Gold Rate: ಚಿನ್ನ ಪ್ರಿಯರಿಗೆ ಬಿಗ್ ಶಾಕ್! ಭರ್ಜರಿ ಬೆಲೆ ಏರಿಕೆ! ಸಂಪೂರ್ಣ ಮಾಹಿತಿ ಇಲ್ಲಿದೆ

Gold Rate: ಚಿನ್ನ ಪ್ರಿಯರಿಗೆ ಬಿಗ್ ಶಾಕ್! ಭರ್ಜರಿ ಬೆಲೆ ಏರಿಕೆ! ಸಂಪೂರ್ಣ ಮಾಹಿತಿ ಇಲ್ಲಿದೆ.

ಚಿನ್ನ ಪ್ರಿಯರಿಗೆ ಇದೊಂದು ಶಾಕಿಂಗ್ ನ್ಯೂಸ್, ಚಿನ್ನದ ಬೆಲೆ ಇದೆ ಮೊದಲ ಬಾರಿಗೆ ಬರೋಬ್ಬರಿ ರೂ. 80,000 ಗಡಿ ದಾಟಿದೆ, 24 ಕ್ಯಾರೆಟ್ ಚಿನ್ನದ ಬೆಲೆಯು ಇದೇ ಮೊದಲ ಬಾರಿಗೆ ಬರೋಬ್ಬರಿ 80,000 ಗಡಿದಾಟಿದೆ. ಚಿನ್ನದ ಬೆಲೆ ಜಿಗಿತ ಕಂಡಿರುವುದನ್ನು ಇಂಡಿಯಾ ಬುಲೆಟಿನ್ ಮತ್ತು ಜುವೆಲರ್ಸ್ ಅಸೋಸಿಯೇಷನ್ ಖಚಿತಪಡಿಸಿದೆ. ಇತ್ತೀಚಿನ ವರದಿಯ ಪ್ರಕಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ರೂ.80,194 ಆಗಿದೆ, ಚಿನ್ನದ ಬೆಲೆಯು 80,000 ಗಡಿ ದಾಟಿರುವುದು ಇದೆ ಮೊದಲು. ಚಿನ್ನದ ಬೆಲೆಯು ಕಳೆದ ನಾಲ್ಕು ಐದು ತಿಂಗಳಿಂದ 80 ಸಾವಿರದ ಗಡಿಯ ಆಸು ಪಾಸಿನಲ್ಲಿತ್ತು, ಇದೀಗ ಚಿನ್ನದ ಬೆಲೆಯು 80 ಸಾವಿರದ ದಾಟಿದೆ, ಇದೊಂದು ಚಿನ್ನಪ್ರಿಯರಿಗೆ ಭರ್ಜರಿ ಶಾಕಿಂಗ್ ನ್ಯೂಸ್ ಆಗಿದೆ.

WhatsApp Group Join Now
Telegram Group Join Now

ಸಾಮಾನ್ಯವಾಗಿ ಷೇರು ಮಾರುಕಟ್ಟೆಯ ಏರಿಳಿತ, ಯುದ್ಧ ಹಾಗೂ ಪ್ರತಿಕೂಲ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ಏರಿಕೆ ಆಗುವುದು ಸಹಜ, ಆದರೆ ಈಗ ವಿದೇಶದಲ್ಲಿ ಅಂತಹ ಗಂಭೀರ ಕಲಹಗಳು ಇಲ್ಲ, ಹಮಾಸ್ ಹಾಗೂ ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಉಕ್ರೆನ್ ಹಾಗೂ ರಷ್ಯಾ ನಡುವೆ ಸಹ ಯುದ್ಧ ನಿಲ್ಲುವ ಲಕ್ಷಣಗಳು ಕಾಣಿಸುತ್ತಿದೆ, ಈಗಾಗಲೇ ರಷ್ಯಾ ಉಕ್ರೇನಿನ ಮೇಲೆ ತಕ್ಷಣವೇ ಯುದ್ಧ ನಿಲ್ಲಿಸಬೇಕು ಎಂದು ಕಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಆದರೆ ಎಲ್ಲೆಡೆ ಯುದ್ಧ ವಿರಾಮ ಹಾಗೂ ಶಾಂತಿ ನೆಲೆಸುತ್ತಿದ್ದರು ಚಿನ್ನದ ಬೆಲೆ ಏರಿಕೆ ಆಗುತ್ತಿರುವುದಕ್ಕೆ ಬೇರೆಯದ್ದೆ ಕಾರಣ ಇದೆ.

ಕಳೆದ 5-6 ತಿಂಗಳಿನಿಂದ ಚಿನ್ನದ ಬೆಲೆಯು 75,000 ದಿಂದ 78,79 ಸಾವಿರದ ಆಸು ಪಾಸಿನ ಗಡಿಯಲ್ಲಿತ್ತು, ಚಿನ್ನದ ಬೆಲೆಯು 80,000 ಗಡಿ ದಾಟಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು, ಇದೀಗ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿರುವುದರಿಂದ ಚಿನ್ನದ ಬೆಲೆ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ. ಅವರು ಹೊಸ ತೆರಿಗೆ ನೀತಿಯನ್ನು ಜಾರಿ ಮಾಡುವ ಹಿನ್ನೆಲೆಯಲ್ಲಿ, ಹುಡುಕಿದಾರರು ಸದಾ ಸುರಕ್ಷಿತ ಎಂದು ನಂಬಿರುವ ಚಿನ್ನದ ಮೇಲೆ ಹೂಡಿಕೆ ಮಾಡಲು ಆರಂಭಿಸಿದ್ದಾರೆ, ಅಲ್ಲದೆ ಡಾಲರ್ ದರವು ಕೂಡ ಹೆಚ್ಚಳವಾಗುತ್ತಿರುವುದು ಚಿನ್ನದ ದರ(Gold Rate) ಏರಿಕೆಗೆ ಕಾರಣವಾಗಿದೆ.

ಚಿನ್ನದ ಬೆಲೆಯು ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ, 80000 ದಿಂದ 1 ಲಕ್ಷ ತಲುಪುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ತೆರಿಗೆ ನೀತಿಯನ್ನು ಸುಧಾರಣೆ ಮಾಡುವುದಾಗಿ ಹೇಳಿದ್ದಾರೆ, ಏನೆಂದರೆ ಅಮೇರಿಕಾದ ವಸ್ತುಗಳಿಗೆ ಯಾವ ದೇಶವು ಹೆಚ್ಚಿನ ತೆರಿಗೆಯನ್ನು ವಿಧಿಸುತ್ತದೆಯೋ, ಆದೇಶದ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಕೆನಡಾ ಹಾಗೂ ಚೀನಾ ಮೇಲೆ ಭರ್ಜರಿ ತೆರಿಗೆ ವಿಧಿಸುವುದಕ್ಕೆ ಅಮೆರಿಕ ಸಿದ್ಧವಾಗಿದೆ, ಇದರ ಬೆನ್ನಲ್ಲೇ ಚಿನ್ನದ ಬೆಲೆಯು 80,000 ಗಡಿ ದಾಟಿದೆ.

 

 

Leave a Comment

WhatsApp Group Join Now
Telegram Group Join Now