Gold Rate Today: ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ;
ಚಿನ್ನ ಬೇಡ ಎಂದು ಹೇಳುವವರು, ಕೈಯೆತ್ತಿ ಅಂದರೆ ಬಹುಶಹ ಯಾರು ಕೂಡ ಎತ್ತುವುದಿಲ್ಲ ಅನಿಸುತ್ತೆ. ಚಿನ್ನದ ವ್ಯಾಮೋಹವೇ ಆಗಿದೆ. ಆದರೆ ಚಿನ್ನ ದುಬಾರಿ ಎನ್ನುವುದು ವಾಸ್ತವವಾಗಿದೆ. ಆದರೆ ಈಗ ಚಿನ್ನದ ಬೆಲೆ ಇಳಿಕೆಯಾಗಲು ಆರಂಭವಾಗಿದೆ, ಇದು ಬಂಗಾರ ಪ್ರಿಯರಿಗೆ ಸಿಹಿ ಸುದ್ದಿಯಾಗಲಿದೆ.
ನಿರಂತರವಾಗಿ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಈಗ ಇಳಿಮುಖ ಹಾದಿಯಲ್ಲಿ ಸಾಗುತ್ತಿದೆ. ಇದರಿಂದ ಬಹುದಿನಗಳಿಂದ ಚಿನ್ನ ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದವರಿಗೆ ಖುಷಿಯಾದ ಸಂಗತಿಯಾಗಿದೆ. ಮಾರ್ಚ್ 25 ರಿಂದ ಸ್ವಲ್ಪ ಸ್ವಲ್ಪವೇ ಏರಿಕೆಯಾಗುತ್ತಿದ್ದ ಬಂಗಾರದ ಬೆಲೆಯು ಕಳೆದ 8 ದಿನಗಳ ಬಳಿಕ ಇದೀಗ ಇಳಿಕೆ ಕಂಡಿದೆ.
ದೇಶದಲ್ಲಿ ಈಗ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಳಿಕೆಯಾಗಿದೆ, 10 ಗ್ರಾಂ ಚಿನ್ನದ ಬೆಲೆ ಎಲ್ಲೆಲ್ಲಿ ಎಷ್ಟಿದೆ ಎನ್ನುವುದನ್ನು ತಿಳಿಯೋಣ.
ದೇಶದಲ್ಲಿ ಈಗ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?
ಒಂದು ಗ್ರಾಂ ಚಿನ್ನಕ್ಕೆ ರೂ.8,509, 8 ಗ್ರಾಂ ಚಿನ್ನಕ್ಕೆ ರೂ.68,072, 10 ಗ್ರಾಂ ಚಿನ್ನಕ್ಕೆ ರೂ.85,090, 100 ಗ್ರಾಂ ಚಿನ್ನಕ್ಕೆ ರೂ.8,50,900.
ದೇಶದಲ್ಲಿ ಈಗ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?
1 ಗ್ರಾಂ ಚಿನ್ನಕ್ಕೆ ರೂ.9,283, 8 ಗ್ರಾಂ ಚಿನ್ನಕ್ಕೆ ರೂ.74,264, 10 ಗ್ರಾಂ ಚಿನ್ನಕ್ಕೆ ರೂ.92,830, 100 ಗ್ರಾಂ ಚಿನ್ನಕ್ಕೆ ರೂ.9,28,300
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?
- ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.85,090
- ಚೆನ್ನೈನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.85,090
- ಮುಂಬೈನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.85,090
- ಕೋಲ್ಕತ್ತಾದಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.85,090
- ಹೈದರಾಬಾದಿನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.85,090
- ಕೇರಳದಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.85,090
- ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.85,240
ದೇಶದಲ್ಲಿ ಈಗ ಬಂಗಾರದ ಬೆಲೆಯಲ್ಲಿಯೂ ಇಳಿಕೆ ಕಂಡಿದೆ, ಅಂತರಾಷ್ಟ್ರೀಯ ಮಾರುಕಟ್ಟೆ ದರ ಡಾಲರ್ ಬಾಲ್ಯದ ವಿರುದ್ಧ ನಿರ್ಧಾರವಾಗುವ ಮೌಲ್ಯದ ಮೇಲೆ ದೇಶೀಯ ಮಾರುಕಟ್ಟೆಯ ಬೆಳ್ಳಿಯ ದರವು ಕೂಡ ನಿಗದಿಯಾಗುತ್ತದೆ.
ದೇಶದಲ್ಲಿ ಬೆಳ್ಳಿಯ ಬೆಲೆ ಎಷ್ಟು?
10 ಗ್ರಾಂ ಬೆಳ್ಳಿಗೆ 1,049 ರೂಪಾಯಿ 100 ಗ್ರಾಂ ಬೆಳ್ಳಿಗೆ ರೂ.10,490, 1000 ಗ್ರಾಂ ಬೆಳ್ಳಿಗೆ ರೂ.1,04,900
ದೇಶದಲ್ಲಿ 8 ದಿನಗಳ ಬಳಿಕ 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ.100 ಇಳಿಕೆಯಾಗಿದೆ, ಬಂಗಾರದಂತೆ 1 ಕೆಜಿ ಬೆಳ್ಳಿಗೆ 100 ರೂಪಾಯಿ ಕಡಿಮೆಯಾಗಿದೆ.