SBI ಗ್ರಾಹಕರಿಗೆ ಗುಡ್ ನ್ಯೂಸ್! 5 ವರ್ಷದ ಹೂಡಿಕೆಯ ಮೇಲೆ ಎಷ್ಟು ಬಡ್ಡಿ ಸಿಗಲಿದೆ ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ(SBI) 1,3 ಮತ್ತು 5 ವರ್ಷಗಳ ಸ್ಥಿರ ಠೇವಣಿಗಳಲ್ಲಿ (Fixed Deposit) 8 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಸಾಮಾನ್ಯರು ಮತ್ತು ಹಿರಿಯ ನಾಗರಿಕರು ಲಾಭವನ್ನು ಗಳಿಸಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಕೆಳಗಿನಂತಿವೆ.
SBI ದಲ್ಲಿ ನಾಮಿನಿ ವೈಶಿಷ್ಟ್ಯದ ಮೂಲಕ ಹೂಡಿಕೆದಾರರ ಕುಟುಂಬ ಸದಸ್ಯರು ಅಥವಾ ಸಂಗಾತಿಯು ನಿಶ್ಚಿತ ಠೇವಣಿಯ(Fixed Deposit) ಮುಕ್ತಾಯದ ಸಂಪೂರ್ಣ ಮೊತ್ತವನ್ನು ಪಡೆಯಬಹುದು ಎಂದು ತಿಳಿಸಿದೆ.
ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ SBI ಹಿರಿಯ ನಾಗರಿಕರಿಗೆ ಮತ್ತು ಸಾಮಾನ್ಯರಿಗೆ ವಿವಿಧ ಸ್ಥಿರ ಠೇವಣಿ (Fixed Deposit) ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಯು ಅಮೃತ್ ರೊಟ್ಟಿ ಎಂಬ ವಿಶೇಷ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ಸಾಮಾನ್ಯರಿಗೆ ಶೇಕಡ 7.25 ಮತ್ತು ಹಿರಿಯ ನಾಗರಿಕರಿಗೆ 7.75 ಶೇಕಡ ಬಡ್ಡಿದರವನ್ನು ನೀಡುತ್ತದೆ. ಅಲ್ಲದೆ ಹಿರಿಯ ನಾಗರಿಕರು ಮತ್ತು ಸಾಮಾನ್ಯರು 1,3, ಮತ್ತು 5 ವರ್ಷಗಳ ಸ್ಥಿರ ಠೇವಣಿಯ ಯೋಜನೆಗಳಿಂದ ಪ್ರಯೋಜನ ಪಡೆಯಬಹುದು.
SBI ಸ್ಥಿರ ಠೇವಣಿ ಅವಧಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಫಿಕ್ಸ್ಡ್ ಡೆಪಾಸಿಟ್ ಯೋಜನೆ ಮೇಲೆ ಕನಿಷ್ಠ 7 ದಿನಗಳಿಂದ ಗರಿಷ್ಠ 10 ವರ್ಷಗಳವರೆಗೆ ಠೇವಣಿ ಅವಧಿಯನ್ನು ಹೊಂದಿದೆ.
ಎಸ್‌ಬಿಐನಿಂದ ನಾಮಿನಿ ಸೌಲಭ್ಯವೇನು?: ಈ ಯೋಜನೆಯಲ್ಲಿ ಹೊಸ ನಾಮಿನಿ ಸೌಲಭ್ಯದ ಮೂಲಕ ಹುಡುಕಿದಾರರ ಕುಟುಂಬದ ಸದಸ್ಯರು ಇಲ್ಲವೇ ಅವರ ಸಂಗಾತಿಯು ಠೇವಣಿಯ ಅವಧಿ ಮುಗಿದ ಬಳಿಕ ಮೊತ್ತವನ್ನು ಪಡೆಯಲು ನಾಮ ನಿರ್ದೇಶನ ಮಾಡಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರಕಟಿಸಿದೆ.
SBI ಹಿರಿಯ ನಾಗರಿಕರಿಗೆ ನಿಗದಿತ ಠೇವಣಿ ದರಗಳು ಯಾವುವು?: ರೂ.10 ಸಾವಿರಗಿಂತ ಹೆಚ್ಚಿನ ಹೂಡಿಕೆ ಮಾಡಿದ ಹಿರಿಯ ನಾಗರಿಕರು SBU ಪಿಕ್ಸ್ ಡಿಪೋಸಿಟ್ ಗಳ ಮೇಲೆ ಶೇಕಡಾ 0.50 ಹೆಚ್ಚುವರಿ ಬಡ್ಡಿದರವನ್ನು ಪಡೆಯಬಹುದು.
