Ration Card ಹೊಂದಿದವರಿಗೆ ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ!

Ration Card ಹೊಂದಿದವರಿಗೆ ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ!

ಪಡಿತರ ಚೀಟಿಯು ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ, ಬಿಪಿಎಲ್ ಕಾರ್ಡ್ (BPL CARD) ಹೊಂದಿರುವವರು ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ. ಈ ಕಾರ್ಡ್ ಹೊಂದಿರುವವರಿಗೆ, ರಾಜ್ಯ ಸರ್ಕಾರವು ಆಗಾಗ ಸಿಹಿ ಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಮತ್ತೊಂದು ಸಿಹಿ ಸುದ್ದಿ ಒಂದನ್ನು ಕೊಟ್ಟಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

WhatsApp Group Join Now
Telegram Group Join Now

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರವು ಇದೀಗ ಸಿಹಿ ಸುದ್ದಿ ಒಂದನ್ನು ನೀಡಿದೆ, ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಫಲಾನುಭವಿಗಳಿಗೆ ಅಗತ್ಯವಿದ್ದಲ್ಲಿ ಸಿಟಿ Scanning ಹಾಗೂ MRI ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಸರ್ಕಾರವು ತಿಳಿಸಿದೆ.

ಸಿಎಂ ಸಿದ್ದರಾಮಯ್ಯನವರು, ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಈ ಸೇವೆಗೆ ಬಡವರು ಹೆಚ್ಚಿನ ಹಣ ಬರಿಸಬೇಕಿತ್ತು. ಆದ್ದರಿಂದ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ PPP ಮಾದರಿಯಲ್ಲಿ ಮಾಡಲಾಗುತ್ತಿರುವ MRI ಮತ್ತು ಸಿಟಿ ಸ್ಕ್ಯಾನ್ ಗಳನ್ನು ಬಡವರಿಗೆ ಉಚಿತವಾಗಿ ಮಾಡಲು ನಿರ್ಣಯಿಸಲಾಗಿದೆ.

ರೋಗಿಗಳು ಅನಗತ್ಯವಾಗಿ ಸ್ಕ್ಯಾನಿಗೆ ಒಳಪಡುವುದನ್ನು ತಪ್ಪಿಸಲು ಮತ್ತು ಯೋಜನೆಗೆ ಅರ್ಹ ಫಲಾನುಭವಿಗಳನ್ನು ತಲುಪುವುದನ್ನು ಖಚಿತಪಡಿಸಲು PHH ಫಲಾನುಭವಿಗಳಿಗೆ ಉಚಿತವಾಗಿ ಹಾಗೂ ಇತರರಿಗೆ 70% ರಷ್ಟು ವಿಧಿಸಲು ನಿರ್ಣಯಿಸಲಾಗಿದೆ. ಇನ್ಮುಂದೆ BPL ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ MRI ಹಾಗೂ ಸಿಟಿ ಸ್ಕ್ಯಾನ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

 

 

 

Leave a Comment

WhatsApp Group Join Now
Telegram Group Join Now