Income Tax: ಆದಾಯ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ! ಮಧ್ಯಮ ವರ್ಗದವರಿಗೆ ಜಾಕ್ ಫಾಟ್

Income Tax: ಆದಾಯ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ! ಮಧ್ಯಮ ವರ್ಗದವರಿಗೆ ಜಾಕ್ ಫಾಟ್

Income Tax News:

WhatsApp Group Join Now
Telegram Group Join Now

ಕೇಂದ್ರದ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರು 2025 ನೇ ಸಾಲಿನ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ, ಹಾಗೆಯೇ ಬಜೆಟ್ ನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿದೆ, ಆದಾಯ ತೆರಿಗೆ ಕಟ್ಟುವವರು, ಅವರಲ್ಲಿ ನೌಕರರ ವರ್ಗ ಈ ಬಜೆಟ್ ಮೇಲೆ ತೆರಿಗೆ ಮಿತಿ ಹೆಚ್ಚಿಸಬಹುದೆಂದು ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇವರ ನಿರೀಕ್ಷೆಯಂತೆಯೇ ಆದಾಯ ತೆರಿಗೆ ಮಿತಿಯನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಕಂಡುಬರುತ್ತದೆ, ಅದು ಹೇಗೆ ಎಂಬ ಮಾಹಿತಿಯು ಕೆಳಗಿನಂತಿವೆ;

ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗದವರನ್ನು ಅದರಲ್ಲೂ ತಿಂಗಳ ಸಂಬಳವನ್ನೇ ಅವಲಂಬಿಸಿ ಕೂತಿರುವವರಿಗೆ ತೀವ್ರವಾಗಿ ಭಾದಿಸುತ್ತಿದೆ. ಅವರಿಗೆ ಅನುಕೂಲವಾಗುವಂತೆ ತೆರಿಗೆ ಮಿತಿಯನ್ನು 18 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಹಲವು ತಜ್ಞರು ಕೇಂದ್ರ ಹಣಕಾಸು ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ. ಮನವಿ ಮಾಡಿಕೊಂಡವರ ಪೈಕಿ ಬ್ಯಾಂಕ್ ಬಜಾರ್ ಕಾರ್ಯನಿರ್ವಹಣಾ ಅಧಿಕಾರಿ ಆದಿಲ್ ಶೆಟ್ಟಿ ಕೂಡ ಒಬ್ಬರು.

ಆದಿಲ್ ಶೆಟ್ಟಿ ಅವರು ಮುಂಬರುವ ಬಜೆಟ್ ನಲ್ಲಿ 3 ಹೊಸ ಬದಲಾವಣೆಗಳನ್ನು ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ, ಮೊದಲನೆಯದು ತೆರಿಗೆ ಮಿತಿಯನ್ನು 18 ಲಕ್ಷ ರೂಪಾಯಿಗೆ ಹೆಚ್ಚಿಸುವುದು, ಎರಡನೆಯದು ತೆರಿಗೆ ಬ್ರಾಕೆಟ್ ಗಳನ್ನು ಪುನಃ ರಚನೆ ಮಾಡುವುದು ಮತ್ತು ಕೊನೆಯದು ಆದಾಯದ ಮೇಲೆ 30% ರಷ್ಟು ಪ್ರಮಾಣಿತ ಕಡಿತಗೊಳಿಸುವುದು ಹೀಗೆ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಹಲವು ಸಲಹೆಗಳನ್ನು ಕೇಂದ್ರ ಹಣಕಾಸು ಸಚಿವರಿಗೆ ನೀಡಿದ್ದಾರೆ.

ಅದಿಲ್ ಶೆಟ್ಟಿ ಹಾಗೂ ಹಲವರು ತೆರೆಗೆ ಮಿತಿಯನ್ನು ಹೆಚ್ಚಿಸಬೇಕೆಂಬ ಆಗ್ರಹ ಮಾಡುತ್ತಿರುವುದರಿಂದ ಜೊತೆಗೆ ತೆರಿಗೆ ಮಿತಿ ಹೆಚ್ಚಳ ಮಾಡಿದರೆ, ನೌಕರರು ಅದೇ ಉಳಿದ ಹಣದಿಂದ ಬೇರೊಂದು ರೂಪದಲ್ಲಿ ವ್ಯಯ ಮಾಡುತ್ತಾರೆ, ಆಗ ಮಾರುಕಟ್ಟೆಗೆ ಹಣದ ಹರಿವು ಜಾಸ್ತಿಯಾಗುತ್ತದೆ ಹಾಗೂ ಪರೋಕ್ಷ ತೆರಿಗೆಗಳು ಹೆಚ್ಚಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.

 

 

Leave a Comment

WhatsApp Group Join Now
Telegram Group Join Now