ಸ್ವಯಂ ಅಪ್ಡೇಟ್ ಸಾಧ್ಯವಿದೆಯೇ?: ಹೌದು, ಉದಾಹರಣೆ ಮೂಲಕ ನೋಡುವುದಾದರೆ, ಮೂರು ವರ್ಷಗಳ ನಿಶ್ಚಿತ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ, ಅವಧಿಗಿಂತ ಹೆಚ್ಚುವರಿ ಅವಧಿಗೆ ಬದಲಾಯಿಸುವ ಸೌಲಭ್ಯವನ್ನು ಪಡೆಯಲಿದ್ದಾರೆ.
SBI 1 ವರ್ಷದ ಸ್ಥಿರ ಠೇವಣಿ ಬಡ್ಡಿ ದರಗಳು: ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಒಂದು ವರ್ಷದ ಅವಧಿಗೆ ಶೇಕಡ 7.30 ಬಡ್ಡಿದರವನ್ನು ನೀಡುತ್ತದೆ, ಆದರೆ ಸಾಮಾನ್ಯ ನಾಗರಿಕರಿಗೆ ಶೇಕಡ 6.80 ಬಡ್ಡಿದರವನ್ನು ಪಡೆಯಲಿದ್ದಾರೆ.
SBI 3-ವರ್ಷದ ಸ್ಥಿರ ಠೇವಣಿಗಳಿಗೆ ಬಡ್ಡಿ ದರಗಳು: ಮೂರು ವರ್ಷದ ಅವಧಿಗೆ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಶೇಕಡ 7.25 ಹಾಗೂ ಸಾಮಾನ್ಯ ನಾಗರಿಕರಿಗೆ 6.75 ಶೇಕಡ ಬಡ್ಡಿ ದರಗಳನ್ನು ನೀಡಲಾಗುತ್ತದೆ.
SBI 5 ವರ್ಷದ ಸ್ಥಿರ ಠೇವಣಿ ಬಡ್ಡಿ ದರಗಳು: 5 ವರ್ಷಗಳ ಅವಧಿಗೆ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಶೇಕಡ 7.50 ಮತ್ತು ಸಾಮಾನ್ಯರಿಗೆ 6.50 ಶೇಕಡ ಬಡ್ಡಿ ದರಗಳನ್ನು ನೀಡಲಾಗುತ್ತದೆ.
ಹಾಗಾದರೆ 8 ಲಕ್ಷ ಹಣವನ್ನು ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಿದರೆ, ಎಷ್ಟು ಲಾಭವನ್ನು ಪಡೆಯಬಹುದು? : ಈ ಯೋಜನೆಯಲ್ಲಿ 8 ಲಕ್ಷವನ್ನು ಒಂದು ವರ್ಷದ ಅವಧಿಗೆ ಸ್ಥಿರ ಠೇವಣಿ ಇಡುವುದರಿಂದ 8,55,803 ರೂ. ಆದಾಯವನ್ನು ಪಡೆಯಬಹುದು, ಮೂರು ವರ್ಷದ ಅವಧಿಗೆ 9,77,914 ರೂಪಾಯಿ ಹಾಗೂ 5 ವರ್ಷದ ಅವಧಿಗೆ 11,04,336 ರೂಪಾಯಿ ಆದಾಯವನ್ನು ಪಡೆಯಬಹುದು.
8 ಲಕ್ಷ ಹೂಡಿಕೆ ಮಾಡಿದ ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ದರವೆಷ್ಟು? ಹಿರಿಯ ನಾಗರಿಕರು 8 ಲಕ್ಷ ಮೊತ್ತವನ್ನು ಒಂದು ವರ್ಷದ ಅವಧಿ ಹೂಡಿಕೆ ಮಾಡಿದರೆ, 8,60,018 ರೂಪಾಯಿ ಆದಾಯವನ್ನು ಪಡೆಯಬಹುದು, ಮೂರು ವರ್ಷದ ಅವಧಿಗೆ ರೂ.9,92,438 ಹಾಗೂ 5 ವರ್ಷದ ಅವಧಿಗೆ 11,59,958 ರೂಪಾಯಿ ಆದಾಯವನ್ನು ಪಡೆಯಲಿದ್ದಾರೆ.