80C ಅಡಿಯಲ್ಲಿ ತೆರಿಗೆ ಪ್ರಯೋಜನ ಕೂಡ ಸಿಗಲಿದೆ.

ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೀವು ಸ್ಥಿರ ಠೇವಣಿಯಲ್ಲಿ(FD) 180 ದಿನಗಳವರೆಗೆ 5 ಲಕ್ಷವನ್ನು ಹೂಡಿಕೆ ಮಾಡಿದರೆ, ಮೆಚುರಿಟಿ ಅವಧಿಯ(Maturity Period) ಕೊನೆಯಲ್ಲಿ ಎಷ್ಟು ಗಳಿಸಬಹುದು ಎಂದು ತಿಳಿದುಕೊಳ್ಳಿ.

SBI ಬ್ಯಾಂಕಿನಲ್ಲಿ 07 ದಿನಗಳಿಂದ 45 ದಿನಗಳವರೆಗೆ 3.50%, 46 ದಿನಗಳಿಂದ 179 ದಿನಗಳವರೆಗೆ 5.50%, 180 ದಿನಗಳಿಂದ 210 ದಿನಗಳವರೆಗೆ 6.00% ಮತ್ತು 211 ದಿನಗಳಿಂದ 1 ವರ್ಷಗಳ ಅವಧಿಗೆ 6.25 ಪ್ರತಿಶತ ಬಡ್ಡಿದರ(Intrest Rate) ಸಿಗಲಿದೆ.

180 ದಿನಗಳವರೆಗೆ ಸ್ಟೇಟ್ ಬ್ಯಾಂಕಿನಲ್ಲಿ 5 ಲಕ್ಷವನ್ನು ಸ್ಥಿರಾಠೇವಣಿಯೊಂದಿಗೆ ಹೂಡಿಕೆ ಮಾಡುವ ಸಾಮಾನ್ಯ ನಾಗರಿಕರಿಗೆ ಅವಧಿಯ ಕೊನೆಯಲ್ಲಿ ರೂ.5,14,902 ರೂ. ಸಿಗಲಿದೆ, ಹಿರಿಯ ನಾಗರಿಕರು ಅವಧಿಯ ಕೊನೆಯಲ್ಲಿ 5,15,903 ರೂ.ಗಳನ್ನು ಪಡೆಯಬಹುದು.

ನೀವು ಹೆಚ್ಚಿನ ಅವಧಿಗೆ FD ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯುವಿರಿ, ಹೀಗಾಗಿ ಹೂಡಿಕೆ ಮಾಡುವ ಮೊದಲು ಎಷ್ಟು ಅವಧಿಗೆ ಲಾಕ್ ಇನ್ ಮಾಡುವಿರಿ ಅನ್ನುವುದು ಬಹಳ ಮುಖ್ಯವಾಗಿರುತ್ತದೆ.

 

Leave a Comment

WhatsApp Group Join Now
Telegram Group Join Now