Arecanut: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್! ಕೇಂದ್ರ ಸಚಿವರು ಹೇಳಿದ್ದೇನು ಇಲ್ಲಿದೆ ಸಂಪೂರ್ಣ ಮಾಹಿತಿ
ಕೇಂದ್ರ ಸರ್ಕಾರವು ಅಡಿಕೆ(Arecanut) ಮರಗಳಿಗೆ ಹಾನಿ ಉಂಟಾಗಿ ನಷ್ಟ ಅನುಭವಿಸಿರುವ ರೈತರಿಗೆ ಕೇಂದ್ರ ಬಜೆಟ್ ನಲ್ಲಿ 67 ಕೋಟಿ ರೂಪಾಯಿ ಹಣವನ್ನು ನಷ್ಟ ಪರಿಹಾರವಾಗಿ ಬಿಡುಗಡೆಗೊಳಿಸುತ್ತಿದ್ದೇವೆ ಎಂದು ಕೇಂದ್ರದ ಖುಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದರು.
ಸಾಗರದ ಅಡಿಕೆ ಮಾರಾಟ ಬೆಳೆಗಾರರ ಸಂಘದ ವತಿಯಿಂದ ಸಂತೆ ಮೈದಾನದಲ್ಲಿ ನಡೆದ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ, ಕೇಂದ್ರದ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಆಗಮಿಸಿ ಅಡಿಕೆ ಬೆಳೆಗಾರರಿಗೆ ನಷ್ಟ ಪರಿಹಾರವನ್ನು ಒದಗಿಸುವಂತೆ ಆಶ್ವಾಸನೆಯನ್ನು ನೀಡಿದರು.
ಇದೇ ವಿಷಯದ ಬಗ್ಗೆ ಮಾತನಾಡಿದ ಸಚಿವರು, ನಾವು ಇಂದು ಪ್ರತಿ ಮನೆಯಲ್ಲೂ ಅಡಿಗೆಯನ್ನು ಬಳಸುತ್ತೇವೆ, ಪೂಜೆ ಇತ್ಯಾದಿ ಸಂದರ್ಭದಲ್ಲಿಯೂ ಅಡಿಕೆ ಗಣೇಶ ದೇವರಾಗಿ ಬದಲಾಗುತ್ತದೆ, ಈಗ ಎಲ್ಲ ಕ್ಷೇತ್ರದಲ್ಲೂ ಅಡಿಕೆಯ ಮಹತ್ವತೆ ಹೆಚ್ಚಿದೆ, ನಾನು ಈಗಾಗಲೇ ಕಷಿಮಂತಿಯನ್ನು ಭೇಟಿ ಮಾಡಿ ಬಂದೆ, ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿ ಇದೆ ಎಂದು ಮುಖ್ಯವಲ್ಲ, ರೈತರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದು ಮುಖ್ಯ ಎಂದು, ಯಾರು ಚಿಂತೆ ಮಾಡಬೇಡಿ ನಿಮ್ಮೊಂದಿಗೆ ನಾವು ಇದ್ದೇವೆ ಎಂದರು.
ರೈತರಿಗೆ ತಾವು ಬೆಳೆದ ಫಲಕ್ಕೆ ಸರಿಯಾದ ಹಣ ಸಿಗುವುದಿಲ್ಲ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ತಾವು ಬೆಳೆದ ಬೆಳೆಗೆ ತಕ್ಕ ಪ್ರತಿಫಲ ಸಿಗಬೇಕು. ಅಡಿಕೆ ಬೆಳೆಗೆ ಸಂಬಂಧಿಸಿದ ಹಾಗೆ ವೈಜ್ಞಾನಿಕ ಬೆಲೆ ಹೆಚ್ಚಿಸಲು ನಾವು ಸಿದ್ಧರಿದ್ದೇವೆ ಹಾಗೆಯೇ ಅಕ್ರಮ ಅಡಿಕೆ ಆಮದನ್ನು ತಪ್ಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಕಳೆದ ವರ್ಷದಲ್ಲಿ ಅಡಿಕೆ ಬೆಳೆಗೆ ಸಾಕಷ್ಟು ಹಾನಿ ಉಂಟಾಗಿದೆ, ಇದರಿಂದ ರೈತರಿಗೆ ತುಂಬಾ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅಡಿಕೆಗೆ ಬಾರಿಸುವ ರೋಗಗಳ ಬಗ್ಗೆ ಸಂಶೋಧನೆ ನಡೆಸಲು ಒಂದು ತಂಡವನ್ನು ರಚಿಸುತ್ತೇವೆ, ಅಡಿಕೆ ಮರಗಳಿಗೆ ಹಾನಿ ಉಂಟಾಗಿ ನಷ್ಟ ಅನುಭವಿಸುವ ರೈತರಿಗೆ ಈ ಬಾರಿ ಕೇಂದ್ರದ ಬಜೆಟ್ ನಲ್ಲಿ 67 ಕೋಟಿ ರೂಪಾಯಿ ಹಣವನ್ನು ಬಿಡುಗಡೆಗೊಳಿಸುತ್ತೇವೆ ಎಂದು ಹೇಳಿದರು.
16 ಸಂಸ್ಥೆಗಳಿಗೆ ಅಡಿಕೆ ಬಗ್ಗೆ ಸಂಶೋಧನೆ ನಡೆಸಿ ವರದಿ ನೀಡಲು ಹೇಳಿದ್ದೇವೆ;
ಇತ್ತೀಚಿಗೆ ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಎಂಬ ಮಹಾಮಾರಿ ರೋಗ ಬರುತ್ತೆ ಎನ್ನುವವದಂತಿಗಳು ಹರಿದಾಡುತ್ತಿದೆ, ಅದರ ಅಡಿಕೆಯನ್ನು ಅನೇಕ ಜನರು ಹಿಂದಿನಿಂದಲೂ ಬಳಸುತ್ತಿದ್ದಾರೆ. ಅಡಿಕೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ, ಅಡಿಕೆಯ ಬಗ್ಗೆ ಅಪಸ್ವರದ ವದಂತಿಗಳನ್ನು ದೂರು ಗೊಳಿಸಲು 16 ಸಂಸ್ಥೆಗಳಿಗೆ ಸಂಶೋಧನೆ ನಡೆಸಿ ವರದಿ ತಿಳಿಸಲು ಹೇಳಿದ್ದೇವೆ ಎಂದರು.